ಬಿಜೆಪಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸ್ತಿವಿ, ಶಾಸಕರ ಮನೆ ಮುಂದೆ ಲೌಡ್ ಸ್ಪೀಕರ್ ಹಾಕ್ತೀವಿ -ಬಿಜೆಪಿಗೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಮೋದ್ ಮುತಾಲಿಕ್
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ವರ್ಷದಿಂದ ಅಜಾನ್ ಮೈಕ್ ವಿರುದ್ಧ ಹೋರಾಟ ಮಾಡ್ತಾಯಿದ್ದೀವಿ ಸರ್ಕಾರ ನಿರ್ಲಕ್ಷ್ಯ ಮಾಡ್ತಾಯಿದ್ದಾರೆ. ಬಿಜೆಪಿ ಶಾಸಕರು ಯಾರು ಬಾಯಿ ಬಿಡ್ತಾಯಿಲ್ಲ. ಇಂದು ನಿರ್ಧಾರ ಮಾಡಿದಂತೆ ನಾವು ಮಾಜಿ ಸಿಎಂ ಎದುರು ಪ್ರತಿಭಟನೆ ಕೂತಿದ್ದೀವಿ ಎಂದರು.
ಹುಬ್ಬಳ್ಳಿ: ಆಜಾನ್ ವಿರುದ್ಧ ಶ್ರೀರಾಮಸೇನೆ 2ನೇ ಹಂತದ ಹೋರಾಟ ಶುರು ಮಾಡಿದೆ. ಹುಬ್ಬಳ್ಳಿಯ ಮಧುರಾ ಎಸ್ಟೇಟ್ನಲ್ಲಿರುವ ಜಗದೀಶ್ ಶೆಟ್ಟರ್ ಮನೆ ಮುಂದೆ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ವರ್ಷದಿಂದ ಅಜಾನ್ ಮೈಕ್ ವಿರುದ್ಧ ಹೋರಾಟ ಮಾಡ್ತಾಯಿದ್ದೀವಿ ಸರ್ಕಾರ ನಿರ್ಲಕ್ಷ್ಯ ಮಾಡ್ತಾಯಿದ್ದಾರೆ. ಬಿಜೆಪಿ ಶಾಸಕರು ಯಾರು ಬಾಯಿ ಬಿಡ್ತಾಯಿಲ್ಲ. ಇಂದು ನಿರ್ಧಾರ ಮಾಡಿದಂತೆ ನಾವು ಮಾಜಿ ಸಿಎಂ ಎದುರು ಪ್ರತಿಭಟನೆ ಕೂತಿದ್ದೀವಿ. ಬಿಜೆಪಿ ಶಾಸಕರ ಕಚೇರಿ ಎಲ್ಲೊ ಇದೆ, ಬೀಗ ಹಾಕಿದ್ದೀವಿ ಅಂತಾರೆ. ಕಚೇರಿ ಒಂದು ಕಡೆ ಇದ್ರೆ, ಶಾಸಕರು ಒಂದು ಕಡೆ ಇರ್ತಾರೆ. ಇವರಿಗೆ ಸಂಘ ಬೇಕು ಆದ್ರೆ ಸಂಘದ ಸಿದ್ದಾಂತಗಳು ಬೇಡ. ಹಿಂದೂಗಳು ಬೇಕು ಆದ್ರೆ ಹಿಂದೂತ್ವ ಬೇಡ. ಮೈಕ್ ತೆರವಿಗೆ ನಾವು ಸಾಕಷ್ಟು ಮನವಿ ಮಾಡಿದ್ದೇವೆ. ಇದನ್ನೂ ಓದಿ: ಹಿಂದೂ ನಾಯಕ ಯಶಪಾಲ ಸುವರ್ಣಗೆ ಕೊಲೆ ಬೆದರಿಕೆ! ಆರೋಪಿಗಳಿಗೆ ಕ್ರಮ ಜರಗಿಸುವಂತೆ ಒತ್ತಾಯ
ಸಿಎಂ ಬಸವರಾಜ ಬೊಮ್ಮಾಯಿಯವರೆ ಒಮ್ಮೆ ಯೋಗಿ ಆದಿತ್ಯರನ್ನ ನೋಡಿ. 69 ಸಾವಿರ ಮೈಕ್ ಗಳನ್ನ ತೆರವು ಗೊಳಿಸಿದ್ದಾರೆ. ನೀವು ಹತ್ತಾದ್ರು ಮೈಕ್ ಇಳಿಸಿ. ಕೆಲವರು ಸೊಕ್ಕಿಗೆ ಬರ್ತಾಯಿದ್ದಾರೆ, ಅವರಿಗೆ ನ್ಯಾಯಾಲಯ ಇಲ್ಲ ಎನ್ನುವಂತಾಗಿದೆ. ನಾವು ದೂರು ನೀಡಿದ್ರು ನೀವು ಕೇಳ್ತಾಯಿಲ್ಲ. ನಿಮ್ಮ ಮೌನ ಸರಿಯಲ್ಲ. ನಿಮ್ಮನ್ನು ಗೆಲ್ಲಿಸಿದ್ದು ಯಾಕೆ ಎಂದು ಬಿಜೆಪಿ ಶಾಸಕರಿಗೆ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಅಜಾನ್ ವಿರುದ್ಧ ಹೋರಾಟ ನಡೆಸಿದ್ರು ಅದು ಇದುವರೆಗೂ ನಿಂತಿಲ್ಲ, ಇದರಿಂದ ಜನರಿಗೆ ತೊಂದರೆ ಆಗ್ತಿದೆ. ಇಷ್ಟೆಲ್ಲ ಆದ್ರು ಯಾಕೆ ಬಿಜೆಪಿ ಶಾಸಕರು ನಿದ್ದೆ ಮಾಡ್ತಾಯಿದ್ದಿರಿ. ಇದು ಕೊನೆ ಎಚ್ಚರಿಕೆ, ಬಂದ್ ಮಾಡದೆಯಿದ್ದಲ್ಲಿ ಬಿಜೆಪಿ ಶಾಸಕರ ಮನೆ ಮುಂದೆ ಲೌಡ್ ಸ್ಪೀಕರ್ ಹಾಕ್ತೆವಿ. ನ್ಯಾಯಾಲಯದ ಆದೇಶ ನಿರ್ಲಕ್ಷ್ಯ ಮಾಡ್ತಾಯಿದ್ದಾರೆ. ಬಿಜೆಪಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸ್ತಿವಿ, ನೋಟಾ ಮತ ಚಲಾವಣೆ ಮಾಡ್ತಿವಿ. ಬಿಜೆಪಿಯವರು ಹಿಂದೂ ಸಂಘಟನೆಗಳನ್ನ ದುರುಪಯೋಗ ಮಾಡಿಕೊಳ್ತಾಯಿದ್ದಾರೆ. ಹಿಂದೂ ಸಂಘಟನೆಗಳಿಗೆ ಯಾವುದೆ ರೀತಿ ಸ್ಪಂದನೆ ಮಾಡ್ತಾಯಿಲ್ಲ. ಇವರಿಗೆ ಸಂಘ ಬೇಕು ಸಂಘದ ತತ್ವ ಬೇಡವಾಗಿದೆ. ಬಿಜೆಪಿ ಶಾಸಕರು ರಾಜ್ಯದಲ್ಲಿ ಸೊಕ್ಕಿನಲ್ಲಿದ್ದಾರೆ. ನಿಮ್ಮ ಅಧಿಕಾರಿದಲ್ಲಿ ನಮ್ಮ ಸಂಘಟನೆಗಳ ಪಾಲಿದೆ ಇದನ್ನ ನೆನಪಿಸಿಕೊಳ್ಳಿ. ಯೋಗಿ ಆದಿತ್ಯ ನಾಥ 60 ಸಾವಿರ ಮೈಕ್ ತೆರವು ಗೊಳಿಸದ್ದಾರೆ. ನಿಮಗೆ ಆಗಿಲ್ಲ ಅಂದ್ರೆ ಹೇಳಿ ನಾವು ಕೆಳಗಿಳಿಸ್ತಿವಿ. ಬಿಜೆಪಿ ಶಾಸಕರೆ ಕೋರ್ಟ್ ಏನ್ ಹೇಳಿದೆ ಅದನ್ನ ಮಾಡಿ. ಎಲ್ಲಾ ವಿಷಯದಲ್ಲೂ ನಾವೆ ದ್ವನಿ ಎತ್ತಬೇಕು. ನಾವೇ ಕೇಸ್ ಹಾಕೋಬೇಕು. ಎಲ್ಲದಕ್ಕೂ ನಾವೆ ಇದ್ರೆ ನೀವೇನ ಮಾಡೋಕೆ ಇದಿರಿ. ಬಿಜೆಪಿ ಶಾಸಕರ ತಪ್ಪನ್ನ ಅರಿವು ಮಾಡೋಕೆನೆ ಅವರ ಮನೆ ಎದುರು ಪ್ರತಿಭಟನೆ ನಡೆಸ್ತಾಯಿದ್ದೆವೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ