ಲೋಕಸಭಾ ಚುನಾವಣೆ: ಮತಹಾಕಿದವರಿಗೆ ಧಾರವಾಡದಲ್ಲಿ ಉಚಿತ ಆರೋಗ್ಯ ತಪಾಸಣೆ, ಹುಬ್ಬಳ್ಳಿಯಲ್ಲಿ ಫ್ರೀ ಐಸ್ ಕ್ರೀಂ
ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮತದಾನ ನಡೆಯುತ್ತಿದ್ದು, ಮತದಾರರು ಮತಗಟ್ಟೆಗೆ ಧಾವಿಸುತ್ತಿದ್ದಾರೆ. ಅದರಂತೆ ಧಾರವಾಡದಲ್ಲಿ ಮತದಾನ ಪ್ರೇರಣೆಗೆ ವಿನೂತನ ಪ್ರಯೋಗ ಮಾಡಿದ್ದು, ಮತದಾನ ಮಾಡಿದವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಇಸಿಜಿ(ECG) ತಪಾಸಣೆ ಮಾಡಲಾಗುತ್ತಿದೆ. ಇತ್ತ ಹುಬ್ಬಳ್ಳಿಯಲ್ಲಿ ವೋಟ್ ಮಾಡಿದವರಿಗೆ ಉಚಿತವಾಗಿ ಐಸ್ ಕ್ರೀಂ ನೀಡಲಾಗುತ್ತಿದೆ.
ಧಾರವಾಡ, ಮೇ.07: ಮತದಾನ ಪ್ರೇರಣೆಗೆ ಧಾರವಾಡದಲ್ಲಿ ವಿನೂತನ ಪ್ರಯೋಗ ಮಾಡಿದ್ದು, ಮತದಾನ ಮಾಡಿದವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಇಸಿಜಿ(ECG) ತಪಾಸಣೆ ಮಾಡಲಾಗುತ್ತಿದೆ. ಧಾರವಾಡದ(Dharwad) ಹರೀಶ ಮೆಡಿಕಲ್ ಲ್ಯಾಬ್, ಮಾಳಮಡ್ಡಿ ಮತ್ತು ಕಾಮನಕಟ್ಟಿರುವ ಲ್ಯಾಬ್ನಲ್ಲಿ ಕೈ ಬೆರಳಿನ ಶಾಹಿ ತೋರಿಸಿದವರಿಗೆ ಉಚಿತ ತಪಾಸಣೆ ಮಾಡಲಾಗುತ್ತಿದ್ದು, ಬೆಳಗ್ಗೆಯಿಂದ ನೂರಕ್ಕೂ ಹೆಚ್ಚು ಮತದಾರರಿಗೆ ತಪಾಸಣೆ ಮಾಡಲಾಗಿದೆ. ಇನ್ನು ಇದು ಸಂಜೆಯವರೆಗೂ ಉಚಿತ ತಪಾಸಣೆ ನಡೆಯಲಿದೆ. ಈ ಮೂರು ತಪಾಸಣೆಗೆ ಸೇರಿ ಒಟ್ಟು 500 ರೂಪಾಯಿ ಶುಲ್ಕ ಆಗುತ್ತದೆ. ಆದರೂ ಮತದಾನ ಮಾಡಿರೋ ಎಲ್ಲರಿಗೂ ಉಚಿತವಾಗಿ ಸೇವೆ ನೀಡಲಾಗುತ್ತಿದೆ.
ವೋಟ್ ಮಾಡಿ ಉಚಿತವಾಗಿ ಐಸ್ ಕ್ರೀಂ ಸವಿಯಿರಿ
ಹುಬ್ಬಳ್ಳಿ: ಧಾರವಾಡದಲ್ಲಿ ಮತದಾನ ಮಾಡಿದರೆ ಉಚಿತ ಆರೋಗ್ಯ ತಪಾಸಣೆಯಾದರೆ, ಇತ್ತ ಹುಬ್ಬಳ್ಳಿಯಲ್ಲಿ ವೋಟ್ ಮಾಡಿದವರಿಗೆ ಉಚಿತವಾಗಿ ಐಸ್ ಕ್ರೀಂ ನೀಡಲಾಗುತ್ತಿದೆ. ಉಜ್ವಲ ಭಾರತದ ಭವಿಷ್ಯಕ್ಕಾಗಿ ಮತದಾನ ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಡೈರಿಸ್ ಐಸ್ಕ್ರೀಮ್ ಅವರು, ವೋಟ್ ಹಾಕಿದಂತ ಪ್ರತಿ ವ್ಯಕ್ತಿಗೆ ತಲಾ ಒಂದು ಐಸ್ಕ್ರೀಮ್ ಉಚಿತವಾಗಿ ಕೊಡುತ್ತಿದ್ದಾರೆ. ಇದರ ಬೆಲೆ 59 ರೂ ಯಿಂದ 90 ರೂ. ವರೆಗೆ ಇದೆ.
ಇದನ್ನೂ ಓದಿ:Karnataka Lok Sabha Election 2024 LIVE: ಮಧ್ಯಾಹ್ನ 1 ಗಂಟೆವರೆಗೆ ಶೇ.41.59ರಷ್ಟು ಮತದಾನ
ಉರಿ ಬಿಸಿಲು ಲೆಕ್ಕಿಸದೇ ಗದಗದಲ್ಲಿ ಮತದಾನಕ್ಕೆ ಮುಂದಾದ ಜನ
ಗದಗ: ಗದಗ- ಬೆಟಗೇರಿಯ ಮಂಜುನಾಥ್ ನಗರದಲ್ಲಿ ಉರಿ ಬಿಸಿಲು ಲೆಕ್ಕಿಸದೇ ಜನರು ಮತದಾನಕ್ಕೆ ಮುಂದಾಗಿದ್ದಾರೆ. ಮತಗಟ್ಟೆ 26, 27 ರಲ್ಲಿ ಶಕೆ ನಡುವೆಯೂ ಗಾಳಿ ಬಿಸಿಕೊಂಡು ಮಹಿಳೆಯರು, ಯುವತಿಯರು ಹಾಗೂ ಪುರುಷರ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Tue, 7 May 24