Hubballi-Dharwad Municipal Election Results 2021: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದವರ ಸಂಪೂರ್ಣ ಪಟ್ಟಿ ಇಲ್ಲಿದೆ

TV9 Digital Desk

| Edited By: guruganesh bhat

Updated on:Sep 06, 2021 | 3:53 PM

Karnataka Civil Body Polls Result 2021: ಹುಬ್ಬಳ್ಳಿ ಧಾರವಾಡದ ಜನರು ಆಯ್ಕೆ ಮಾಡಿರುವ ಜನಪ್ರತಿನಿಧಿಗಳ ಪಟ್ಟಿಯನ್ನು ನೀವಿಲ್ಲಿ ತಿಳಿಯಬಹುದು.

Hubballi-Dharwad Municipal Election Results 2021: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದವರ ಸಂಪೂರ್ಣ ಪಟ್ಟಿ ಇಲ್ಲಿದೆ
ಜಗದೀಶ್ ಶೆಟ್ಟರ್ ಮತ್ತು ಪ್ರಲ್ಹಾದ ಜೋಶಿ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಪಾಲಿಕೆ ಚುನಾವಣೆಯ ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿಯ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಿಡಿತವೂ ಇರುವ ಈ ಪ್ರದೇಶ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ಅವರುಗಳ ತವರೂ ಹೌದು. ಹುಬ್ಬಳ್ಳಿ ಧಾರವಾಡದ ಜನರು ಆಯ್ಕೆ ಮಾಡಿರುವ ಜನಪ್ರತಿನಿಧಿಗಳ ಪಟ್ಟಿಯನ್ನು ನೀವಿಲ್ಲಿ ತಿಳಿಯಬಹುದು.

ಸೆಪ್ಟೆಂಬರ್ 3ರಂದು 82 ವಾರ್ಡ್​ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 39, ಕಾಂಗ್ರೆಸ್ 33, ಪಕ್ಷೇತರ 6, AIMIMಗೆ 3 ಸ್ಥಾನ ದೊರೆತಿದೆ. ಜೆಡಿಎಸ್ ಅಭ್ಯರ್ಥಿ 1 ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳ ಹೆಸರು ಇಂತಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಫಲಿತಾಂಶ ಪ್ರಕಟ

ವಾರ್ಡ್ ನಂಬರ್ 1 – ಬಿಜೆಪಿ – ಅನಿತಾ ಚಳಗೇರಿ ವಾರ್ಡ್ ನಂಬರ್ 2 – ಕಾಂಗ್ರೆಸ್ – ಸುರವ್ವ ಪಾಟೀಲ್ ವಾರ್ಡ್ ನಂಬರ್ 3 – ಬಿಜೆಪಿ – ಈರೇಶ ಅಂಚಟಗೇರಿ ವಾರ್ಡ್ ನಂಬರ್ 4 – ಕಾಂಗ್ರೆಸ್ – ರಾಜಶೇಖರ್ ವಾರ್ಡ್ ನಂಬರ್ 5 – ಬಿಜೆಪಿ – ನಿತಿನ್ ಇಂಡಿ ವಾರ್ಡ್ ನಂಬರ್ 6 – ಕಾಂಗ್ರೆಸ್ – ದಿಲ್ಶಾದ್ ಬೇಗಂ ನದಾಫ್ ವಾರ್ಡ್ ನಂಬರ್ 7 – ಕಾಂಗ್ರೆಸ್ – ದೀಪಾ ನೀರಲಕಟ್ಟಿ ವಾರ್ಡ್ ನಂಬರ್ 8 – ಬಿಜೆಪಿ – ಶಂಕರ ಶೆಳಕೆ ವಾರ್ಡ್ ನಂಬರ್ 9 – ಬಿಜೆಪಿ – ರತ್ನಾಬಾಯಿ ನಾಜರೆ ವಾರ್ಡ್ ನಂಬರ್ 10 – ಬಿಜೆಪಿ – ಚಂದ್ರಕಲಾ ಕೊಟಬಾಗಿ ವಾರ್ಡ್ ನಂಬರ್ 11 – ಬಿಜೆಪಿ – ಮಂಜುನಾಥ ಬಟ್ಟೆಣ್ಣವರ ವಾರ್ಡ್ ನಂಬರ್ 12 – ಬಿಜೆಪಿ – ವಿಜಯಾನಂದ ಶಟ್ಟಿ ವಾರ್ಡ್ ನಂಬರ್ 13 – ಬಿಜೆಪಿ – ಸುರೇಶ ಬೆದರೆ ವಾರ್ಡ್ ನಂಬರ್ 14 – ಕಾಂಗ್ರೆಸ್ – ಶಂಭುಗೌಡ ಸಾಲ್ಮನಿ ವಾರ್ಡ್ ನಂಬರ್ 15 – ಬಿಜೆಪಿ – ವಿಷ್ಣುತೀರ್ಥ ಕೊರ್ಲಹಳ್ಳಿ ವಾರ್ಡ್ ನಂಬರ್ 16 – ಕಾಂಗ್ರೆಸ್ – ಪರವಿನ್ ದೇಸಾಯಿ ವಾರ್ಡ್ ನಂಬರ್ 17 – ಕಾಂಗ್ರೆಸ್ – ಗಣೇಶ ಮುಧೋಳ ವಾರ್ಡ್ ನಂಬರ್ 18 – ಬಿಜೆಪಿ – ಶಿವು ಹಿರೇಮಠ ವಾರ್ಡ್ ನಂಬರ್ 19 – ಬಿಜೆಪಿ – ಜ್ಯೋತಿ ಪಾಟೀಲ್ ವಾರ್ಡ್ ನಂಬರ್ 20 – ಕಾಂಗ್ರೆಸ್ – ಕವಿತಾ ಕಬ್ಬೇರ ವಾರ್ಡ್ ನಂಬರ್ 21 – ಬಿಜೆಪಿ – ಆನಂದ ಯಾವಗಲ್ ವಾರ್ಡ್ ನಂಬರ್ 22 – ಕಾಂಗ್ರೆಸ್ – ಬಿಲಕಿಸ ಬಾನು ಮುಲ್ಲಾ ವಾರ್ಡ್ ನಂಬರ್ 23 – ಕಾಂಗ್ರೆಸ್ – ಮಂಜುನಾಥ ಬಡಕುರಿ ವಾರ್ಡ್ ನಂಬರ್ 24 – ಕಾಂಗ್ರೆಸ್ – ಡಾ.ಮಯೂರ ಮೋರೆ ವಾರ್ಡ್ ನಂಬರ್ 25 – ಜೆಡಿಎಸ್ – ಲಕ್ಷ್ಮೀ ಹಿಂಡಸಗೇರಿ ವಾರ್ಡ್ ನಂಬರ್ 26 – ಬಿಜೆಪಿ – ನೀಲವ್ವ ಅರವಳದ ವಾರ್ಡ್ ನಂಬರ್ 27 – ಬಿಜೆಪಿ – ಸುನಿತಾ ಮಾಳವದಕರ್ ವಾರ್ಡ್ ನಂಬರ್ 28 – ಬಿಜೆಪಿ – ಚಂದ್ರಶೇಖರ ಮನಗುಂಡಿ ವಾರ್ಡ್ ನಂಬರ್ 29 – ಪಕ್ಷೇತರ – ಮಂಜುನಾಥ ಬುರಲಿ ವಾರ್ಡ್ ನಂಬರ್ 30 – ಬಿಜೆಪಿ – ರಾಮಣ್ಣ ಬಡಿಗೇರ ವಾರ್ಡ್ ನಂಬರ್ 31 – ಕಾಂಗ್ರೆಸ್ – ಶಂಕ್ರಪ್ಪ ಹರಿಜನ್ ವಾರ್ಡ್ ನಂಬರ್ 32 – ಬಿಜೆಪಿ – ಸತೀಶ್ ಹಾನಗಲ್ ವಾರ್ಡ್ ನಂಬರ್ 33 – ಕಾಂಗ್ರೆಸ್ – ಇಮ್ರಾನ್ ಎಲಿಗಾರ ವಾರ್ಡ್ ನಂಬರ್ 34 – ಕಾಂಗ್ರೆಸ್ – ಮಂಗಳಾ ಗೌರಿ ವಾರ್ಡ್ ನಂಬರ್ 35 – ಬಿಜೆಪಿ – ಮಲ್ಲಿಕಾರ್ಜುನ ಗುಂಡೂರ ವಾರ್ಡ್ ನಂಬರ್ 36 – ಬಿಜೆಪಿ – ರಾಜಣ್ಣ ಕೊರವಿ ವಾರ್ಡ್ ನಂಬರ್ 37 – ಬಿಜೆಪಿ – ಉಮೇಶಗೌಡ ಕೌಜಗೆರಿ ವಾರ್ಡ್ ನಂಬರ್ 38 – ಬಿಜೆಪಿ – ತಿಪ್ಪಣ್ಣ ಮಜಗಿ ವಾರ್ಡ್ ನಂಬರ್ 39 – ಬಿಜೆಪಿ – ಸೀಮಾ ಮೊಗಲಿಶೆಟ್ಟರ್ ವಾರ್ಡ್ ನಂಬರ್ 40-ಕಾಂಗ್ರೆಸ್-ಶಿವಕುಮಾರ ರಾಯನಗೌಡರ್‌

ವಾರ್ಡ್ ನಂಬರ್ 41 – ಬಿಜೆಪಿ – ಸಂತೋಷ್ ಚೌಹಾಣ್ ವಾರ್ಡ್ ನಂಬರ್ 42 – ಬಿಜೆಪಿ – ಮಹಾದೇವಪ್ಪ ನರಗುಂದ ವಾರ್ಡ್ ನಂಬರ್ 43 – ಬಿಜೆಪಿ – ಬೀರಪ್ಪ ಖಂಡೇಕರ್ ವಾರ್ಡ್ ನಂಬರ್ 44 – ಬಿಜೆಪಿ – ಉಮಾ ಮುಕ್ಕುಂದ ವಾರ್ಡ್ ನಂಬರ್ 45 – ಕಾಂಗ್ರೆಸ್ – ಪ್ರಕಾಶ್ ಕುರಟ್ಟಿ ವಾರ್ಡ್ ನಂಬರ್ 46 – ಬಿಜೆಪಿ – ವೀರಣ್ಣ ಸವಡಿ ವಾರ್ಡ್ ನಂಬರ್ 47 – ಬಿಜೆಪಿ – ರೂಪಾ ಶೆಟ್ಟಿ ವಾರ್ಡ್ ನಂಬರ್ 48 – ಪಕ್ಷೇತರ – ಕಿಶನ್ ಬೆಳಗಾವಿ ವಾರ್ಡ್ ನಂಬರ್ 49 – ಬಿಜೆಪಿ – ವೀಣಾ ಬಾರದ್ವಾಡ್ ವಾರ್ಡ್ ನಂಬರ್ 50 – ಕಾಂಗ್ರೆಸ್ – ಮಂಗಳಮ್ಮ ಹಿರೇಮನಿ ವಾರ್ಡ್ ನಂಬರ್ 51 – ಕಾಂಗ್ರೆಸ್ – ಸಂದಿಲ್ ಕುಮಾರ್ ವಾರ್ಡ್ ನಂಬರ್ 52 – ಪಕ್ಷೇತರ – ಚೇತನ್ ಹಿರೇಕೆರೂರದ ವಾರ್ಡ್ ನಂಬರ್ 53 – ಕಾಂಗ್ರೆಸ್ – ಮಹ್ಮದ ಇಸ್ಮಾಯಿಲ್ ಭದ್ರಾಪೂರ ವಾರ್ಡ್ ನಂಬರ್ 54 – ಬಿಜೆಪಿ – ಸರಸ್ವತಿ ಧೊಂಗಡಿ ವಾರ್ಡ್ ನಂಬರ್ 55 – ಕಾಂಗ್ರೆಸ್ – ಇಕ್ಬಾಲ್ ನವಲೂರು ವಾರ್ಡ್ ನಂಬರ್ 56 – ಪಕ್ಷೇತರ – ಚಂದ್ರಿಕಾ ಮೇಸ್ತ್ರಿ ವಾರ್ಡ್ ನಂಬರ್ 57 – ಬಿಜೆಪಿ – ಮೀನಾಕ್ಷಿ ವಂಟಮೂರಿ ವಾರ್ಡ್ ನಂಬರ್ 58 – ಕಾಂಗ್ರೆಸ್ – ಶ್ರುತಿ ಚಲವಾದಿ ವಾರ್ಡ್ ನಂಬರ್ 59 – ಕಾಂಗ್ರೆಸ್ – ಸುವರ್ಣ ವಾರ್ಡ್ ನಂಬರ್ 60 – ಬಿಜೆಪಿ – ರಾಧಾಬಾಯಿ ವಾರ್ಡ್ ನಂಬರ್ 61 – ಕಾಂಗ್ರೆಸ್ – ದೊರರಾಜ ಮನಿಕುಂಟ್ಲ ವಾರ್ಡ್ ನಂಬರ್ 62 – ಕಾಂಗ್ರೆಸ್ – ಸರ್ತಾಜ್ ಅದ್ವಾನಿ ವಾರ್ಡ್ ನಂಬರ್ 63 – ಕಾಂಗ್ರೆಸ್ – ಮಹ್ಮದ್ ಇಲಾಯಾಸ್ ವಾರ್ಡ್ ನಂಬರ್ 64 – ಬಿಜೆಪಿ – ಪೂಜಾ ಶೇಜವಾಡ್ಕರ್ ವಾರ್ಡ್ ನಂಬರ್ 65 – ಕಾಂಗ್ರೆಸ್ – ಸುನಿತಾ ಬುರಬುರೆ ವಾರ್ಡ್ ನಂಬರ್ 66 – ಬಿಜೆಪಿ – ಪ್ರೀತಿ ಖೋಡೆ ವಾರ್ಡ್ ನಂಬರ್ 67 – ಬಿಜೆಪಿ – ಶಿವಾನಂದ ಮೆಣಸಿನಕಾಯಿ ವಾರ್ಡ್ ನಂಬರ್ 68 – ಕಾಂಗ್ರೆಸ್ – ನಿರಂಜನಯ್ಯ ವಾರ್ಡ್ ನಂಬರ್ 69 – ಪಕ್ಷೇತರ – ದುರ್ಗಮ್ಮ ಬಿಜವಾಡ ವಾರ್ಡ್ ನಂಬರ್ 70 – ಕಾಂಗ್ರೆಸ್ – ಗೀತಾ ಹೊಸಮನಿ ವಾರ್ಡ್ ನಂಬರ್ 71 – AIMIM – ನಜೀರ್ ಅಹ್ಮದ್ ಹೊನ್ಯಾಳ ವಾರ್ಡ್ ನಂಬರ್ 72 -ಬಿಜೆಪಿ – ಸುಮಿತ್ರಾ ಗುಂಜಾಳ ವಾರ್ಡ್ ನಂಬರ್ 73 – ಬಿಜೆಪಿ – ಶೀಲಾ ಕಾಟಕರ್ ವಾರ್ಡ್ ನಂಬರ್ 74 – ಕಾಂಗ್ರೆಸ್ – ಬೀಬಿ ಮರಿಯಮ್ಮ ಮುಲ್ಲಾ ವಾರ್ಡ್ ನಂಬರ್ 75 – ಕಾಂಗ್ರೆಸ್ – ಮುಸ್ತಾಕ್ ಅಹ್ಮದ ಮನ್ಸೂರು ವಾರ್ಡ್ ನಂಬರ್ 76 – ಎಐಎಂಐಎಂ – ವಹಿದಾಖಾನಂ ಕಿತ್ತೂರು ವಾರ್ಡ್ ನಂಬರ್ 77 – ಎಐಎಂಐಎಂ – ಹುಸೇನ ಬೀ ವಾರ್ಡ್ ನಂಬರ್ 78 – ಕಾಂಗ್ರೆಸ್ – ಶಿವಗಂಗಾ ಮಾಶೆಟ್ಟರ್ ವಾರ್ಡ್ ನಂಬರ್ 79 – ಕಾಂಗ್ರೆಸ್ – ಫಮಿದಾ ಕಾರಡಗಿ ವಾರ್ಡ್ ನಂಬರ್ 80 – ಬಿಜೆಪಿ – ಶಾಂತಾ ಹಿರೇಮಠ ವಾರ್ಡ್ ನಂಬರ್ 81 – ಕಾಂಗ್ರೆಸ್ – ಮಂಜುಳಾ ಶಾಮ ಜಾಧವ ವಾರ್ಡ್ ನಂಬರ್ 82 – ಪಕ್ಷೇತರ – ಅಕ್ಷತಾ ಅಸುಂಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ, ಶುಭ ಹಾರೈಕೆ ಪಾಲಿಕೆ ಚುನಾವಣೆಗಳ ಫಲಿತಾಂಶದಿಂದ ಹರ್ಷಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಶುಭಕೋರಿದ್ದಾರೆ. ‘ಹುಬ್ಬಳ್ಳಿ – ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ ಎಲ್ಲ ಪ್ರಬುದ್ಧ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಚುನಾವಣೆಯಲ್ಲಿ ಜಯಶಾಲಿ ಆಗಿರುವ ಬಿಜೆಪಿ ಅಭ್ಯರ್ಥಿಗಳಿಗೆ ಶುಭಾಶಯ ಕೋರುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ  ಚುನಾವಣೆಯನ್ನು ಎದುರಿಸಿದ್ದೇವೆ. ಈ ಚುನಾವಣೆ ಗೆಲುವಿನ ಶ್ರೇಯಕ್ಕೆ ಕಾರಣೀಕರ್ತರಾಗಿರುವ ಅವರಿಗೆ  ಧನ್ಯವಾದಗಳನ್ನು ಅರ್ಪಸುತ್ತೇನೆ. ’ ಎಂದು ಅವರು ಬರೆದುಕೊಂಡಿದ್ದಾರೆ.

ಚುನಾವಣೆಯಲ್ಲಿ ಸಕ್ರೀಯವಾಗಿ ಹಗಲಿರುಳು ಶ್ರಮಿಸಿರುವ, ಚುನಾವಣೆ ಪ್ರಚಾರ ಕಾರ್ಯದಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾ ಅಧ್ಯಕ್ಷರು, ಸ್ಥಳೀಯ ಶಾಸಕರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಎಲ್ಲ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಹ ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Karnataka Municipal Election Results 2021: ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಮಾಸ್ಟರ್​ ಪ್ಲಾನ್ ಮಾಡಿದ್ದ ಬಿಜೆಪಿ: ಇಲ್ಲಿದೆ ಒಳ ಚಿತ್ರಣ

(Karnataka Municipal election results 2021 Hubballi Dharwad election results check list of winners)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada