ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ? ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆತಂದ ಯುವಕ
ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ(Hubballi) ಮತ್ತೊಂದು ಲವ್ ಜಿಹಾದ್(Love jihad) ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಅನ್ಯಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಫುಸಲಾಯಿಸಿ ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಕರೆದುಕೊಂಡ ಬಂದಿದ್ದಾನೆ.

ಹುಬ್ಬಳ್ಳಿ, ಏ.28: ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ(Hubballi) ಮತ್ತೊಂದು ಲವ್ ಜಿಹಾದ್(Love jihad) ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಅನ್ಯಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಫುಸಲಾಯಿಸಿ ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಕರೆದುಕೊಂಡ ಬಂದಿದ್ದಾನೆ. ಗಬ್ಬೂರಿನ ಹೋಟೇಲ್ನಲ್ಲಿ ಓಡಾಡುತ್ತಿದ್ದನ್ನು ಗಮನಿಸಿದ ಹಿಂದೂ ಜಾಗರಣಾ ವೇದಿಕೆ ಮುಖಂಡರು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಕರೆದುಕೊಂಡ ಬಂದಿದ್ದಾರೆ.
ಅಪ್ರಾಪ್ತ ಬಾಲಕಿ ಕಾಣೆಯಾಗಿರೋ ಕುರಿತು ಕೇಸ್ ದಾಖಲು
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಕುರಿತು ಕೇಸ್ ದಾಖಲು ಮಾಡಲಾಗಿದೆ. ಇಬ್ಬರನ್ನೂ ಕರೆತಂದ ಹಿಂದೂ ಜಾಗರಣಾ ವೇದಿಕೆ ಕಾರ್ಯರ್ತರು, ಪೊಲೀಸ್ ಠಾಣೆ ಮುಂಭಾಗದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ:Yadgir: ನೇಹಾ ಹತ್ಯೆ ಕಹಿ ನೆನಪು ಮಾಸುವ ಮುನ್ನವೇ ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ದಲಿತ ಯುವಕನ ಹತ್ಯೆ
ಏಪ್ರಿಲ್ 18 ರಂದು ನಡೆದಿತ್ತು ನೇಹಾಳ ಹತ್ಯೆ
ಏಪ್ರಿಲ್ 18 ರಂದು ನೇಹಾಳ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ಈ ವಿಚಾರವನ್ನು ತಿಳಿದಿದ್ದ ಫಯಾಜ್ ಧಾರವಾಡದಿಂದ ಬೈಕ್ (KA24Y5781) ತೆಗೆದುಕೊಂಡು ಕಾಲೇಜ್ಗೆ ಬಂದಿದ್ದ. ಕೊಲೆ ಮಾಡುವ ಉದ್ಧೇಶದಿಂದಲೇ ರಸ್ತೆ ಕಡೆ ಮುಖ ಮಾಡಿ ಬೈಕ್ ನಿಲ್ಲಿಸಿದ್ದ.ಬಳಿಕ ಕಾಲೇಜ್ ಒಳಗಡೆ ಹೋಗಿ ಪ್ರಾಕ್ಟಿಕಲ್ ಎಕ್ಸಾಂ ನಡೆಯುವ ಹಾಲ್ನಲ್ಲಿ ಕೂತಿದ್ದ. ಬಳಿಕ ಎಕ್ಸಾಂ ಮುಗಿಯುತ್ತಲೇ ನೇಹಾಳನ್ನು ಫಯಾಜ್ ಮಾತನಾಡಿಸಲು ಯತ್ನಿಸಿದ್ದಾನೆ. ಆದರೆ ನೇಹಾ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ ರೊಚ್ಚಿಗೆದ್ದು ಚಾಕಿವಿನಿಂದ ಇರಿದು ಪರಾರಿ ಆಗಿದ್ದಾನೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರಿಂದ ಫಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Sun, 28 April 24



