ದೆಹಲಿ ವಿಮಾನ ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಹುಬ್ಬಳ್ಳಿ ಮಹಿಳೆ, ಇದು ನಮ್ಮ ಕಿರಿಯ ಪ್ರಯಾಣಿಕ!
ಹುಬ್ಬಳ್ಳಿಯ ಮಹಿಳೆಯೊಬ್ಬರು ಮಂಗಳವಾರ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯ ತಿಳಿದು ದೆಹಲಿ ವಿಮಾನ ನಿಲ್ದಾಣದ ಆಡಳಿತವು ಮಗುವನ್ನು ಸ್ವಾಗತಿಸಿದೆ.
ದೆಹಲಿ: ಹುಬ್ಬಳ್ಳಿಯ ಮಹಿಳೆಯೊಬ್ಬರು ಮಂಗಳವಾರ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯ ತಿಳಿದು ದೆಹಲಿ ವಿಮಾನ ನಿಲ್ದಾಣದ ಆಡಳಿತವು ಮಗುವನ್ನು ಸ್ವಾಗತಿಸಿತು ಮತ್ತು ಇದು ನಮ್ಮ ಅತ್ಯಂತ ಕಿರಿಯ ಪ್ರಯಾಣಿಕ ಎಂದು ಕರೆದಿದೆ. ಕಿರಿಯ ಪ್ರಯಾಣಿಕರಿಗೆ ಸ್ವಾಗತ! ಟರ್ಮಿನಲ್ 3, ಮೇದಾಂತ ಫೆಸಿಲಿಟಿಯಲ್ಲಿ ಮೊದಲ ಮಗುವಿನ ಆಗಮನಕ್ಕೆ ನಮಗೆ ಸಂತಸವಾಗುತ್ತಿದೆ, ಇದನ್ನು ನಾವು ಹಬ್ಬದಂತೆ ಆಚರಿಸುತ್ತೇವೆ. ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ದೆಹಲಿ ವಿಮಾನ ನಿಲ್ದಾಣದ ನಿರ್ವಾಹಕರು ಟ್ವೀಟ್ ಮಾಡಿದ್ದಾರೆ.
ಮಹಿಳೆಗೆ ಟರ್ಮಿನಲ್ 3ನಲ್ಲಿ ಹೊಟ್ಟೆ ಕಾಣಿಸಿಕೊಂಡಾಗ ಅವರು ವಾಶ್‌ರೂಮ್‌ಗೆ ಹೋಗಿದ್ದಾರೆ, ಅದೃಷ್ಟವಶಾತ್ ನಮ್ಮ ವೈದ್ಯಕೀಯ ಸೌಲಭ್ಯವು ಹತ್ತಿರದಲ್ಲಿಯೇ ಇದ್ದ ಕಾರಣ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಕರೆತರಲಾಯಿತು, ನಂತರ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆರೋಗ್ಯವಂತ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಾಳೆ. ಈ ಮಗುವಿನ ಮೊದಲ ಅಳುವೇ ನಮ್ಮ ವಿಮಾನ ನಿಲ್ದಾಣದಲ್ಲಿ ಆಗಮನಕ್ಕೆ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: 75ರ ವಯಸ್ಸಿನಲ್ಲೂ ಮತ್ತೊಂದು ಮದ್ವೆಯಾದ ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್, ಮೃತ ಪತ್ನಿಯ ಅಕ್ಕನನ್ನೇ ಕೈಹಿಡಿದ
ದಂಪತಿಗಳು ಹುಬ್ಬಳ್ಳಿಗೆ ಹೋಗುವ ವಿಮಾನಕ್ಕಾಗಿ ಕಾಯುತ್ತಿದ್ದರು. ಈ ಸಮಯದಲ್ಲಿ ಟರ್ಮಿನಲ್ 3ಯಲ್ಲಿ ಆಕೆಗೆ ಹೊಟ್ಟೆ ನೋವು ಬಂದು ಅಲ್ಲಿಯೇ ಹೆರಿಗೆ ಆಗಿದೆ. ಟರ್ಮಿನಲ್ 3ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿ ಆಕೆಗೆ ಹೆರಿಗೆ ಮಾಡಲಾಗಿದೆ ಎಂದು ವೈದ್ಯರು ಹೇಳಿದರು.
ಮಹಿಳೆಯನ್ನು ಬೆಳಿಗ್ಗೆ 9:20 ರ ಸುಮಾರಿಗೆ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮಗು ಬೆಳಿಗ್ಗೆ 9:40ರ ಸುಮಾರಿಗೆ ಜನಿಸಿತು ಎಂದು ವರದಿಯಾಗಿದೆ. ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇದಾಂತ ಕ್ಲಿನಿಕ್‌ನಲ್ಲಿ ಜನಿಸಿದ ಮೊದಲ ಮಗು ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬಳಿಕ ಮಹಿಳೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Thu, 17 November 22