AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡಕ್ಕೆ ಭೇಟಿ ನೀಡಿದ ರೆವರೆಂಡ್ ಫರ್ಡಿನೆಂಡ್ ಕಿಟ್ಟೆಲ್​ನ ಮರಿಮೊಮ್ಮಕ್ಕಳು

ಕನ್ನಡ ನಿಘಂಟು ತಜ್ಞ ರೆವರೆಂಡ್ ಫರ್ಡಿನೆಂಡ್ ಕಿಟ್ಟೆಲ್ ಅವರ ಕುಟುಂಬದ 4 ಮತ್ತು 5ನೇ ತಲೆಮಾರಿನ ಕುಡಿಗಳು ಇಂದು ಧಾರವಾಡಕ್ಕೆ ಭೇಟಿ ನೀಡಿದ್ದರು

ಧಾರವಾಡಕ್ಕೆ ಭೇಟಿ ನೀಡಿದ ರೆವರೆಂಡ್ ಫರ್ಡಿನೆಂಡ್ ಕಿಟ್ಟೆಲ್​ನ ಮರಿಮೊಮ್ಮಕ್ಕಳು
ರೆವರೆಂಡ್ ಫರ್ಡಿನೆಂಡ್ ಕಿಟ್ಟೆಲ್​ನ ಮರಿಮೊಮ್ಮಕ್ಕಳು
TV9 Web
| Edited By: |

Updated on:Nov 11, 2022 | 10:07 PM

Share

ಕನ್ನಡಿಗರಲ್ಲಿ ರೆವರೆಂಡ್ ಫರ್ಡಿನೆಂಡ್ ಕಿಟ್ಟೆಲ್​ರಿಗೆ ಗೊತ್ತಿಲ್ಲ ಹೇಳಿ. ಇಂದಿಗೂ ಕನ್ನಡ ವ್ಯಾಕರಣ ವಿಷಯದಲ್ಲಿ ಕಿಟ್ಟೆಲ್ ಸಂಶೋಧನೆಯ ನಿಘಂಟುವೇ ಸರ್ವಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತದೆ. ಅಂತಹ ಕಿಟ್ಟೆಲ್ ಭಾರತ ಬಿಟ್ಟು ಹೋದ 150 ವರ್ಷಗಳ ಬಳಿಕ ಅವರ ಮರಿಮೊಮ್ಮಕ್ಕಳು ಈಗ ಕಿಟ್ಟೆಲ್​​ರ ಕನ್ನಡ ಕ್ರಾಂತಿಯ ಮೂಲ ಹುಡುಕಿಕೊಂಡು ಜರ್ಮನಿಂದ ಕನ್ನಡ ನಾಡಿಗೆ ಬಂದಿದ್ದಾರೆ.

ಸದ್ಯ ನಮ್ಮ ಕರ್ನಾಟಕ ರಾಜ್ಯೋತ್ಸವ ಮಾಸಾಚರಣೆಯ ಸಂಭ್ರಮದಲ್ಲಿದೆ. ಇದೇ ಸಮಯದಲ್ಲಿ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವೂ ನಡೆಯಬೇಕಿತ್ತು. ಆದರೆ ಆ ಸಂಭ್ರಮ ಈಗ ಮುಂದೂಡಿಕೆಯಾಗಿದ್ದು, ಅನೇಕ ಕನ್ನಡಿಗರಿಗೆ ಬೇಸರ ತಂದಿದೆ. ಆದರೆ ಈಗ ಕನ್ನಡಿಗರು ಸಂಭ್ರಮಿಸುವ ಬೆಳವಣಿಗೆಯೊಂದು ಧಾರವಾಡದಲ್ಲಿ ನಡೆದಿದೆ. ಹೌದು, ಈ ಸಂಭ್ರಮಕ್ಕೆ ಈಗ ಕಾರಣವಾಗಿದ್ದು ಜರ್ಮನಿಯಿಂದ ನಮ್ಮ ರಾಜ್ಯಕ್ಕೆ ಬಂದ ಕನ್ನಡಿಗರ ಪಾಲಿಗೆ ಅಸಾಮಾನ್ಯ ವ್ಯಕ್ತಿಯಾಗಿರೋ ಕನ್ನಡ ನಿಘಂಟು ತಜ್ಞ ರೆವರೆಂಡ್ ಫರ್ಡಿನೆಂಡ್ ಕಿಟ್ಟೆಲ್ ಅವರ ಕುಟುಂಬದ 4 ಮತ್ತು 5ನೇ ತಲೆಮಾರಿನ ಕುಡಿಗಳು.

ಕಿಟ್ಟೆಲ್ ಅವರ ಮರಿಮೊಮ್ಮಗಳು ಅಲ್ಮತ್ ಮೆಯರ್ ಹಾಗೂ ಅವರ ಮಗ ಯವೆಸ್ ಪ್ಯಾಟ್ರಿಕ್ ಮೆಯರ್ ಮತ್ತು ಸಂಬಂಧಿ ಜಾನ್ ಫೆಡ್ರಿಕ್ ಅವರು ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ವಿದ್ಯಾಕಾಶಿ ಧಾರವಾಡದಲ್ಲಿ ಕಿಟ್ಟೆಲ್ ಅವರ ಸ್ಮರಣಾರ್ಥ ಧಾರವಾಡದಲ್ಲಿ ಕಿಟ್ಟೆಲ್ ಕಾಲೇಜ್, ಅವರು ವಾಸಿಸುತ್ತಿದ್ದ ಮನೆಗಳಿಗೆ ಮರಿಮೊಮ್ಮಗಳು ಭೇಟಿ ನೀಡಿದರು. ಇದೇ ವೇಳೆ ಇವರನ್ನು ಸಮಸ್ತ ಧಾರವಾಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಧಾರವಾಡ ಜನರೊಂದಿಗೆ ಅವರು ಸಂವಾದವನ್ನೂ ನಡೆಸಿದರು.

1854ರ ವೇಳೆಗೆ ಜರ್ಮನ್ನಿಂದ ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದ ಕಿಟ್ಟೆಲ್ ಅವರು ಎರಡು ವರ್ಷಗಳ ಕಾಲ ಧಾರವಾಡದಲ್ಲಿ ಉಳಿದು, ಇಲ್ಲಿಂದಲೇ ಕನ್ನಡವನ್ನೂ ಕಲೆತು. ಕನ್ನಡ ಶಬ್ದಕೋಶಗಳ ಮೇಲೆ ಸಂಶೋಧನೆಯನ್ನೂ ಸಹ ಮಾಡಿ, ಕನ್ನಡ ನಿಘಂಟು ತಯಾರಿಸಿದ್ದರು. ಆ ಬಳಿಕ ಅವರು 1856ರಲ್ಲಿ ಧಾರವಾಡದಿಂದ ಹೋಗಿದ್ದರು. ಆದರೆ ಸುದೀರ್ಘ 166 ವರ್ಷಗಳಿಂದ ಕಿಟ್ಟೆಲ್ ಕುಟುಂಬದ ಯಾರೊಬ್ಬರೂ ಸಹ ಇಲ್ಲಿಗೆ ಬಂದಿರಲಿಲ್ಲ. ಕುಟುಂಬ ಸದಸ್ಯರು 2-3 ಸಲ ಬೇರೆ ಬೇರೆ ಕಾರಣಕ್ಕೆ ಭಾರತ ಪ್ರವಾಸಕ್ಕೆ ಬಂದಿದ್ದರೂ ಕೂಡ ಧಾರವಾಡಕ್ಕೆ ಬಂದಿರಲಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಅವರು ಧಾರವಾಡಕ್ಕೆ ಬಂದಿದ್ದರು. ಹೀಗಾಗಿ ಇವರನ್ನು ಅದ್ದುರಿಯಾಗಿ ಸ್ವಾಗತಿಸಿಕೊಂಡು ಸನ್ಮಾನಿಸಲಾಯಿತು. ಈ ವೇಳೆ ಕಿಲೆಟ್ ಕುಟುಂಬದ 5ನೇ ಕುಡಿ ಅಲ್ಮತ್ ಮೆಯರ್ ಮಾತನಾಡಿ, ಇದು ನಮಗೆ ಹೆಮ್ಮೆಯ ಕ್ಷಣ ಎಂದು ಹೇಳಿದರಲ್ಲದೇ ಕಿಟೆಲ್ ಅವರು ಬಳಸುತ್ತಿದ್ದ ಕನ್ನಡಕ ಸೇರಿದಂತೆ ಐದಾರು ಮಹತ್ವದ ವಸ್ತುಗಳನ್ನು ಧಾರವಾಡದಲ್ಲಿರುವ ಕಿಟ್ಟೆಲ್ ಕಾಲೇಜ್​ಗೆ ಮ್ಯೂಸಿಯಂ ಆಗಿ ಮಾಡಲು ನೀಡುತ್ತೇವೆ ಎಂದು ಹೇಳಿದರು. ಅಷ್ಟೇ ಅಲ್ಲದೇ ಆಗಾಗ ಧಾರವಾಡಕ್ಕೆ ಬರುತ್ತಲೇ ಇರ್ತವಿ ಎಂದು ಹೇಳಿದ್ದಾರೆ.

ಹಾಗೇ ನೋಡಿದರೇ ಕಿಟ್ಟೆಲ್ ಕುಟುಂಬಸ್ಥರು ಇಂದು ಹಾವೇರಿಯಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕಿತ್ತು. ಯಾಕಂದರೇ ಕನ್ನಡ ಸಾಹಿತ್ಯ ಪರಿಷತ್ ಇದೇ ಕಾರಣಕ್ಕೆ ಅವರನ್ನು ಮುಂಚಿತವಾಗಿ ಆಹ್ವಾನಿಸಿದ್ದರಿಂದ ಅವರು 10 ದಿನಗಳ ಭಾರತ ಪ್ರವಾಸವನ್ನು ಮುಂಚಿತವಾಗಿಯೇ ನಿಗದಿ ಮಾಡಿಕೊಂಡಿದ್ದರು. ಆದರೇ ಸಮ್ಮೇಳನ ಏಕಾಏಕಿ ಮುಂದಕ್ಕೆ ಹೋಯ್ತು. ಆದರೆ ಇವರು ಮಾತ್ರ ನಿಗದಿಯಂತೆ ಜರ್ಮನಿಯಿಂದ ಬಂದಿದ್ದಾರೆ. ಈಗ ತುಂಬಾ ಖುಷಿಯಾಗಿದ್ದು ಮುಂದೆ ನಡೆಯಲಿರೋ ಸಮ್ಮೇಳನಕ್ಕೆ ಕುಟುಂಬದ ಇತರೆ ಸದಸ್ಯರನ್ನು ಕಳುಹಿಸಿ ಕೊಡುತ್ತೇವೆ ಎಂದು ತಿಳಿಸಿದರು. ಮುಂದಿನ 10 ವರ್ಷಕ್ಕೆ ಕಿಟ್ಟೆಲ್ 200 ವರ್ಷದ ಜನ್ಮದಿನೋತ್ಸವವನ್ನು ಧಾರವಾಡದಲ್ಲಿಯೇ ಮಾಡೋದಕ್ಕೂ ನಿಶ್ಚಯಿಸಿದ್ದಾರೆ.

ವರದಿ-ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ

Published On - 10:07 pm, Fri, 11 November 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?