ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅನಾಹುತ: ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ; ಸಚಿವ ಹಾಲಪ್ಪ ಆಚಾರ್
ಅವಘಡದಲ್ಲಿ ಗಾಯಗೊಂಡಿದ್ದವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೂವರ ಸಾವನ್ನಪ್ಪಿದ್ದಾರೆ.

ಹುಬ್ಬಳ್ಳಿ: ನಗರದ ತಾರಿಹಾಳ ಕೈಗಾರಿಕಾ ಪ್ರದೇಶದ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ (fire accident) ಕಾಣಿಸಿಕೊಂಡಿರುವಂತಹ ಘಟನೆ ನಡೆದಿದೆ. ಅವಘಡದಲ್ಲಿ ಗಾಯಗೊಂಡಿದ್ದವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೂವರ ಸಾವನ್ನಪ್ಪಿದ್ದಾರೆ. ವಿಜಯಲಕ್ಷ್ಮೀ(34), ಗೌರವ್ವ(45), ಮಾಳೇಶ್(27) ಮೃತರು. ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ನಿನ್ನೆ ಅಗ್ನಿ ಅನಾಹುತ ಸಂಭವಿಸಿತ್ತು.
5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಹಾಲಪ್ಪ ಆಚಾರ್
ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಘೋಷಣೆ ಮಾಡಿದರು. ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ನಿನ್ನೆ ಅಗ್ನಿ ಅನಾಹುತ ಸಂಭವಿಸಿದ್ದು, ವಿಜಯಲಕ್ಷ್ಮೀ(34), ಗೌರವ್ವ(45), ಮಾಳೇಶ್(27) ಮೃತಪಟ್ಟಿದ್ದರು.
ಅಗ್ನಿ ಅವಘಡ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು
ಅಗ್ನಿ ಅವಘಡ ಪ್ರಕರಣದಿಂದ ತಾರಿಹಾಳ ಗ್ರಾಮಸ್ಥರು ರೊಚ್ಚಿಗೆದಿದ್ದಾರೆ. ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕಡೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿವೆ. ಹೇಳೋದು ಒಂದ್ ಕೆಲ್ಸ, ಒಳಗಡೆ ಮತ್ತೊಂದು ಕೆಲ್ಸ ಮಾಡಿಸ್ತಾರೆ. ಇಂತಹ ಪ್ರಕರಣ ನಡೆದಿರುವ ಹಿಂದೆ ಅನೇಕ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಮಾಲೇಶ ಹದ್ದನ್ನವರ್ ಕುಟುಂಬದಲ್ಲಿ ವಿಧಿಯಾಟ
ಮಾಲೇಶ ಹದ್ದನ್ನವರ್ ಕುಟುಂಬದಲ್ಲಿ ಈಗ ಕತ್ತಲೆ ಆವರಿಸಿದ್ದು, ಒಂದೂವರೆ ವರ್ಷದ ಹಿಂದಷ್ಟೇ ಮಾಳೇಶ ಮದುವೆ ಆಗಿದ್ದ. ಈಗ ಆರು ತಿಂಗಳ ಹೆಣ್ಣು ಮಗು ಇದೆ. ಇಂಜಿನಿಯರ್ ಆಗಿ ಇತ್ತೀಚಿಗಷ್ಟೇ ಅವನು ಈ ಕಂಪನಿ ಸೇರಿದ್ದ. ಕಾರ್ಮಿಕರಿಗೆ ಸಂಬಳ ನೀಡಲೆಂದು ಕಾರ್ಖಾನೆಗೆ ಬಂದಿದ್ದು, ಸ್ಫೋಟಕ್ಕೆ ಅವನ ದೇಹ ಗುರುತು ಸಿಗದಷ್ಟು ಕರಕಲಾಗಿತ್ತು. ಇತ್ತೀಚೆಗೆ ಅವನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಪುಷ್ಪ ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ; 1 ಕೋಟಿ ಮೌಲ್ಯದ ಗಾಂಜಾ ಜಪ್ತಿ
ಪಾಲಿಕೆಯ ಆಟೋ ಟಿಪ್ಪರ ಅಪಘಾತ, ಚಾಲಕ ಸಾವು
ಹುಬ್ಬಳ್ಳಿ: ಪಾಲಿಕೆಯ ಆಟೋ ಟಿಪ್ಪರ ಅಪಘಾತವಾಗಿದ್ದು, ಚಾಲಕ ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಎತ್ತುವ ಆಟೋ ಟಿಪ್ಪರ್ ಅಪಘಾತಕ್ಕೀಡಾಗಿದೆ. ಗೋಪನಕೊಪ್ಪದ ನಿವಾಸಿ ದುರ್ಗಪ್ಪ ಇಲಕಲ್ಲ (38) ಮೃತ ಪಟ್ಟ ಚಾಲಕ. ಆಟೋ ಟಿಪ್ಪರ್ ಎರ್ ಲಿಪ್ಟ್ ದುರಸ್ತಿ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ತಲೆಯ ಮೇಲೆ ಎರ್ ಲಿಫ್ಟ್ ಕಂಟೇನರ್ ಮುಗುಚಿ ಬಿದಿದ್ದು, ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಸಾವನ್ನಪ್ಪಿದ್ದಾನೆ.
ಚಂದಾಪುರ ಪಟ್ಟಣದಲ್ಲಿ MRF ಟೈರ್ ಶೋರೂಂ ಕಳ್ಳತನ
ಕಲಬುರಗಿ: ಚಂದಾಪುರ ಪಟ್ಟಣದಲ್ಲಿ MRF ಟೈರ್ ಶೋರೂಂ ಕಳ್ಳತನವಾಗಿರುವಂತಹ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿ ನಡೆದಿದೆ. 20 ಲಕ್ಷ ರೂಪಾಯಿ ಮೌಲ್ಯದ 53 ಲಾರಿ ಟೈರ್‌ಗಳ ಕಳ್ಳತನವಾಗಿದ್ದು, ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ, ಶೆಟರ್ ಮುರಿದು ಕಳ್ಳರು ಟೈರ್ ಹೊತ್ತೊಯ್ದಿದ್ದಾರೆ. ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕೆಲ ಸಿಸಿ ಕ್ಯಾಮರಾ ಕ್ಲೋಸ್ ಮಾಡಿದ್ದ ಖದೀಮರು, ಕೆಲ ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಕಳೆದ 6 ತಿಂಗಳಲ್ಲಿ ಮೂರನೇ ಬಾರಿ ಎಮ್‌ಆರ್‌ಎಫ್ ಟೈರ್ ಶೋ ರೂಂ ಕಳ್ಳತನವಾಗಿದ್ದು, ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
Published On - 11:30 am, Sun, 24 July 22




