ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶಗಳ 172 ಗ್ರಂಥಾಲಯಗಳಿಗೆ ಡಿಜಿಟಲ್​ ಟಚ್​

ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು 4 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಮತ್ತು ಕೊಳೆಗೇರಿಗಳ ಪ್ರದೇಶ 172 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತಿಸಲು ಮುಂದಾಗಿದೆ.

ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶಗಳ 172 ಗ್ರಂಥಾಲಯಗಳಿಗೆ ಡಿಜಿಟಲ್​ ಟಚ್​
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 31, 2023 | 7:38 AM

ಬೆಂಗಳೂರು: ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು 4 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಮತ್ತು ಕೊಳೆಗೇರಿಗಳ ಪ್ರದೇಶ 172 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ (Digital Library) ಪರಿವರ್ತಿಸಲು ಮುಂದಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ. ಇಲಾಖೆಯು ಮೊದಲ ಹಂತದಲ್ಲಿ ರಾಜ್ಯಾದ್ಯಂತ 272 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತಿಸಿದೆ. ಎರಡನೇ ಹಂತದಲ್ಲಿ 100 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತಿಸಲಾಗಿದೆ. ಇದೀಗ ಮೂರನೇ ಹಂತದಲ್ಲಿ ಗ್ರಾಮೀಣ ಮತ್ತು ಕೊಳಗೇರಿ ಪ್ರದೇಶಕ್ಕೆ ಒತ್ತು ನೀಡುವ ಗುರಿಯನ್ನು ಇಲಾಖೆ ಹೊಂದಿದ್ದು, ಗ್ರಂಥಾಲಯಗಳನ್ನು ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳೊಂದಿಗೆ ನವೀಕರಿಸಲಾಗುತ್ತಿದೆ.

2020 ರಲ್ಲಿ ಪ್ರಾರಂಭವಾದ ಈ ಯೋಜನೆಯು 2 ವರ್ಷ 10 ತಿಂಗಳುಗಳಲ್ಲಿ 3.21 ಕೋಟಿ ಜನರು ಡಿಜಿಟಲ್​​ ಗ್ರಂಥಾಲಯಗಳನ್ನು ಬಳಸಿದ್ದಾರೆ. ಮತ್ತು 1.73 ಕೋಟಿ ಇ-ಕಂಟೆಂಟ್​​ನ್ನು ಸಂಯೋಜಿಸಲಾಗಿದೆ.ಇಲಾಖೆಯು https://www.karnatakadigitalpubliclibrary.org/ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಮೂಲಕ ಜನರು ತಮ್ಮ ಮೊಬೈಲ್​, ಲ್ಯಾಪ್​ಟಾಪ್​​, ಕಂಪ್ಯೂಟರ್​​ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಎಸ್.ಹೊಸಮನಿ:-

ಆರಂಭದ ದಿನಗಳಲ್ಲಿ ಡಿಜಿಟಲ್​ ಗ್ರಂಥಾಲಯದ ಮೂಲಕ 10 ಲಕ್ಷ ಜನರನ್ನು ತಲುಪುವ ಗುರಿಯನ್ನು ಹೊಂದಿದ್ದೇವು. ಆದರೆ ಈಗ ನಿರೀಕ್ಷೆಗಿಂತ ಹೆಚ್ಚಿನ ಜನರು ಡಿಜಿಟಲ್​ ಗ್ರಂಥಾಲಯ ಬಳಸುತ್ತಿರುವುದಿಂದ ಈ ಬೆಳವಣಿಗೆ ಸಂತಸ ತಂದಿದೆ. ಮತ್ತು ಡಿಜಿಟಲ್‌ಗೆ ಪರಿವರ್ತಿಸಲು ಪ್ರೇರಣೆ ನೀಡಿದೆ ಎಂದಿದ್ದಾರೆ.

ನಾವು ಕ್ಲೌಡ್‌ನಲ್ಲಿ ಎಲ್ಲ ವಿಷಯವನ್ನು ಸಂಗ್ರಹಿಸುತ್ತೇವೆ. ಇ-ಪುಸ್ತಕಗಳು, ಜರ್ನಲ್‌ಗಳು ಮತ್ತು ವೀಡಿಯೊಗಳ ರೂಪದಲ್ಲಿ ಇರುವ ವಿಷಯವು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಇತರ ಹಲವು ಭಾಷೆಗಳಲ್ಲಿ ಲಭ್ಯವಿದೆ. ಪರಿವರ್ತಿಸಲಾಗುತ್ತಿರುವ ಗ್ರಂಥಾಲಯಗಳುಗಳು ಲ್ಯಾಪ್‌ಟಾಪ್‌ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ ಎಂದು ಹೇಳಿದರು.

ಸಾಂಪ್ರದಾಯಿಕ ಗ್ರಂಥಾಲಯಗಳನ್ನು ಡಿಜಿಟಲ್ ಆಗಿ ಪರಿವರ್ತಿಸಲು ಹೆಚ್ಚಿನ ಹಣ ಬೇಕಾಗಿದ್ದು, ಭಾರತ ಸರ್ಕಾರ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯಿಂದ ಮಂಜೂರಾದ ನಿಧಿಯಡಿ ಜಾರಿಗೆಯಾದ ಹಣ ಬಳಸಲಾಗುತ್ತಿದೆ ಎಂದು ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರ್ನಾಟಕದಾದ್ಯಂತ ಸುಮಾರು 6,890 ಸಾರ್ವಜನಿಕ ಗ್ರಂಥಾಲಯಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:36 am, Tue, 31 January 23