ಧಾರವಾಡ ರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ; ವಿಡಿಯೋ ವೈರಲ್

ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ನಡು ಬೀದಿಯಲ್ಲೇ ಸತ್ತೂರ ನಿವಾಸಿಯಾಗಿರುವ ಮಹಿಳೆಯ ಕೈಯನ್ನು ಹಿಡಿದು ಎಳೆದಾಡಿದ್ದಾರೆ. ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ.

ಧಾರವಾಡ ರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ; ವಿಡಿಯೋ ವೈರಲ್
ಮಹಿಳೆಯನ್ನು ಎಳೆದಾಡುತ್ತಿರುವುದು

ಧಾರವಾಡ: ಜೆಡಿಎಸ್ ಮುಖಂಡ (JDS Leader) ರಸ್ತೆಯಲ್ಲಿ ಮಹಿಳೆಯೊಬ್ಬರ ಕೈಹಿಡಿದು ಎಳೆದಾಡಿದ ಘಟನೆ ಧಾರವಾಡ ನಗರದ ಸತ್ತೂರ ಬಡಾವಣೆಯಲ್ಲಿ ನಡೆದಿದೆ. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ವಿರುದ್ಧ ಕೈಹಿಡಿದು ಎಳೆದಾಡಿದ ಆರೋಪ ಕೇಳಿಬಂದಿದೆ. ಶ್ರೀಕಾಂತ ಜಮನಾಳ ಸತ್ತೂರಿನ ಮಹಿಳೆ ಮನೆಗೆ ತೆರಳಿದ್ದರು. ಈ ವೇಳೆ ಶ್ರೀಕಾಂತ ಮಹಿಳೆಯ ಕೈಹಿಡಿದು ಎಳೆದಾಡಿದ್ದಾರೆ. ಮಹಿಳೆಯ ಕೈಹಿಡಿದು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ನಡು ಬೀದಿಯಲ್ಲೇ ಸತ್ತೂರ ನಿವಾಸಿಯಾಗಿರುವ ಮಹಿಳೆಯ ಕೈಯನ್ನು ಹಿಡಿದು ಎಳೆದಾಡಿದ್ದಾರೆ. ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನೀಡಲು ಮಹಿಳೆ ನಿರಾಕರಿಸುತ್ತಿದ್ದು, ವಿದ್ಯಾಗಿರಿ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಶ್ರೀಕಾಂತ ಜಮನಾಳರನ್ನು ಹುಡುಕುತ್ತಿದ್ದಾರೆ. ಮೊಬೈಲ್​ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ.

7 ಬಾರಿ ಕಳ್ಳತನ
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕುರುಬರ ಹೊಸಹಳ್ಳಿಯಲ್ಲಿರುವ ಮಾರಮ್ಮ ದೇಗುಲದ ಹುಂಡಿ ಹಣ ಕಳ್ಳತನವಾಗಿದೆ. ದಂಡು ಮಾರಮ್ಮ ದೇವಾಲಯದಲ್ಲಿ 7 ಬಾರಿ ಕಳ್ಳತನವಾಗಿದ್ದು, ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಬಾಗಿಲು ಹಾಕಿದ್ದಾಗ ಕಳ್ಳರು ಈ ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ

Viral Video: ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ ಪರಿಸ್ಥಿತಿ ಏನಾಯ್ತು ನೋಡಿ!

Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ

(JDS leader has dragged a woman and its video viral on social media)

Click on your DTH Provider to Add TV9 Kannada