PM Kisan Yojana: ರಾಜ್ಯದ ಜನತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ನೀಡಿದರು ನಿಖರ ಮಾಹಿತಿ

Pralhad Joshi: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಲಾಭ ಪಡೆಯಲು ಈ ಕೆಳಗೆ ನೀಡಲಾದ ಪ್ರಕ್ರಿಯೆಯ ಮುಖಾಂತರ ತಾವೇ ಸ್ವತಃ ಇ- ಕೆ.ವೈ.ಸಿ. ಯನ್ನು ಪೂರ್ಣಗೊಳಿಸಬಹುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಜಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ.

PM Kisan Yojana: ರಾಜ್ಯದ ಜನತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ನೀಡಿದರು ನಿಖರ ಮಾಹಿತಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ನೀಡಿದರು ನಿಖರ ಮಾಹಿತಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 30, 2022 | 5:11 PM

#PMKisan ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM Kisan Samman Nidhi Yojana) ಪ್ರಧಾನಿ Narendra Modi ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ದೇಶದ ಪ್ರತಿಯೊಬ್ಬ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಈ ಯೋಜನೆ ಆರಂಭಿಸಿದ್ದು ಇದರ ಲಾಭವನ್ನು ದೇಶದ 10 ಕೋಟಿಗೂ ಹೆಚ್ಚು ರೈತರು ಈಗಾಗಲೇ ಪಡೆಯುತ್ತಿದ್ದಾರೆ. ಪಿಎಮ್ ಕಿಸಾನ್ ಯೋಜನೆ ಫಲಾನುಭವಿಗಳು ಇ- ಕೆವೈಸಿ ಪೂರ್ಣಗೊಳಿಸುವುದು ಅವಶ್ಯಕವಾಗಿದ್ದು, ಈ ಕೆಳಗೆ ನೀಡಲಾದ ಪ್ರಕ್ರಿಯೆಯ ಮುಖಾಂತರ ತಾವೇ ಸ್ವತಃ ಇ- ಕೆ.ವೈ.ಸಿ. ಯನ್ನು ಪೂರ್ಣಗೊಳಿಸಬಹುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಜಾದ್ ಜೋಶಿ (Pralhad Joshi) ಅವರು ಮಾಹಿತಿ ನೀಡಿದ್ದಾರೆ.

1. ಪಿಎಮ್ ಕಿಸಾನ್ ನ ಜಾಲತಾಣಕ್ಕೆ ಭೇಟಿ ನೀಡಿ

2. ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ನೀಡಿರುವ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ

3. ಓಟಿಪಿ ಬೇಸ್ಡ್ ಇಕೆವೈಸಿ ವಿಭಾಗದ ಅಡಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ

4. ಸರ್ಚ್ ಮೇಲೆ ಕ್ಲಿಕ್ ಮಾಡಿ

5. ಆಧಾರನೊಂದಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಫೋನ್ ನಂಬರ್ ನಮೂದಿಸಿ ಹಾಗು ʼಗೆಟ್ ಓಟಿಪಿʼ ಮೇಲೆ ಕ್ಲಿಕ್ ಮಾಡಿ

6. ಓಟಿಪಿ ಎಂಟರ್ ಮಾಡಿ

7. ನಿಮ್ಮ ಇ-ಕೆವೈಸಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

ಸೂಚನೆ: ಯಾವುದೇ ತರಹದ ಸಹಾಯಕ್ಕಾಗಿ ಅಥವಾ ಪ್ರಶ್ನೆಗಳಿದ್ದಲ್ಲಿ ಪಿಎಮ್ ಕಿಸಾನ್ ಸಹಾಯವಾಣಿಗೆ ಸಂಪರ್ಕಿಸಿ 011-24300606. ಹಾಗೂ ಆಧಾರ್ ಕಾರ್ಡ್ನ ಓಟಿಪಿ ಸಂಬಂಧಿತ ಸಹಾಯಕ್ಕಾಗಿ aead@nic.in ಗೆ ಸಂಪರ್ಕಿಸಿ.