Hijab Verdict: ಮೇಲ್ಮನವಿ ಸಲ್ಲಿಸುವುದು ಬಿಟ್ಟು, ಅತಿರೇಕದಿಂದ ನಡೆದುಕೊಳ್ತಿದ್ದಾರೆ; ಕ್ರಮ ಕೈಗೊಳ್ಳಿ -ಪ್ರಮೋದ ಮುತಾಲಿಕ್ ಮನವಿ

ಇವರೆಲ್ಲಾ ಸೇರಿಕೊಂಡು ಕೋರ್ಟ್ ಗೆ ಅವಮಾನ ಮಾಡಿದ್ದಾರೆ. ನ್ಯಾಯಾಲಯ‌ ಇರುವುದೇ ಸಂವಿಧಾನದ ಮೇಲೆ. ಈ ರೀತಿಯ ಹೇಳಿಕೆಗಳು ಸರಿಯಲ್ಲ. ನಾವು ಅತಾವುಲ್ಲಾ ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಎಜಿ ಅವರಿಗೆ ಅನುಮತಿ ಕೇಳಿದ್ದೇವೆ. ಧಾರವಾಡ ಹೈಕೋರ್ಟ್ ನಲ್ಲಿ ಹೆಚ್ಚುವರಿ ಎಜಿ ವಿದ್ಯಾವತಿ ಅವರಿಗೆ ಮನವಿ ನೀಡಿದ್ದೇವೆ - ಶ್ರೀರಾಮ‌ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

Hijab Verdict: ಮೇಲ್ಮನವಿ ಸಲ್ಲಿಸುವುದು ಬಿಟ್ಟು, ಅತಿರೇಕದಿಂದ ನಡೆದುಕೊಳ್ತಿದ್ದಾರೆ; ಕ್ರಮ ಕೈಗೊಳ್ಳಿ -ಪ್ರಮೋದ ಮುತಾಲಿಕ್ ಮನವಿ
ಶ್ರೀರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 16, 2022 | 2:54 PM

ಧಾರವಾಡ: ಶಾಲಾ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಕಡ್ಡಾಯವಲ್ಲ. ಸಮವಸ್ತ್ರವೇ ಕಡ್ಡಾಯ ಎಂದು ನಿನ್ನೆ ಕರ್ನಾಟಕ ಹೈಕೋರ್ಟ್​ ಸ್ಪಷ್ಟ ಆದೇಶ ನೀಡಿದೆ. ಈ ಮಧ್ಯೆ, ಹೈಕೋರ್ಟ್​ ಆದೇಶದ ವಿರುದ್ಧ ಮೇಲ್ಮನವಿ ಹೋಗಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಪ್ರಕರಣದ ತುರ್ತು ವಿಚಾರಣೆಗೆ ನಕಾರ ಸೂಚಿಸಿದೆ. ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯ ಏನಿದೆ? ನಾಳೆಯಿಂದ ರಜೆ ಆರಂಭವಾಗುತ್ತದೆ ಎಂದು ಸಿಜೆ ಎನ್​.ವಿ. ರಮಣ ತಿಳಿಸಿದ್ದಾರೆ. ಹಾಗಾಗಿ ಹೋಳಿ ಹಬ್ಬ ರಜೆಯ ಬಳಿಕ ಮೇಲ್ಮನವಿ ವಿಚಾರಣೆ ಸಾಧ್ಯತೆ ಎಂದು ಹೇಳಲಾಗಿದೆ.

ಇದು ಹಿಜಾಬ್ (Hijab Verdict) ಕುರಿತಾದ ಕೋರ್ಟ್​ ಬೆಳವಣಿಗೆಗಳಾಗಿದ್ದರೆ ಕೋರ್ಟ್​ ಆಚೆಗೆ, ಮುಖ್ಯವಾಗಿ ಅರ್ಜಿದಾರರ ವತಿಯಿಂದ ರಾಜ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಅನೇಕ ಕಡೆ ಕರ್ನಾಟಕ ಹೈಕೋರ್ಟ್ ತೀರ್ಪು ಧಿಕ್ಕರಿಸಿ, ನಡೆದುಕೊಳ್ಳುತ್ತಿರುವ ಪ್ರಸಂಗಗಳೂ ನಡೆಯುತ್ತಿವೆ. ಹಿಜಾಬ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಹೋಗ್ತೇವೆ ಎಂದು ಸ್ವತಃ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಫಿ ಸಅದಿ ಹೇಳಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿ, ಗಂಭೀರವಾಗಿರುವ ಶ್ರೀರಾಮ‌ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧಾರವಾಡ ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್​ ಜನರಲ್​ಗೆ (ಎಜಿ) ಮನವಿಯೊಂದನ್ನು ಸಲ್ಲಿಸಿದ್ದಾರೆ.

‘ಹೈ’ ತೀರ್ಪಿಗೆ ಅಗೌರವ? ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಲು ಡಿಮಾಂಡ್! ಈ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಪ್ರಮೋದ ಮುತಾಲಿಕ್ ನಿನ್ನೆ ಹಿಜಾಬ್ ಆದೇಶ ಬಂದಿತ್ತು. ಅದಕ್ಕೆ ಮೇಲ್ಮನವಿ ಸಲ್ಲಿಸಬಹುದು. ಆದರೆ‌ ಅದನ್ನು ವಿರೋಧಿಸಿ ಕೆಲವರು ಮಾತನಾಡಿದ್ದಾರೆ. ಅರ್ಜಿದಾರರಾದ ಆ ಆರು ವಿದ್ಯಾರ್ಥಿನಿಯರೂ ಸಹ ಹೈಕೋರ್ಟ್​ ಆದೇಶವನ್ನು ಗೌರವಿಸಿಲ್ಲ. ಅವರು ಅಗೌರವವಾಗಿ ನಡೆದುಕೊಂಡಿದ್ದಾರೆ. ಸಿಎಫ್ಐ ಅಧ್ಯಕ್ಷ ಅತಾವುಲ್ಲಾ ಕೋರ್ಟ್​ ಆದೇಶವನ್ನು ಅಸಂವಿಧಾನಿಕ ಎಂದು ಜರಿದಿದ್ದಾರೆ.

ಇದರಿಂದ ಇವರೆಲ್ಲಾ ಸೇರಿಕೊಂಡು ಕೋರ್ಟ್ ಗೆ ಅವಮಾನ ಮಾಡಿದ್ದಾರೆ. ನ್ಯಾಯಾಲಯ‌ ಇರುವುದೇ ಸಂವಿಧಾನದ ಮೇಲೆ. ಈ ರೀತಿಯ ಹೇಳಿಕೆಗಳು ಸರಿಯಲ್ಲ. ನಾವು ಅತಾವುಲ್ಲಾ ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಎಜಿ ಅವರಿಗೆ ಅನುಮತಿ ಕೇಳಿದ್ದೇವೆ. ಧಾರವಾಡ ಹೈಕೋರ್ಟ್ ನಲ್ಲಿ ಹೆಚ್ಚುವರಿ ಎಜಿ ವಿದ್ಯಾವತಿ ಅವರಿಗೆ ಮನವಿ ನೀಡಿದ್ದೇವೆ. ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ. ಅದು ಬಿಟ್ಟು ಈ ರೀತಿ ಮಾತನಾಡಿದ್ದಕ್ಕೆ‌ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ.

Also Read: ಬೆಳಗಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದರಾ ರಾಜ್ಯ ಪೊಲೀಸರು? ಎಂಇಎಸ್​ ಪುಂಡರ ವಿರುದ್ಧ ದೇಶದ್ರೋಹ ಕೇಸ್ ಕೈಬಿಟ್ಟರಾ?

Published On - 2:46 pm, Wed, 16 March 22