ಮೈದುಂಬಿ ಹರಿಯುತ್ತಿರುವ ಜೋಗ ಜಲಪಾತ ವೀಕ್ಷಣೆಗೆ ಹುಬ್ಬಳ್ಳಿಯಿಂದ NWKRTC ವಿಶೇಷ ಬಸ್​

ಶರಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್​ ಬಳಿ ಇರುವ ಜೋಗ ಜಲಾಪತ ಭೋರ್ಗರೆಯುತ್ತ ಧುಮ್ಮುಕ್ಕುತ್ತಿದೆ. ಜಲಾಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಗರ ದಂಡೇ ಹರಿದು ಬರುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ್​ ಬಸ್​ಗಳನ್ನು ಬಿಟ್ಟಿದೆ.

Follow us
ವಿವೇಕ ಬಿರಾದಾರ
|

Updated on: Aug 04, 2024 | 3:06 PM

ಹುಬ್ಬಳ್ಳಿ, ಆಗಸ್ಟ್​​ 04: ಕರ್ನಾಟಕದ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಲಿಂಗನಮಕ್ಕೆ ಜಲಾಶಯ (Linganmakki Dam) ತಂಬಿದ್ದು, ಭಾರಿ ಪ್ರಮಾಣದಲ್ಲಿ ನೀರನ್ನು ಶರಾವತಿ ನದಿಗೆ (Sharavati River) ಬಿಡಲಾಗುತ್ತಿದೆ. ಶರಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್​ ಬಳಿ ಇರುವ ಜೋಗ ಜಲಾಪತ (Jog Falls) ಭೋರ್ಗರೆಯುತ್ತ ಧುಮ್ಮುಕ್ಕುತ್ತಿದೆ. ಹಾಲಿನಂತೆ ಧುಮ್ಮುಕ್ಕುವ ರಾಜಾ, ರಾಣಿ, ರೋರಲ್​​ ಹಾಗೂ ರಾಜೇಟ್​ ಜಲಾಪಾತಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಗರ ದಂಡೇ ಹರಿದು ಬರುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ್​ ಬಸ್​ಗಳನ್ನು ಬಿಟ್ಟಿದೆ.

ಎನ್​​ಡಬ್ಲೂಕೆಆರ್​ಟಿಸಿಯ ಹುಬ್ಬಳ್ಳಿ ಗ್ರಾಮಾಂತರ, ಹಾವೇರಿ, ಗದಗ ವಿಭಾಗದಿಂದ ವಿಶೇಷಗಳನ್ನು ಬಿಡಲಾಗಿದೆ. ಈ ಬಸ್​ಗಳು ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ಹಾಗೂ ರಜೆ ದಿನಗಳಂದು ಸಂಚರಿಸಲಿವೆ.

ಬಸ್​ ವೇಳಾಪಟ್ಟಿ

ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಐರಾವತ ಮಲ್ಟಿಅಕ್ಸೆಲ್​ ವೋಲ್ವೋ ಬಸ್​ ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುತ್ತದೆ. ಈ ಬಸ್​ನಲ್ಲಿ ಹೋಗಿ-ಬರಲು ಒಬ್ಬರಿಗೆ 600 ರೂ. ದರ ನಿಗದಿ ಮಾಡಲಾಗಿದೆ. ಇದೇ ವಿಭಾಗದಿಂದ ಬೆಳಗ್ಗೆ 7:30 ರಾಜಹಂಸ ಹೊರಡುತ್ತದೆ. ಈ ಬಸ್​ನಲ್ಲಿ ಹೋಗಿ-ಬರಲು ಒಬ್ಬರಿಗೆ 430 ರೂ. ದರ ನಿಗದಿ ಮಾಡಲಾಗಿದೆ. ಇದೇ ವಿಭಾಗದಿಂದ ಬೆಳಗ್ಗೆ 8:10ಕ್ಕೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್​ ಹೊರಡುತ್ತದೆ. ಈ ಬಸ್​ನಲ್ಲಿ ಹೋಗಿ-ಬರಲು ಒಬ್ಬರಿಗೆ 350 ರೂ. ದರ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್​ಆರ್​ಟಿಸಿಯಿಂದ ಊಟ ಸಹಿತ ಟೂರ್​ ಪ್ಯಾಕೇಜ್​, ಇಲ್ಲಿದೆ ಸಮಯ, ದರ ವಿವರ

ಹಾವೇರಿ ವಿಭಾಗದ ವಾಯುವ್ಯ ಕರ್ನಾಟಕ ಸಾರಿಗೆ ಬಸ್​ ಬೆಳಗ್ಗೆ 8 ಗಂಟೆಗೆ ಹಾವೇರಿ ಬಸ್​ ನಿಲ್ದಾಣದಿಂದ ಹೊರಡುತ್ತದೆ. ಈ ಬಸ್​ನಲ್ಲಿ ಹೋಗಿ-ಬರಲು ಒಬ್ಬರಿಗೆ 340 ರೂ. ದರ ನಿಗದಿ ಮಾಡಲಾಗಿದೆ. ಇದೇ ವಿಭಾಗದ ರಾಣೇಬೆನ್ನೂರು ಬಸ್​ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ವಾಯುವ್ಯ ಕರ್ನಾಟಕ ಸಾರಿಗೆ ಬಸ್​ನಲ್ಲಿ ಹೋಗಿ-ಬರಲು ಒಬ್ಬರಿಗೆ 320 ರೂ. ದರ ನಿಗದಿ ಮಾಡಲಾಗಿದೆ. ರಾಣೇಬೆನ್ನೂರಿನಿಂದ ಹೋಗುವ ರಾಜಹಂಸ ಬಸ್ ಬೆಳಗ್ಗೆ​ 8:30ಕ್ಕೆ ಹೊರಡಲಿದೆ. ​​ಈ ಬಸ್​ನಲ್ಲಿ ಹೋಗಿ-ಬರಲು ಒಬ್ಬರಿಗೆ 425 ರೂ. ದರ ನಿಗದಿ ಮಾಡಲಾಗಿದೆ.

ಗದಗ ವಿಭಾಗದ ವಾಯುವ್ಯ ಕರ್ನಾಟಕ ಸಾರಿಗೆ ಬಸ್​ ಬೆಳಗ್ಗೆ 7 ಗಂಟೆಗೆ ಗದಗ ಬಸ್​ ನಿಲ್ದಾಣದಿಂದ ಹೊರಡುತ್ತದೆ. ಈ ಬಸ್​ನಲ್ಲಿ ಹೋಗಿ-ಬರಲು ಒಬ್ಬರಿಗೆ 500 ರೂ. ದರ ನಿಗದಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ