ಚಂದ್ರಶೇಖರ ಗುರೂಜಿ ಅಂತ್ಯಸಂಸ್ಕಾರ ಮುಗಿಸಿ ಮರಳುತ್ತಿದ್ದ ಸ್ವಾಮೀಜಿ ಕಾರು ಅಪಘಾತ; ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಜಮೀನಿನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ ನೆರವೇರಿದ್ದು ಅಂತ್ಯಸಂಸ್ಕಾರ ಮುಗಿಸಿ ನಿಡಸೋಶಿಗೆ ಮರಳುವಾಗ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಕಾರು ಅಪಘಾತವಾಗಿದೆ.
ಧಾರವಾಡ: ಚಂದ್ರಶೇಖರ ಗುರೂಜಿ(Chandrashekhar Guruji) ನಿಧನ ಹಿನ್ನೆಲೆ ಅಂತ್ಯಸಂಸ್ಕಾರ ಮುಗಿಸಿ ಮರಳುತ್ತಿದ್ದ ಸ್ವಾಮೀಜಿ ಕಾರು ಧಾರವಾಡ ತಾಲೂಕಿನ ತೇಗೂರ ಬಳಿ ಅಪಘಾತಕ್ಕೀಡಾಗಿದೆ(Car Accident). ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಶಿ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಜಮೀನಿನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ ನೆರವೇರಿದ್ದು ಅಂತ್ಯಸಂಸ್ಕಾರ ಮುಗಿಸಿ ನಿಡಸೋಶಿಗೆ ಮರಳುವಾಗ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಕಾರು ಅಪಘಾತವಾಗಿದೆ. ಸ್ವಾಮೀಜಿಗಳಿಗೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗರಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬ್ರಿಟಿಷ್ ಪ್ರಧಾನಿ ಮೇಲೆ ಹೆಚ್ಚಿದ ಒತ್ತಡ; ರಾಜೀನಾಮೆ ನೀಡುವುದಿಲ್ಲ ಎಂದ ಬೋರಿಸ್ ಜಾನ್ಸನ್
ಮಣ್ಣಲ್ಲಿ ಮಣ್ಣಾದ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ, ಅಣ್ಣನ ಮಗನಿಂದ ಅಂತಿಮ ಪೂಜೆ, ಮರುಗಿದ ಶ್ವಾನ ಪ್ರಿನ್ಸ್ ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ಅಣ್ಣನ ಮಗ ಸಂತೋಷ್ ಅಂಗಡಿ ಅಂತಿಮ ವಿಧಿವಿಧಾನ ನೆರವೇರಿಸಿದ್ರು. ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿದ್ರು. ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ. ಅರ್ಚಕ ಕೋಟ್ರಯ್ಯಶ್ರೀಗಳ ನೇತೃತ್ವದಲ್ಲಿ ಪುತ್ರಿ ಸ್ವಾತಿ, ಅಣ್ಣನ ಮಗ ಸಂತೋಷ್ನಿಂದ ವಿಧಿವಿಧಾನ ನೆರವೇರಿತು. 10 ಸ್ವಾಮೀಜಿಗಳು ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ರು.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯ್ತು. ಹುಬ್ಬಳ್ಳಿಯಿಂದ ಸುಳ್ಳಾ ಗ್ರಾಮದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಹುಬ್ಬಳ್ಳಿಯಿಂದ ಸುಳ್ಳಾದತ್ತ ಪಾರ್ಥೀವರ ಶರೀರ ಶಿಫ್ಟ್ ಮಾಡ್ತಿದಂತೆ, ಹಾದಿಯುದ್ದಕ್ಕೂ ಜನರು ಕಿಕ್ಕಿರಿದು ನಿಂತಿದ್ರು. ಗುರೂಜಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ರು. ಚಂದ್ರಶೇಖರ್ ಗುರೂಜಿ ನೆನೆದು ಸಂಬಂಧಿಕರು ಕೂಡ ಬಿಕ್ಕಿ ಬಿಕ್ಕಿ ಅತ್ರು. ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬಂದ ಪುತ್ರಿ ಸ್ವಾತಿ & ಪತ್ನಿ ಅಂಕಿತಾ ಕಣ್ಣೀರಿಟ್ಟರು. ಇದೇ ವೇಳೆ ಗುರೂಜಿ ಸಹೋದರಿ ಶಾಂತ ಅಸ್ವಸ್ಥರಾದ್ರು.
Published On - 8:23 pm, Wed, 6 July 22