ಕೈ ಎಂಎಲ್​ಸಿ ಐವನ್ ಡಿಸೋಜಾಗೆ ಸಂಕಷ್ಟ: ಜನಪ್ರತಿನಿಧಿಗಳ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ ಬಿಜೆಪಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 22, 2024 | 5:43 PM

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದು, ಸಿದ್ದರಾಮಯ್ಯ ಕಾನೂನು ಸಮರ ನಡೆಸಿದ್ದಾರೆ. ಈ ಮಧ್ಯೆ ಐವನ್ ಡಿಸೋಜಾ ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಎಫ್​ಐಆರ್​ ದಾಖಲಾಗಿಲ್ಲ. ಹೀಗಾಗಿ ಸದ್ಯ ಬಿಜೆಪಿ ಜನಪ್ರತಿನಿಧಿಗಳ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದೆ.

ಕೈ ಎಂಎಲ್​ಸಿ ಐವನ್ ಡಿಸೋಜಾಗೆ ಸಂಕಷ್ಟ: ಜನಪ್ರತಿನಿಧಿಗಳ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ ಬಿಜೆಪಿ
ಕೈ ಎಂಎಲ್​ಸಿ ಐವನ್ ಡಿಸೋಜಾಗೆ ಸಂಕಷ್ಟ, ಜನಪ್ರತಿನಿಧಿಗಳ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ ಬಿಜೆಪಿ
Follow us on

ಮಂಗಳೂರು, ಆಗಸ್ಟ್​ 22: ರಾಜ್ಯಪಾಲರ ವಿರುದ್ಧ ಎಂಎಲ್​ಸಿ ಐವನ್ ಡಿಸೋಜಾ (Ivan D’Souza) ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಇನ್ನೂ ಎಫ್​ಐಆರ್ (FIR)​ ದಾಖಲಾಗದ ಹಿನ್ನಲೆ ನ್ಯಾಯಾಲಯದ ಮೊರೆಹೋಗಲು ಬಿಜೆಪಿ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ, ಐವನ್ ಡಿಸೋಜಾ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್​ಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಎಲ್​ಸಿ ಐವನ್ ಡಿಸೋಜಾ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕೇಸ್ ಹಾಕಲು ನಮ್ಮ ಪೊಲೀಸರಿಗೆ ಧೈರ್ಯವಿಲ್ಲ. ಕಾಂಗ್ರೆಸ್ ಪುಡಾರಿಗಳ ಒತ್ತಡದಿಂದ ನಮ್ಮ ವಿರುದ್ಧ ಕೇಸ್ ಹಾಕಿದ್ದರು. ಆದರೆ ಐವನ್ ಡಿಸೋಜಾ ವಿರುದ್ಧ ಕೇಸ್ ಹಾಕಲು ಹಿಂಜರಿಯುತ್ತಿದ್ದಾರೆ. ಪ್ರಶ್ನಿಸಿದರೆ ಅನುಮಾತಿಗಾಗಿ ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ವಿರುದ್ಧ ಸಿಡಿದೆದ್ದ ಬಿಜೆಪಿ: ಸಂಕಷ್ಟಕ್ಕೆ ಸಿಲುಕಿದ ಐವನ್ ಡಿಸೋಜಾ, ಪೊಲೀಸರು

ಪುಂಡು ರಾಜಕೀಯದ ಮುಂದೆ ಪೊಲೀಸರು ತಲೆ ತಗ್ಗಿಸಿಕೂತಿದ್ದಾರೆ. ಕಾನೂನಾತ್ಮಕವಾಗಿ ನಾವು ಕೇಸ್ ಮುಂದುವರಿಸಲು ನಿರ್ಧರಿಸಿದ್ದೇವೆ. ಹೈಕೋರ್ಟ್​ನ ಹಿರಿಯ ವಕೀಲರ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯಪಾಲರ ವಿರುದ್ಧ ಎಂಎಲ್​ಸಿ ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ ನೀಡಿ ದಿನಗಳೇ ಕಳೆದರು ಯಾವುದೇ ಎಫ್​ಐಆರ್ ದಾಖಲಾಗಿಲ್ಲ. ಈ ಬಗ್ಗೆ ಪೊಲೀಸ್​ ಅಧಿಕಾರಿಗಳನ್ನು ಕೇಳಿದರೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಹೇಳುತ್ತಾರೆ.

ಇದನ್ನೂ ಓದಿ: ಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೂ ಬರಬಹುದು: ಕಾಂಗ್ರೆಸ್ MLC ಹೇಳಿಕೆಗೆ ಭುಗಿಲೆದ್ದ ಆಕ್ರೋಶ

ಹೀಗಾಗಿ ನಿನ್ನೆ ಬಿಜೆಪಿ ಯುವ ಮೋರ್ಚಾದಿಂದ ಠಾಣೆ ಮುತ್ತಿಗೆಗೆ ಕರೆ ನೀಡಿದ್ದರು. ಎಸಿಬಿ ಪ್ರತಾಪ ಸಿಂಹ ಥೋರಟ್ ಜತೆ ಚರ್ಚಿಸಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಮತ್ತೆ 24 ಗಂಟೆ ಗಡುವು ನೀಡಿದ್ದರು. ಇಂದು ಸಂಜೆಯೊಳಗೆ ಎಫ್​ಐಆರ್ ದಾಖಲು ಮಾಡುವಂತೆ ಒತ್ತಾಯಿಸಿದ್ದರು. ಒಂದು ವೇಳೆ ದಾಖಲು ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಿ ವಾಪಸ್ಸಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.