ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ (Smart City Prohect) ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಮಹಾತ್ಮ ಗಾಂಧಿ ಉದ್ಯಾನವನ ವೇದಿಕೆ ಸ್ಮಾರ್ಟ್ ಸಿಟಿ ಎಂಡಿ ಶಕೀಲ್ ಅಹ್ಮದ್ ವಿರುದ್ಧ ಲೋಕಾಯುಕ್ತಕ್ಕೆ (Lokayukta) ದೂರು ನೀಡಿದೆ. ಅಧಿಕಾರಿಗಳು ಇಂದಿರಾ ಗ್ಲಾಸ್ ಹೌಸ್ ಅಭಿವೃದ್ಧಿಯಲ್ಲಿ ಭಾರಿ ಗೋಲ್ ಮಾಲ್ ಮಾಡಿದ್ದಾರೆ. ಹಳೆ ಕಾಮಗಾರಿಗೆ ಹೊಸ ಬಿಲ್ ಸೃಷ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಮಹಾತ್ಮ ಗಾಂಧಿ ಉದ್ಯಾನವನ ವೇದಿಕೆ ಆರೋಪಿಸಿದೆ.
ಅಧಿಕಾರಿಗಳು ಹಳೆ ಪೇಪಸ್೯ಗೆ ಪೇಂಟ್ ಹಚ್ಚಿ ಹೊಸ ಪೇವಸ್೯ ಅಳವಡಿಕೆ ಮಾಡಿದ್ದಾರೆ. 26 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ 16 ಕೋಟಿ ರೂ. ಗೂ ಹೆಚ್ಚು ಅವ್ಯವಹಾರ ನಡೆದಿದೆ. ಹೀಗೆ ಹತ್ತು ಹಲವು ಕಾಮಾಗಾರಿಗಳಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಆರೋಪಿಸಿರುವ ಮಹಾತ್ಮ ಗಾಂಧಿ ಉದ್ಯಾನವನ ವೇದಿಕೆ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.
ಇದನ್ನೂ ಓದಿ: ಜುಲೈ 18ರಂದು ಜನಿಸಿದವರ ಪ್ರೀತಿ, ಆರೋಗ್ಯ, ವ್ಯವಹಾರ, ವೈಯಕ್ತಿಯ ಜೀವನ ಹೇಗಿರಲಿದೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಕೆರೆಯಲ್ಲಿ ಕೊಚ್ಚಿಹೋಗಿದ್ದ ಯುವಕನ ಮೃತದೇಹ ಪತ್ತೆ:
ಸೆಲ್ಫಿ ತೆಗೆದುಕೊಳ್ಳಲು ಹೋಗಿ ನಿನ್ನೆ ನೀರುಪಾಲಾಗಿದ್ದ ಯುವಕನ ಶವ ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದಲ್ಲಿ ಈ ಘಟನೆ ನಡೆದಿತ್ತು. ಕಿರಣ ರಜಪೂತ (22) ನೀರಲ್ಲಿ ಮುಳುಗಿದ್ದ ಯುವಕ. ಈತ ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿ. ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದಾ ಘಟನೆ ನಡೆದಿತ್ತು. ನೀರಿನ ರಭಸ ಹೆಚ್ಚಾಗಿದ್ದರಿಂದ ಕಿರಣ ಕೊಚ್ಚಿ ಹೋಗಿದ್ದ. ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Oskar Sala: ಎಲೆಕ್ಟ್ರಾನಿಕ್ ಸಂಗೀತ ಸಂಯೋಜಕ ಆಸ್ಕರ್ ಸಲಾ ಅವರ 112ನೇ ಜನ್ಮದಿನದ ಸ್ಮರಣೆ, ಗೂಗಲ್ ಡೂಡಲ್ನಲ್ಲಿ ವಿಶೇಷ ಗೌರವ
Published On - 9:09 am, Mon, 18 July 22