Hubballi: ನೇಕಾರ ನಗರದಲ್ಲಿ ಹೊಂಚುಹಾಕಿ ವೃದ್ಧ ದೊಡ್ಡಮನ ಹತ್ಯೆ ಮಾಡಿ ಮಗ ಪರಾರಿ, ಕಾರಣವೇನು?

| Updated By: ಸಾಧು ಶ್ರೀನಾಥ್​

Updated on: Oct 24, 2022 | 2:34 PM

ಮಾಲತೇಶ ಮೂರು ದಿನಗಳ ಹಿಂದೆ ಕಮಲಮ್ಮನ ಮನೆಗೆ ಬಂದಿದ್ದ. ಮಾಲತೇಶ್ ಕಮಲಮ್ಮ‌ ಸಹೋದರಿಯ ಮಗ. ಮೂರು ದಿನ ಕಮಲಮ್ಮನ ಮನೆಯಲ್ಲಿದ್ದು ನಿನ್ನೆ ಭಾನುವಾರ ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

Hubballi: ನೇಕಾರ ನಗರದಲ್ಲಿ ಹೊಂಚುಹಾಕಿ ವೃದ್ಧ ದೊಡ್ಡಮನ ಹತ್ಯೆ ಮಾಡಿ ಮಗ ಪರಾರಿ, ಕಾರಣವೇನು?
ಹುಬ್ಬಳ್ಳಿಯ ನೇಕಾರ ನಗರದಲ್ಲಿ ಹೊಂಚುಹಾಕಿ ವೃದ್ಧ ದೊಡ್ಡಮನ ಹತ್ಯೆ ಮಾಡಿ ಮಗ ಪರಾರಿ, ಕಾರಣವೇನು?
Follow us on

ಹುಬ್ಬಳ್ಳಿ: ಹುಬ್ಬಳ್ಳಿಯ ನೇಕಾರ ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. 70 ವರ್ಷದ ದೊಡ್ಡಮ್ಮ ಕಮಲಮ್ಮ ಅವರನ್ನು ಮಗ ಮಾಲತೇಶ್ ಕೊಲೆ ಮಾಡಿ‌ ಪರಾರಿಯಾಗಿದ್ದಾನೆ. ಬಂಗಾರದ ಆಸೆಗೆ ದೊಡ್ಡಮನನ್ನೆ ಆತ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕಮಲಮ್ಮನ ಕಿವಿಯೋಲೆ, ಕೊರಳಲ್ಲಿನ‌ ಬಂಗಾರಕ್ಕಾಗಿ ಕೊಲೆ ಮಾಡಿದ್ದಾನೆ. ಮಲಗಿದ್ದಲ್ಲಿಯೇ ದೊಡ್ಡಮ್ಮನ ಕಿವಿ ಕಟ್ ಮಾಡಿ ಕಿವಿಯೋಲೆ ದೋಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಮಾಲತೇಶ್.

ಮಾಲತೇಶ ಮೂರು ದಿನಗಳ ಹಿಂದೆ ಕಮಲಮ್ಮನ ಮನೆಗೆ ಬಂದಿದ್ದ. ಮಾಲತೇಶ್ ಕಮಲಮ್ಮ‌ ಸಹೋದರಿಯ ಮಗ. ಮೂರು ದಿನ ಕಮಲಮ್ಮನ ಮನೆಯಲ್ಲಿದ್ದು ನಿನ್ನೆ ಭಾನುವಾರ ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕಮಲಮ್ಮ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು.

ಇಂದು ಸೋಮವಾರ ಮನೆಯ ಬಾಗಿಲು ತರೆಯದೇ ಇದ್ದಾಗ ಅನುಮಾನ ಬಂದು ಪಕ್ಕದ ಮನೆಯವರು ಬಾಗಿಲು ತಗೆದಾದ ಕೊಲೆಯಾಗಿರೋದು ಬಯಲಿಗೆ ಬಂದಿದೆ. ಕೊಲೆ ಮಾಡಿ ಪರಾರಿಯಾಗಿರೋ ಮಾಲತೇಶ ಕಲಘಟಗಿ ತಾಲೂಕಿನ ಗಂಬ್ಯಾಪೂರ ನಿವಾಸಿ. ಸ್ಥಳಕ್ಕೆ ಕಸಬಾಪೇಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಬಂಗಾರದ ಆಸೆಗಾಗಿಯೇ‌ ಕೊಲೆ ಮಾಡಿದ್ದಾನೆಂದು ಮೃತ ಕಮಲಮ್ಮನ ಮಗ ಪ್ರಭಯ್ಯ ಆರೋಪ ಮಾಡಿದ್ದಾರೆ.

ಭದ್ರಾವತಿಯಲ್ಲಿ ಶಿವಮೊಗ್ಗದ ಆಟೋ ಚಾಲಕನ ಬರ್ಬರ ಹತ್ಯೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಆಟೋ ಚಾಲಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಭದ್ರಾವತಿ ಎಪಿಎಂಸಿ ಬಳಿ ಆಟೋ ಚಾಲಕ ರೂಪೇಶ್ ​(45) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಶಿವ‌ಮೊಗ್ಗ ನಗರದಲ್ಲಿ ಆಟೋ ಓಡಿಸುತ್ತಿದ್ದ ರೂಪೇಶ್, ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಮೂಲದವನು. ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Published On - 2:26 pm, Mon, 24 October 22