ಹುಬ್ಬಳ್ಳಿ, ಏ.30: ಪ್ರಜ್ವಲ್ 600 ಜನ ಹುಡ್ಗೀರಿಗೆ ಸೀರೆ ಎಳೆದಿದ್ದಾನೆ, ಪಿನ್ ಚುಚ್ಚಿದ್ದಾನೆ. ಆದರೂ ಯಡಿಯೂರಪ್ಪ, ಜೋಶಿ ಯಾಕೆ ಮಾತಾಡಿಲ್ಲ?, ಇದೇನಾ ಅಚ್ಚೇದಿನ್ ಎಂದು ಸಿಎಂ ಇಬ್ರಾಹಿಂ(CM Ibrahim) ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ರನ್ನ ಪಕ್ಷದಿಂದ ಹೊರಗಡೆ ಹಾಕುತ್ತೀವಿ ಎನ್ನುತ್ತಾರೆ. ಅವರು ಗರ್ಭಿಣಿ ಆದ ಮೇಲೆ ಹೊರಗಡೆ ಹಾಕಿದರೇನು, ಅವರ ಮಕ್ಕಳಿಗೆ ಪರಿಹಾರ ಕೊಡುವುದು ಯಾರು?, ನಾನು ಆವತ್ತೆ ದೇವೆಗೌಡರಿಗೆ ಹೇಳಿದ್ದೆ, ಇವತ್ತು ಅವನು ಜರ್ಮನ್ಗೆ ಹೋಗಿದ್ದಾನೆ. ಯಾವ ವಿಡಿಯೋ ಬರತ್ತೋ ,ಇನ್ನೆಲ್ಲಿ ಹೋಗ್ತಾನೋ ಗೊತ್ತಿಲ್ಲವೆಂದು.
ಲೋಕಸಭೆ ಚುನಾವಣೆ ಬಳಿಕ ಮಠಾಧೀಶರು, ದಲಿತರು, ಮುಸ್ಲಿಂ ರ ಮೂರನೇ ಶಕ್ತಿ ಹುಟ್ಟು ಹಾಕುತ್ತೇವೆ ಜೊತೆಗೆ ಒಬ್ಬರು ಬ್ರಹ್ಮಾಚಾರಿಗೆ ಶಕ್ತಿ ಕೊಡುತ್ತೇವೆ. ಮುಂದೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಹೊಸ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುತ್ತದೆ. ಈ ಕುರಿತು ನಾನು ದಿಂಗಾಲೇಶ್ವರ ಸ್ವಾಮೀಜಿ ಜೊತೆ ಮೂರು ಗಂಟೆ ಮಾತಾಡಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ತಪ್ಪಿನಿಂದ ಬಿಜೆಪಿ ಬೆಳೆಯುತ್ತಿದೆ. ಇವತ್ತು ಬಸವತತ್ವದ ಆಧಾರದ ಮೇಲೆ ಸಂಘಟನೆ ಮಾಡಬೇಕಿದೆ. ನಾವು ಇದನ್ನು ತೀರ್ಮಾನ ಮಾಡಿದ್ದೇವೆ. ದಿಂಗಾಲೇಶ್ವರ ಸ್ವಾಮೀಜಿ ಕೆಲವೇ ದಿನಗಳಲ್ಲಿ ಈ ಕುರಿತು ಹೇಳುತ್ತಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ನಡೆ ಕುರಿತು ಸಿಎಮ್ ಇಬ್ರಾಹಿಂ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮಹಾನ್ ನಾಯಕರ ಪಾತ್ರದ ಬಗ್ಗೆ ಚರ್ಚೆಯಾಗಬೇಕು: ಹೆಚ್ ಡಿ ಕುಮಾರಸ್ವಾಮಿ
ಇದೇ ವೇಳೆ ಕುಮಾರಸ್ವಾಮಿ ಮುಸ್ಲಿಂ ರ ವೋಟ್ ತೆಗೆದುಕೊಂಡು 17 ಸೀಟ್ ಗೆದ್ದಿದ್ದು ನನ್ನಿಂದ. ಬಿಜೆಪಿಗೆ ಗತಿ ಇಲ್ಲ, ಅವರಿಗೆ ಮತಿ ಇಲ್ಲ. ಮೇಕಪ್ ನೋಡಿ ಹೋಗಿಬಿಟ್ಟರು, ಹಾಸನ, ಮಂಡ್ಯದಲ್ಲಿ ಏನೂ ಸಿಗಲಿಲ್ಲ. ಬಿಜೆಪಿಯವರು ಮಂಚ ಮುರಿದವರೆ, ಜೆಡಿಎಸ್- ಬಿಜೆಪಿ ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು ಎಂದು ವ್ಯಂಗ್ಯವಾಡಿದ್ದಾರೆ. ನಾನು ಕೇಶವಕೃಪದಲ್ಲಿ ಗೌರವ ಸಿಗಲ್ಲ, ಬಸವಕೃಪದಲ್ಲಿರೋದು ಒಳ್ಳೆದು ಎಂದು ದೇವೆಗೌಡರಿಗೆ ಹೇಳಿದ್ದೆ. ಅದರಂತೆ ದೇವೆಗೌಡರು ಚುನಾವಣೆಯಾದ ಕೆಲವೇ ದಿನಗಳಲ್ಲಿ ಬಿಜೆಪಿಯವರು ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Tue, 30 April 24