AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ ಕಾಯಿನ್ ಬೇಡ ಫೋನ್​ ಪೇ, ಗೂಗಲ್ ಪೇ ಮಾಡಿ ನೀರು ತನ್ನಿ!

ಬೆಂಗಳೂರಿನ RO ನೀರಿನ ಘಟಕಗಳಿಗೀಗ ಹೊಸ ರೂಪ ಸಿಕ್ಕಿದೆ. ಮೊದಲು 5 ರೂ. ನಾಣ್ಯ ಪಾವತಿಸಿ ನೀರು ಪಡೆಯಬೇಕಿತ್ತು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಾಯದಿಂದ ಈಗ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿ ನೀರನ್ನು ಪಡೆಯಬಹುದಾಗಿದೆ. ನವೀಕರಿಸಲಾದ ಘಟಕ​ಗಳನ್ನು BWSSB ಡಿಜಿಟಲ್ ಕಿಯೋಸ್ಕ್ಗಳಾಗಿ ಮರುನಾಮಕರಣಮಾಡಿದೆ.

ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ ಕಾಯಿನ್ ಬೇಡ ಫೋನ್​ ಪೇ, ಗೂಗಲ್ ಪೇ ಮಾಡಿ ನೀರು ತನ್ನಿ!
ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ
ಭಾವನಾ ಹೆಗಡೆ
|

Updated on: Oct 03, 2025 | 2:29 PM

Share

ಬೆಂಗಳೂರು, ಅಕ್ಟೋಬರ್ 3: ಬೆಂಗಳೂರಿನ ಹಲವಾರು ಪ್ರದೇಶಗಳು ನೀರಿನ ಕೊರತೆಯಿಂದ ಬಳಲುತ್ತಿವೆ. ಅಲ್ಲಿ ವಾಸಿಸುವ ಜನರು ಜೀವಜಲಕ್ಕಾಗಿ RO ನೀರಿನ ಕಿಯೋಸ್ಕ್​ಗಳ ಮೇಲೆ ಅವಲಂಬಿತರಾಗಿದ್ದಾರೆ. ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾದಾಗ, ಬೋರ್​ವೆಲ್​ಗಳು ಹಾಳಾದಾಗ ಈ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸ್ವಚ್ಛವಾದ ನೀರನ್ನು ಈ ಕಿಯೋಸ್ಕ್ಗಳು ಕಡಿಮೆ ದರದಲ್ಲಿ ಒದಗಿಸುತ್ತವೆ. ಈಗ ಈ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯೊಂದು ಆಗಿದೆ. ಮೊದಲು 20 ಲೀ. ನೀರಿಗಾಗಿ 5 ರೂ. ನಾಣ್ಯವನ್ನು ಕಿಯೋಸ್ಕ್ಗಳಲ್ಲಿ ಹಾಕಬೇಕಿತ್ತು. ಆದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹಾಯದಿಂದ ಈಗ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿ ನೀರನ್ನು ಪಡೆಯಬಹುದಾಗಿದೆ.

ನೀರಿನ ಕೀಯೋಸ್ಕ್​ಗಳಿಗೀಗ ಡಿಜಿಟಲ್ ರೂಪ

ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ RO ಕಿಯೋಸ್ಕ್ಗಳನ್ನು ಅಳವಡಿಸಿ ನೀರು ಪೂರೈಕೆ ಮಾಡುತ್ತಿದ್ದರೂ ಅದರ ನಿರ್ವಹಣೆಯಲ್ಲಿ ಹಲವಾರು ಲೋಪದೋಷಗಳಿದ್ದವು. ಹಲವು ಕಿಯೋಸ್ಕ್ಗಳು ಕಾರ್ಯ ರ್ನಿಹಿಸುತ್ತಲೇ ಇರಲಿಲ್ಲ.ನಂತರ ಓಟ್ಟೂ 1184 RO ಘಟಕ​ಗಳನ್ನು BWSSB ಸುಪರ್ದಿಗೆ ಒಪ್ಪಿಸಲಾಗಿತ್ತು. ಈಗ ಈ ಮಂಡಳಿ ಎಲ್ಲಾ ಕಿಯೋಸ್ಕ್ಗಳನ್ನು ಸ್ವಾವಲಂಬಿ ಘಟಕಗಳನ್ನಾಗಿಸಿದೆ. ಹೀಗೆ ನವೀಕರಿಸಲಾದ ಘಟಕ​ಗಳನ್ನು BWSSB ಡಿಜಿಟಲ್ ಕಿಯೋಸ್ಕ್ಗಳಾಗಿ ಮರುನಾಮಕರಣಮಾಡಿದೆ.

ಇನ್ನು ನೀರು ಪಡೆಯುವುದಕ್ಕಾಗಿ 5 ರೂ. ನಾಣ್ಯವನ್ನು ಉಪಯೋಗಿಸುವ ಅವಶ್ಯಕತೆಯಿಲ್ಲ. ಅಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸೀದಾ BWSSBಗೇ ಹಣ ಪಾವತಿಸಿ ಕ್ಯಾನ್​ಗಳಲ್ಲಿ ನೀರು ತುಂಬಿಸಿಕೊಳ್ಳಬಹುದು. ಹಾಗೊಂದು ವೇಳೆ ನೀಮ್ಮ ಬಳಿ ಸ್ಮಾರ್ಟ್​ ಫೋನ್​ ಇಲ್ಲದಿದ್ದಲ್ಲಿ ನೀವು BWSSB ಸರ್ವಿಸ್ ಸೆಂಟರ್​ಗಳಲ್ಲಿ ಮೊದಲಿಗೇ ಹಣ ಪಾವತಿಸಿ ಕಾರ್ಡ್​ಗಳನ್ನು ಪಡೆದುಕೊಳ್ಳಬಹುದು. ಆ ಕಾರ್ಡನ್ನು ಸ್ವೈಪ್ ಮಾಡಿ ನೀರು ತುಂಬಿಸಿಕೊಳ್ಳಹುದು.

ಗುತ್ತಿಗೆದಾರರಿಗೆ  ಆದಾಯದಲ್ಲಿ ಸಿಂಹ ಪಾಲು

ಸಧ್ಯಕ್ಕೆ ಡಿಜಿಟಲ್ ಘಟಕ​ಗಳನ್ನು ಸರ್ಕಾದಿಂದ ದೂರವಿಟ್ಟಿರುವ ಸರಬರಾಜು ಮಂಡಳಿ, ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಿದೆ. ಅಷ್ಟೇ ಅಲ್ಲದೇ ಬರುವ ಆದಾಯದ 60ರಷ್ಟು ಭಾಗವನ್ನು ಗುತ್ತಿಗೆದಾರರಿಗೆ ನೀಡುವುದಾಗಿ ಹೇಳಿದೆ. ಮೊದಲಿಗೆ BBMP ಘಟಕ​ಗಳು ನಿರ್ವಹಣೆ ಮಾಡುತ್ತಿದ್ದಾಗ ಹಣಕಾಸು ವ್ಯವಹಾರದ ಯಾವ ದಾಖಲೆಗಳೂ ಇರಲಿಲ್ಲ. ಅಷ್ಟೇ ಅಲ್ಲದೇ ಸರಬರಾಜು ಮಾಡುತ್ತಿದ್ದ ನೀರು ಸಹ ಕಳಪೆ ಗುಣಮಟ್ಟದ್ದಾಗಿತ್ತು. ಘಟಕಗಳ ಒಳಗಿದ್ದ ಫಿಲ್ಟರ್​ಗಳನ್ನು ಬದಲಾಯಿಸದೇ ತಿಂಗಳುಗಟ್ಟಲೆ ಇಡಲಾಗುತ್ತಿತ್ತು. ಇದನ್ನೆಲ್ಲ ಗಮನಿಸಿದ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?