ಪ್ರತಿಭಟನೆ ಮಾಡದೇ ಹೋಗಿದ್ರೆ ಅನೇಕ ಹಿಂದೂ ಕಾರ್ಯಕರ್ತರನ್ನ ಬಂಧಿಸುತ್ತಿದ್ದರು: ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕರಸೇವಕ ಶ್ರೀಕಾಂತ ಪೂಜಾರಿಯನ್ನು ಅರೆಸ್ಟ್ ಮಾಡಲು ಯಾವ ದಾಖಲೆ ಇರಲಿಲ್ಲ. ಹೀಗಾಗಿ ಕೋರ್ಟ್ ಬಿಡುಗಡೆ ಮಾಡಿದೆ. ನಾವು ಪ್ರತಿಭಟನೆ ಮಾಡದೇ ಹೋಗಿದ್ದರೆ ಇನ್ನು ಅನೇಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿ, ಜನವರಿ 05: ರಾಮಜನ್ಮಭೂಮಿ ಹೋರಾಟದ ಕೇಸ್ನಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಯನ್ನು ಅರೆಸ್ಟ್ ಮಾಡಲು ಯಾವ ದಾಖಲೆ ಇರಲಿಲ್ಲ. ಹೀಗಾಗಿ ಕೋರ್ಟ್ ಬಿಡುಗಡೆ ಮಾಡಿದೆ. ನಾವು ಪ್ರತಿಭಟನೆ ಮಾಡದೇ ಹೋಗಿದ್ದರೆ ಇನ್ನು ಅನೇಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೊಸ ಬಾಂಬ್ ಸಿಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ವಿರುದ್ದ ಅಸಭ್ಯವಾಗಿ ಮಾತಾಡಿರುವುದಕ್ಕೆ ನೀವು ರಾಜ್ಯಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ಈ ಕೇಸ್ನ ಎಫ್ಐಆರ್ ಕಾಪಿ ಕೂಡ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಕಾಲದಲ್ಲಿ ರಾಮ ಮಂದಿರ ಆಗುತ್ತಿದೆ ಎಂಬ ಕಾರಣಕ್ಕೆ ಹೊಟ್ಟೆ ಕಿಚ್ಚಿನಿಂದ ಅರೆಸ್ಟ್ ಮಾಡಿದ್ದಾರೆ. ಹಿಂದೂ ದ್ವೇಷದಿಂದ ಅರೆಸ್ಟ್ ಮಾಡಿದ್ದೀರಿ ತಾನೆ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕಾನೂನು ರೀತಿ ನಡೆದುಕೊಂಡಿದ್ದೇವೆ ಎಂದಿತ್ತು. ನಾವು ಹಿಂದೂ ವಿರೋಧಿ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ನಾನು ಸಿದ್ದರಾಮಯ್ಯ ಅವರನ್ನು ಕೇಳುತ್ತೇನೆ, ನಿಮಗೆ ಮಾಹಿತಿ ಕೊಟ್ಟ ಅಧಿಕಾರಿಗಳು ನಿಮ್ಮನ್ನು ದಾರಿ ತಪ್ಪಿಸಿದ್ದಾರೆ. ಏಕೆಂದರೆ A1 ಖುಲಾಸೆಯಾಗಿದ್ದಾನೆ. ನನಗೆ ನೆನಪಿರುವ ಹಾಗೆ A7 ಖುಲಾಸೆ ಆಗಿದ್ದಾನೆ. ಎಲ್ಲರೂ ಖುಲಾಸೆ ಆಗಿದ್ದಾರೆ ಎಂದಿದ್ದಾರೆ.
ಸರ್ಕಾರವೇ ಇದನ್ನು ನಿಂತು ಮಾಡಿಸಿದೆ
ಕೇಸ್ನಲ್ಲಿದ್ದ ಅನೇಕ ಹಿಂದೂ ಯುವಕರನ್ನು ಕರೆಸುತ್ತಿದ್ದರು. ಮುಂದೆ ಹೀಗಾದರೆ ನೀವು ದೊಡ್ಡ ಹೋರಾಟ ಎದುರಿಸಬೇಕಾಗತ್ತೆ ಎಂದು ಹೇಳಿದ್ದೆ. ಸರ್ಕಾರವೇ ಇದನ್ನು ನಿಂತು ಮಾಡಿಸಿದೆ. ಅವನ ಮೇಲೆ ಕೇಸ್ಯಿದೆ ಎಂದು ಹೇಳಿದ್ದರು. ನಿಮ್ಮ ಇಂಟಲಿಜೆನ್ಸ್ ಕತ್ತೆ ಕಾಯುತ್ತಿದೆ. ಸಿದ್ದರಾಮಯ್ಯ ನಿಮಗೆ ಬುದ್ಧಿ ಬೇಡ್ವಾ ಅದನ್ನ ಪರಿಶೀಲನೆ ಮಾಡಬೇಕು. ಅವರಿಗೆ ದಾಖಲೆ ಕೊಟ್ಟವರ ವಿರುದ್ದ ಕ್ರಮ ಆಗಬೇಕು. ನಿಮಗೆ ರಾಜ್ಯ ಆಡಳಿತ ಮಾಡುವ ಯೋಗ್ಯತೆ ಇದೆಯಾ. ಕಾಂಗ್ರೆಸ್ ಮಾಡುವುದು ವೋಟ್ ಪಾಲಟಿಕ್ಸ್. ಕಾಂಗ್ರೆಸ್ಗೆ ಹಿಂದೂ ವಿರೋಧಿ ಪೃವತ್ತಿ ಮೊದಲನಿಂದಲೂ ಇದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್: ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ಬಿಡುಗಡೆ ಅನುಮಾನ
ಜಗದೀಶ್ ಶೆಟ್ಟರ್ ಅವರಂತಹ ಬಾಲಿಶ ಹೇಳಿಕೆಗೆ ನಾವು ಉತ್ತರ ಕೊಡಲ್ಲ. ಅವರು ಬಿಜೆಪಿಯಲ್ಲಿದ್ದಾಗ ರಾಮ ಮಂದಿರ, ಪ್ರಧಾನಿ ಮೋದಿ ಅವರ ಬಗ್ಗೆ ಏನು ಮಾತಾಡಿದ್ದರೂ ಕೇಳಲಿ. ಇಂತಹ ಬಾಲಿಶ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ. ಇವರು ಎಷ್ಟು FIR ಮಾಡುತ್ತಾರೆ ಅದಕ್ಕೆ ಜನ ಸೂಕ್ತ ಉತ್ತರ ಕೊಡುತ್ತಾರೆ.
ವಿಪಕ್ಷ ನಾಯಕರು, ಶಾಸಕರ ಮೇಲೆ FIR ಮಾಡುವುದು ಸರ್ವಾಧಿಕಾರಿ ಧೋರಣೆ. 16 ಕೇಸ್ ಜೋಶಿ ಅವರೇನು ಜಡ್ಜ್ ಎಂದು ಸಿದ್ದರಾಮಯ್ಯ ಕೇಳಿದ್ದರು. ಇವಾಗ ನಾನು ಕೇಳುತ್ತೇನೆ, ನೀವೇನು ಜಡ್ಜಾ? ನಿಮಗೆ ಜ್ಞಾನ ಇಲ್ವಾ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಆರ್ ಅಶೋಕ ಗೃಹ ಸಚಿವನಾಗಿದ್ದಾಗ ಕರಸೇವಕರ ಪ್ರಕರಣಗಳು ನೆನಪಾಗಲಿಲ್ಲವೇ? ಜಗದೀಶ್ ಶೆಟ್ಟರ್, ಎಮ್ಮೆಲ್ಸಿ
ನಿಮಗೆ ದಾಖಲೆ ಕೊಟ್ಟಿರುವುದನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಬೇಕಿತ್ತು. ಯಾರು ನಿಮಗೆ ತಪ್ಪ ಮಾಹಿತಿ ಕೊಟ್ಟಿದಾರೋ ಅವರ ವಿರುದ್ದ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.