ಮಳೆ ಹಾನಿ ಪ್ರದೇಶಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ: ಸಂತ್ರಸ್ತರ ಅಹವಾಲು ಸ್ವೀಕಾರ
ನಿನ್ನೆ ಬೆಣ್ಣೆಹಳ್ಳದ ನೀರಿನ ರಭಸಕ್ಕೆ ಒಬ್ಬ ಕೊಚ್ಚಿ ಹೋಗಿದ್ದ. ಅಲ್ಲದೇ ನೂರಾರು ಏಕರೆ ಜಮೀನುಗಳಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿತ್ತು. ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಂದ ಪ್ರಹ್ಲಾದ್ ಜೋಶಿ ಅಹವಾಲು ಸ್ವೀಕರಿಸಿದರು.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಮಳೆಯಿಂದ ಹಲವೆಡೆ ಹಾನಿ ಉಂಟಾಗಿದ್ದು, ಮಳೆ ಹಾನಿ ಪ್ರದೇಶಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಿನ್ನೆ ಬೆಣ್ಣೆಹಳ್ಳದ ನೀರಿನ ರಭಸಕ್ಕೆ ಒಬ್ಬ ಕೊಚ್ಚಿ ಹೋಗಿದ್ದ. ಅಲ್ಲದೇ ನೂರಾರು ಏಕರೆ ಜಮೀನುಗಳಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿತ್ತು. ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಂದ ಪ್ರಹ್ಲಾದ್ ಜೋಶಿ ಅಹವಾಲು ಸ್ವೀಕರಿಸಿದರು. ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧ್ಯಕ್ಷರಾದ ಬಸವರಾಜ್ ಕುಂದಗೋಳಮಠ, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರು ಜೊತೆಗಿದ್ದರು.
ದಿಢೀರನೆ ಹೆಚ್ಚಾದ ಹಳ್ಳದ ಹರಿವು: ಓರ್ವ ನೀರು ಪಾಲು
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ಬೆಣ್ಣೆಹಳ್ಳದಲ್ಲಿ ದಿಢೀರನೆ ನೀರಿನ ಹರಿವು ಹೆಚ್ಚಿದೆ. ಇದರಿಂದ ಹಳ್ಳದಲ್ಲಿ 20 ಜನ ಸಿಲುಕಿದ್ದು ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹಳ್ಳದಲ್ಲಿನ ನೀರಿನ ರಭಸಕ್ಕೆ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಜಮೀನು ಕೆಲಸಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ತಹಶೀಲ್ದಾರ್ ಪ್ರಕಾಶ ನಾಶಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ತಹಶೀಲ್ದಾರ್ ಪ್ರಕಾಶ್ ನಾಶಿ ಕಾರ್ಯಾಚರಣೆ ನಡೆಸಿದ್ದಾರೆ.
ನೀರಿನಲ್ಲಿ ಕೊಚ್ಚಿಕೊಂಡು ಹೋದ ಓರ್ವ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಜಮೀನಿಗೆ ಕೆಲಸಕ್ಕೆಂದು ತೆರಳಿದ್ದು ವಾಪಸ್ ಬರುವಾಗ ಏಕಾಏಕಿ ಹಳ್ಳದ ನೀರು ಹೆಚ್ಚಾದ ಕಾರಣ ಜನ ಸಿಲುಕಿಕೊಂಡಿದ್ದರು. ಧಾರವಾಡ ಅಕ್ಕಪಕ್ಕ ಮಳೆಯಾಗ್ತಿರೋದ್ರಿಂದ ನೀರಿನ ಹರಿವು ಹೆಚ್ಚಾಗಿದೆ.
ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ಎಸಿ ಭೇಟಿ
ಗದಗ: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎನ್, ಎಸಿ ಅನ್ನಪೂರ್ಣ ಭೇಟಿ ನೀಡಿ ಪರಿಶೀಲಿಸಿದರು. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದು, ಶೆಟ್ಟಿಕೆರೆ ಭರ್ತಿಯಾಗಿ, ಕೊಡಿ ಬಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಪರಿಹಾರ ಭರವಸೆ ನೀಡಿದರು.
Published On - 7:32 pm, Tue, 30 August 22




