ಕೇಂದ್ರ ಸಚಿವ ಪ್ರಲ್ಹಾದ​ ಜೋಶಿ ಕಚೇರಿಯಲ್ಲಿ ಲಂಚ ಆರೋಪ: JDS ಎಂಎಲ್​ಸಿ ಎಸ್​ಎಲ್​​ ಭೋಜೇಗೌಡಗೆ ತಟ್ಟಿದ ಕಾನೂನು ಕ್ರಮದ ಬಿಸಿ

ಕೇಂದ್ರ ಸಚಿವ ಪ್ರಲ್ಹಾದ​ ಜೋಶಿ ಕಚೇರಿಯಲ್ಲಿ ಲಂಚ ಆರೋಪ ಮಾಡಿದ್ದ, JDS ಎಂಎಲ್​ಸಿ ಎಸ್​.ಎಲ್​​.ಭೋಜೇಗೌಡರಿಗೆ ಸದ್ಯ ಕಾನೂನು ಬಿಸಿ ತಟ್ಟಿದೆ. ಕೇಂದ್ರ ಸಚಿವ ಜೋಶಿ ಪರ ವಕೀಲರಿಂದ ಎಸ್​.ಎಲ್​​.ಭೋಜೇಗೌಡಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ​ ಜೋಶಿ ಕಚೇರಿಯಲ್ಲಿ ಲಂಚ ಆರೋಪ: JDS ಎಂಎಲ್​ಸಿ ಎಸ್​ಎಲ್​​ ಭೋಜೇಗೌಡಗೆ ತಟ್ಟಿದ ಕಾನೂನು ಕ್ರಮದ ಬಿಸಿ
ಪ್ರಹ್ಲಾದ್ ಜೋಶಿ, ಎಸ್​.ಎಲ್​​.ಭೋಜೇಗೌಡ
Edited By:

Updated on: Mar 01, 2023 | 3:49 PM

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ​ ಜೋಶಿ (Pralhad Joshi) ಕಚೇರಿಯಲ್ಲಿ ಲಂಚ ಆರೋಪ ಮಾಡಿದ್ದ, JDS ಎಂಎಲ್​ಸಿ ಎಸ್​.ಎಲ್​​.ಭೋಜೇಗೌಡರಿಗೆ (SL Bhojegowda) ಸದ್ಯ ಕಾನೂನು ಬಿಸಿ ತಟ್ಟಿದೆ. ಕೇಂದ್ರ ಸಚಿವ ಜೋಶಿ ಪರ ವಕೀಲರಿಂದ ಎಸ್​.ಎಲ್​​.ಭೋಜೇಗೌಡಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಏಮ್ಸ್​​ನಲ್ಲಿ ಹುದ್ದೆ ಕೊಡಿಸಲು ಜೋಶಿ ಕಚೇರಿ ಸಿಬ್ಬಂದಿ ವಿರುದ್ಧ ಭೋಜೇಗೌಡ ಆರೋಪ ಮಾಡಿದ್ದರು. ಆರೋಪ ಹಿಂಪಡೆಯುವಂತೆ ಪ್ರಲ್ಹಾದ​ ಜೋಶಿ ಎಚ್ಚರಿಕೆ ನೀಡಿ ಒಂದು ವಾರದೊಳಗೆ ಕ್ಷಮೆಯಾಚಿಸುವಂತೆ ಭೋಜೇಗೌಡಗೆ ಸೂಚನೆ ನೀಡಲಾಗಿತ್ತು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನೋಟಿಸ್ ನೀಡಲಾಗಿದೆ.

ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಪ್ರತಿಕ್ರಿಯಿಸಿದ್ದು, ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ‘ಭೋಜೇಗೌಡರು ಪ್ರದರ್ಶಿಸಿರುವ ಪತ್ರ ವೈದ್ಯರೊಬ್ಬರಿಗೆ ಬರೆದಿರುವುದು, ನಾನು ವೈದ್ಯ ಅಲ್ಲ, ಹೀಗಾಗಿ ಅದು ನನಗೆ ಬರೆದ ಪತ್ರವಲ್ಲ, ಇನ್ನು ಅವರು ಆರೋಪಿಸಿದ ಹೆಸರಿನ ವ್ಯಕ್ತಿ ನನ್ನ ಕಚೇರಿಯಲ್ಲೂ ಇಲ್ಲ. ಅವರಿಗೆ ದಾಖಲೆಯ ಮೇಲೆ ವಿಶ್ವಾಸವಿದ್ದರೆ ಹೆಸರನ್ನು ಏಕೆ ಅಡಗಿಸುತ್ತಿದ್ದಾರೆ?’ ಎಂದು ಪ್ರಲ್ಹಾದ ಜೋಶಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: Defamation case: ಜೆಡಿಎಸ್ ಶಾಸಕ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

ಇಂತಹ ಆಧಾರರಹಿತ ಆರೋಪಗಳನ್ನು ಗಂಭೀರವಾಗಿ ಎದುರಿಸಲಾಗುವುದು. ನನ್ನ ವ್ಯಕ್ತಿತ್ವದ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಈ ಹಿಂದೆ ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರು ಡಾ. ಬಿ.ಡಿ. ಪಾಂಡೆ ಎಂಬುವವರಿಗೆ ಬರೆದಿದ್ದ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಭೋಜೇಗೌಡರ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಕ್ಕ ತಿರುಗೇಟು ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:30 pm, Wed, 1 March 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us