ಹುಬ್ಬಳ್ಳಿ ಧಾರವಾಡದಲ್ಲಿ ಚುನಾವಣೆಗೆ ನಿಲ್ಲಲು ಸಜ್ಜಾದ SDPI ಹಾಗೂ AIMIM ಪಕ್ಷಗಳು
ರಾಜ್ಯದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ. ಮುಂಬರುವ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲು ರಾಷ್ಟ್ರೀಯ ಪಕ್ಷಗಳು ಪೈಪೋಟಿಗೆ ಬಿದ್ದಿವೆ. ಈ ಮದ್ಯೆ ಅಲ್ಲಿ ನಡೆದ ಗಲಾಟೆ ವೇಳೆ ನಮಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಿಲ್ಲ ಅನ್ನೋ ಕಾರಣಕ್ಕೆ SDPI ಹಾಗೂ AIMIM ಎರಡು ಪಕ್ಷಗಳು ಅಲ್ಲಿ ಚುನಾವಣೆಗೆ ರೆಡಿಯಾಗಿವೆ.
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆ ಯಾರಿಗೆ ನೆನಪಿಲ್ಲ ಹೇಳಿ, ಈ ಗಲಾಟೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ವಾಟ್ಸಪ್ ಸ್ಟೇಟಸ್ ಹಾಕಿದ ಪರಿಣಾಮ ಹೊತ್ತಿಕೊಂಡ ಬೆಂಕಿ, ಜ್ವಾಲೆಯಾಗಿ ಉರಿದಿತ್ತು. ಪೊಲೀಸ್ ಠಾಣೆ ಮುಂಭಾಗವೇ ಒಂದು ಗುಂಪು ದೊಡ್ಡ ಮಟ್ಟದ ಹೋರಾಟ ಮಾಡಿ, ಪೊಲೀಸ್ ಜೀಪ್ಗೆ ಬೆಂಕಿ ಹಚ್ಚಿದ್ರು. ಈ ಘಟನೆ ನಡೆದು ಬರೋಬ್ಬರಿ ಒಂದು ವರ್ಷ ಕಳೀತಾ ಬಂತು, ಇನ್ನು ಸುಮಾರು 150 ಕ್ಕೂ ಹೆಚ್ಚು ಜನ ಜೈಲಲ್ಲಿದ್ದಾರೆ. ಆದರೆ ಚುನಾಚಣೆ ಹೊತ್ತಲ್ಲಿ ಮತ್ತೆ ಈ ಘಟನೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಆ ಘಟನೆಯಲ್ಲಿ ಜೈಲು ಸೇರಿದವರು ಅಲ್ಪಸಂಖ್ಯಾತರರು. ಮೊದಲಿನಂದಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿರುವ ಅಲ್ಪ ಸಂಖ್ಯಾತರರು ಜೈಲಲ್ಲಿ ಇದ್ದು ಒಂದು ವರ್ಷ ಆದ್ರೂ ಕಾಂಗ್ರೆಸ್ ನಾಯಕರು ಯಾರಿಗೂ ಸಹಾಯ ಮಾಡಿಲ್ಲ. ಇದು ಅಲ್ಪ ಸಂಖ್ಯಾತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ SDPI ಇದನ್ನು ತೀವೃವಾಗಿ ಖಂಡಿಸಿತ್ತು. ಅಮಾಯಕರು ಅರೆಸ್ಟ್ ಆದ್ರೂ ನಮಗೆ ಯಾರೂ ಸಹಾಯ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದೀಗ ಇದನ್ನೆ ಬಂಡವಾಳ ಮಾಡಿಕೊಂಡ SDPI ಹುಬ್ಬಳ್ಳಿ ಧಾರವಾಡದಲ್ಲಿ ಚುನಾವಣಾ ಕಣಕ್ಕೆ ಧುಮುಕಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ SDPI ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ( SDPI ರಾಜ್ಯ ಚುನಾವಣೆ ಉಸ್ತುವಾರಿ) ನಾವು ಹುಬ್ಬಳ್ಳಿ ಧಾರವಾಡದಲ್ಲಿ ಚುನಾವಣೆಗೆ ನಿಲ್ತೀವಿ ಎಂದಿದ್ದಾರೆ. ರಾಜ್ಯದಲ್ಲಿ ಈಗಾಗಲೇ 54 ಕ್ಷೇತ್ರದಲ್ಲಿ ಅಭ್ಯರ್ಥಿ ಫೈನಲ್ ಮಾಡಿರುವ SDPI, ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ರೆಡಿಯಾಗಿದೆ. ಈಗಾಗಲೇ ನಾಲ್ಕೈದು ಜನ ಅಭ್ಯರ್ಥಿಗಳು ಸ್ಪರ್ಧಿಸೋಕೆ ಉತ್ಸುಕರಾಗಿದ್ದು ಅಭ್ಯರ್ಥಿ ಫೈನಲ್ ಆಗಿಲ್ಲ. ಎರಡನೇ ಹಂತದಲ್ಲಿ ಧಾರವಾಡ ಜಿಲ್ಲೆಯ ಉಳಿದ ಕ್ಷೇತ್ರದಲ್ಲೂ ಅಭ್ಯರ್ಥಿ ಹಾಕುವ ಬಗ್ಗೆ SDPI ತಯಾರಿ ನಡೆಸಿದೆ. SDPI ಮುಖ್ಯ ಅಜೆಂಡವೇ ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಸಹಾಯ ಮಾಡಿದವರ ವಿರುದ್ದ ಸೇಡು ತೀರಿಸಿಕೊಳ್ಳೋದು ಅಂತಾ ಕಾಣತ್ತೆ. ಅಮಾಯಕರು ಅರೆಸ್ಟ್ ಮಾಡಿದ್ರು, ನಮಗೆ ಯಾರೂ ಸಹಾಯ ಮಾಡಿಲ್ಲ ಎಂದೇ SDPI ಹೇಳಿ ಚುನಾವಣೆಗೆ ಹೋಗುತ್ತಿದೆ.
ಹುಬ್ಬಳ್ಳಿ ಧಾರಾವಡದಲ್ಲಿ SDPI ಅಲ್ಲ, ಅಸಾವುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷವೂ ಚುನಾವಣೆಗೆ ರೆಡಿಯಾಗಿದೆ. ಈಗಾಗಲೇ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯಲ್ಲಿ ಮೂರು ಜನ AIMIM ದಿಂದ ಗೆದ್ದಿದ್ದಾರೆ. ಇದೀಗ AIMIM ರಾಜ್ಯ ವಿಧಾನಸಭೆ ಚುನಾವಣೆಗೆ ನಿಲ್ಲೋಕೆ ರೆಡಿಯಾಗಿದ್ದು, ಧಾರವಾಡದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕೋಕೆ ರೆಡಿಯಾಗಿದ್ದಾರೆ. ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ ಸುದ್ದಿಯಾಗಿದ್ದ AIMIM ಇದೀಗ, ವಿಧಾನಸಭೆ ಚುನಾಚಣೆಗೂ ರೆಡಿಯಾಗಿದೆ. ಈಗಾಗಲೇ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ ಫೈನಲ್ ಆಗಿದ್ದು, ಘೋಷಣೆ ಒಂದೇ ಬಾಕಿ ಎನ್ನಲಾಗಿದೆ. ಇನ್ನು AIMIM ಪಕ್ಷದ ಜಿಲ್ಲಾಧ್ಷಕರೇ ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಅರೆಸ್ಟ್ ಆಗಿದ್ದು, ಬೇಲ್ ಮೇಲೆ ಹೊರಗಡೆ ಇದ್ದಾರೆ. ಅವರು ಕೂಡಾ ಹಳೇ ಹುಬ್ಬಳ್ಳಿ ಗಲಾಟೆಗೆ ಪ್ರತೀಕಾರ ತೀರಿಸಿಕೊಳ್ಳೋ ತವಕದಲ್ಲಿದ್ದಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ AIMIM ಪಕ್ಷ ಚುನಾವಣೆಗೆ ರೆಡಿಯಾಗಿದೆ.
ಒಂದು ಗಲಾಟೆ ನೆಪ ಮಾಡಿಕೊಂಡು ಎರಡು ಪಕ್ಷಗಳು ಇದೀಗ ಚುನಾವಣೆಗೆ ಧುಮುಕುತ್ತಿವೆ. ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರನ್ನ ಅಮಾಯಕರೆಂದು SDPI ಹೇಳ್ತಾ ಪ್ರಚಾರ ಆರಂಭಿಸಿದೆ. ಇತ್ತ AIMIM ಸೈಲೆಂಟ್ ಆಗಿ ಚುನಾವಣೆಗೆ ರೆಡಿಯಾಗುತ್ತಿದೆ. ಆದ್ರೆ ತಮ್ಮ ಸಮುದಾಯದವರು ಅರೆಸ್ಟ್ ಆಗಿರೋದಕ್ಕೆ ಇವರು ಅಮಾಯಕರೆಂದು ಹೇಳ್ತಿರೋದು ನಿಜಕ್ಕೂ ದುರಂತ. ಇಂತಹವರಿಗೆ ಅದ್ಯಾರು ವೋಟ್ ಹಾಕ್ತಾರೋ ದೇವರೇ ಬಲ್ಲ.
ವರದಿ: ಶಿವಕುಮಾರ್ ಪತ್ತಾರ್ ಟವಿ9 ಹುಬ್ಬಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:11 pm, Mon, 13 February 23