AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ ಕಬ್ಬು ಬೆಳೆ ಸುಟ್ಟು ಭಸ್ಮ! ಪರಿಹಾರಕ್ಕೆ ರೈತ ಆಗ್ರಹ

ಮೈಸೂರಿನ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲೂ ಇಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು ಬೆಳೆ ನಾಶವಾಗಿದೆ. ಆಕಸ್ಮಿಕ ಬೆಂಕಿಗೆ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ.

ಹುಬ್ಬಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ ಕಬ್ಬು ಬೆಳೆ ಸುಟ್ಟು ಭಸ್ಮ! ಪರಿಹಾರಕ್ಕೆ ರೈತ ಆಗ್ರಹ
ಕಬ್ಬು ಬೆಳೆಗೆ ಬೆಂಕಿ ತಗುಲಿದೆ
TV9 Web
| Updated By: sandhya thejappa|

Updated on:Feb 13, 2022 | 2:55 PM

Share

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ವಿದ್ಯುತ್ ಲೈನ್ ತಂತಿ (Electrical Wire) ತಗುಲಿ ಕಬ್ಬು (Sugaracane) ಬೆಳೆ ಸುಟ್ಟು ಭಸ್ಮವಾಗಿದೆ. ರೈತ ನಿಂಗಪ್ಪ ಭರಮಪ್ಪ ಕುರಿಯವರಿಗೆ ಸೇರಿದ 2 ಎಕರೆಯಲ್ಲಿದ್ದ ಬೆಳೆ ಸುಟ್ಟು ಹೋಗಿದೆ. ಹೆಸ್ಕಾಂ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿರುವುದಾಗಿ ಆರೋಪಿಸುತ್ತಿರುವ ರೈತ, ಸೂಕ್ತ ಪರಿಹಾರ ನೀಡಬೇಕೆಂದು ರೈತ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.

ಇನ್ನು ಮೈಸೂರಿನ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲೂ ಇಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು ಬೆಳೆ ನಾಶವಾಗಿದೆ. ಆಕಸ್ಮಿಕ ಬೆಂಕಿಗೆ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ. ಕುರುಬೂರು ಗ್ರಾಮದ ಶಾಂತರಾಜು ಎಂಬವರಿಗೆ ಸೇರಿದ ಎರಡು ಎಕರೆ ಕಬ್ಬು ಸುಟ್ಟು ಕರಕಲಾಗಿದೆ. ಕಬ್ಬು ನಾಶವಾಗಿದ್ದಕ್ಕೆ ರೈತ ಕಂಗಾಲಾಗಿದ್ದಾರೆ. ಪರಿಹಾರ ನೀಡುವಂತೆ ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ಅಕ್ರಮವಾಗಿ ಕಡಲೆ ಬೆಳೆ ಕಟಾವು: ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಲಗೋಡ ಗ್ರಾಮದಲ್ಲಿ ದುಷ್ಕರ್ಮಿಗಳು ಅಕ್ರಮವಾಗಿ ರಾತ್ರೋ ರಾತ್ರಿ ಕಡಲೆ ಬೆಳೆ ಕಟಾವಿಗೆ ಮುಂದಾಗಿದ್ದರು. ರೈತ ಸುಭಾಷ್ ಪಾಟೀಲ್ ಜಮೀನಿನಲ್ಲಿ ಬೆಳೆದಿದ್ದ ಕಡಲೆ ಬೆಳೆಯನ್ನು ಕಟಾವು ಮಾಡಲು ಬಂದಿದ್ದರು. ಕಡಲೆ ಕಟಾವು ಮಾಡೋದನ್ನ ಜಮೀನಿನ ಮಾಲೀಕನಿಗೆ ಅಕ್ಕ ಪಕ್ಕದ ಜಮೀನಿನ ರೈತರು ಮಾಹಿತಿ ನೀಡಿದ್ದಾರೆ. ಮಾಲೀಕ ಜಮೀನಿಗೆ ಬರುವಷ್ಟರಲ್ಲಿ ಕಟಿಂಗ್ ಮಷಿನ್ ಜಮೀನಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಎಬಿಜಿ ಶಿಪ್‌ಯಾರ್ಡ್ ಒಂದು ಹಗರಣ ಎಂದು ನಾವು ಮೊದಲೇ ಎಚ್ಚರಿಸಿದ್ದೆವು: ಕಾಂಗ್ರೆಸ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ಗೆ​ ಕರೆ ಮಾಡಿ ಖಡಕ್​ ಎಚ್ಚರಿಕೆ ನೀಡಿದ ಯುಎಸ್​ ಅಧ್ಯಕ್ಷ ಜೋ ಬೈಡನ್​

Published On - 2:55 pm, Sun, 13 February 22