ಮಂಗಳೂರಿನಲ್ಲಿ ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಳೆಯ ದೈವ ಪರಿಕರಗಳು ಪತ್ತೆ
ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವಗಳ ಪರಿಕರ ಪತ್ತೆಯಾಗಿದ್ದು, ಇದಕ್ಕೆ ನಿದರ್ಶನ ನೀಡುವಂತಿದೆ. ಕಾಲಾಂತರದಲ್ಲಿ ಅಜೀರ್ಣಗೊಂಡಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮೂಲಕ ಬೆಳಕಿಗೆ ಬಂದಿದ್ದು, ಈ ಜೀರ್ಣೋದ್ಧಾರದ ಸಂದರ್ಭದಲ್ಲಿ ದೈವ ಕೊಟ್ಟಿದ್ದ ನುಡಿ ಸತ್ಯವಾಗಿದೆ.

ದಕ್ಷಿಣ ಕನ್ನಡ: ಸಾಮಾನ್ಯವಾಗಿ ಕರಾವಳಿ ಪ್ರದೇಶ ದೈವ ಮತ್ತು ಭೂತ ಎಂಬ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಒಂದಷ್ಟು ಆಚರಣೆಗಳ ನೆಲೆಯಾಗಿದೆ. ಇಲ್ಲಿನ ಜನರು ಕೂಡ ದೇವರನ್ನು ಅಷ್ಟೇ ಭಕ್ತಿಯಿಂದ ಕಾಣುತ್ತಾರೆ. ಕೊರಗಜ್ಜನ ಮೇಲಿನ ನಂಬಿಕೆ, ಕೋಲಾ ನಡೆಸಿದರೆ ಊರಿಗೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ಇನ್ನು ಕೂಡ ಹಾಗೆ ಇದೆ, ಈ ಕಾರಣಕ್ಕೆ ಇಲ್ಲಿ ಸಂಪ್ರದಾಯ ಮತ್ತು ಆಚರಣೆಗಳು ಇನ್ನೂ ಕೂಡ ಹಾಗೆ ಇದೆ.
ಮಂಗಳೂರಿನಲ್ಲಿ ಮತ್ತೆ ಮತ್ತೆ ದೈವಗಳ ಕಾರಣಿಕ ಸಾಬೀತಾಗುತ್ತಿದೆ. ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವಗಳ ಪರಿಕರ ಪತ್ತೆಯಾಗಿದ್ದು, ಇದಕ್ಕೆ ನಿದರ್ಶನ ನೀಡುವಂತಿದೆ. ಕಾಲಾಂತರದಲ್ಲಿ ಅಜೀರ್ಣಗೊಂಡಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮೂಲಕ ಬೆಳಕಿಗೆ ಬಂದಿದ್ದು, ಈ ಜೀರ್ಣೋದ್ಧಾರದ ಸಂದರ್ಭದಲ್ಲಿ ದೈವ ಕೊಟ್ಟಿದ್ದ ನುಡಿ ಸತ್ಯವಾಗಿದೆ.
ಮಂಗಳೂರು ನಗರದ ಹೊರವಲಯದ ಕಿನ್ನಿಗೋಳಿಯ ಬಳ್ಕುಂಜೆಯಲ್ಲಿ ಈ ವಿಸ್ಮಯ ಘಟನೆ ನಡೆದಿದೆ. ಬಳ್ಕುಂಜೆಯ ಮೂಡಾಯಿಗುತ್ತು ಮನೆಯ ಬಾವಿಯಲ್ಲಿ ದೈವಗಳ ಪರಿಕರ ಪತ್ತೆಯಾಗಿದೆ. ನಿರಂತರವಾಗಿ ಕಷ್ಟವನ್ನು ಎದುರಿಸುತ್ತಿದ್ದ ಈ ಕುಟುಂಬದವರು ಕೊನೆಗೆ ದೈವದ ಮೊರೆ ಹೋಗಿದ್ದು, ದೈವ ದರ್ಶನದ ಸಂದರ್ಭದಲ್ಲಿ ಬಾವಿಯಲ್ಲಿದ್ದ ಪರಿಕರದ ಬಗ್ಗೆ ದೈವ ನುಡಿದಿದ್ದಾರೆ.

ಬಾವಿಯಲ್ಲಿ ಸಿಕ್ಕ ದೈವದ ಪರಿಕರದ ದೃಶ್ಯ
ಸತ್ಯ ದೇವತೆ, ಅಣ್ಣಪ್ಪ ಪಂಜುರ್ಲಿ ಜಿರ್ಣೋದ್ಧಾರ ಮಾಡಿದ್ದೇವೆ. ಇತ್ತೀಚೆಗೆ ದಿವಾಕರ ಪೂಜಾರಿ ಅವರ ದರ್ಶನದಲ್ಲಿ ದೈವದ ನುಡಿಯಂತೆ ಬಾವಿ ತೋಡಿದ್ದು, ದೇವರ ಕುರುಹುಗಳು ಇಲ್ಲಿ ಸಿಕ್ಕದೆ. ಇನ್ನು ಇಲ್ಲಿ ಯಾವುದೆಲ್ಲಾ ದೇವರು ಇದ್ದಾರೆ ಎಂದು ಪರಿಶೋಧನೆ ಮಾಡಬೇಕು ಎಂದು ಕುಟುಂಸ್ಥರು ಹೇಳಿದ್ದಾರೆ.

ಬಾವಿಯಲ್ಲಿ ಸಿಕ್ಕ ಪರಿಕರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸುತ್ತಿರುವ ದೃಶ್ಯ
ಈ ವೇಳೆ ದೈವ300 ವರ್ಷಗಳ ಹಿಂದಿನ ಮುಚ್ಚಿ ಹೋಗಿದ್ದ ಬಾವಿಯನ್ನು ತೋಡಲು ಆದೇಶ ನೀಡಿದ್ದು, ಬಾವಿ ತೋಡಿದಾಗ ಬಾವಿಯಲ್ಲಿ ದೈವದ ಮೂರ್ತಿ, ಆಭರಣ, ಕತ್ತಿ ಸಿಕ್ಕಿದೆ. ಇನ್ನು ದೈವದ ಈ ಮಾತು ಸತ್ಯವಾದದ್ದನ್ನು ಕಂಡ ಗ್ರಾಮಸ್ಥರು ವಿಸ್ಮಯಗೊಂಡಿದ್ದಾರೆ ಹಾಗೂ ಇಲ್ಲಿನ ದೇವರ ಮೇಲೆ ಮತ್ತಷ್ಟು ನಂಬಿಕೆ ಇಮ್ಮಡಿಗೊಂಡಿದೆ.
ಇದನ್ನೂ ಓದಿ: ದೇವರು ಇಲ್ಲ ಅನ್ನೋ ಜಾತಿಯಲ್ಲಿ ನಾನು ಹುಟ್ಟಿಲ್ಲ..ದೈವ ನಿರ್ಣಯಕ್ಕೆ ತಲೆಬಾಗುತ್ತೇನೆ ಎಂದ ಮುನಿರತ್ನ
ಇದನ್ನೂ ಓದಿ:ಕಟಪಾಡಿ ವಿಶ್ವನಾಥ ಕ್ಷೇತ್ರದ ಜಾತ್ರೋತ್ಸವ: ದೈವದ ಮುಂದೆಯೇ ಭಕ್ತರ ಸಮಸ್ಯೆಗೆ ಪರಿಹಾರ!