AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರು ಇಲ್ಲ ಅನ್ನೋ ಜಾತಿಯಲ್ಲಿ ನಾನು ಹುಟ್ಟಿಲ್ಲ..ದೈವ ನಿರ್ಣಯಕ್ಕೆ ತಲೆಬಾಗುತ್ತೇನೆ ಎಂದ ಮುನಿರತ್ನ

ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿ 5 ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಪಕ್ಷದಲ್ಲಿ ಅವರನ್ನು ವಲಸಿಗ ಎಂದೇ ಪರಿಗಣಿಸಿದ್ದಾರೆ. ಸಿದ್ದರಾಮಯ್ಯ ಅವರನ್ನೇ ಕಾಂಗ್ರೆಸ್ಸಿನಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎಂದು ಮುನಿರತ್ನ ಟಾಂಗ್​ ನೀಡಿದ್ದಾರೆ.

ದೇವರು ಇಲ್ಲ ಅನ್ನೋ ಜಾತಿಯಲ್ಲಿ ನಾನು ಹುಟ್ಟಿಲ್ಲ..ದೈವ ನಿರ್ಣಯಕ್ಕೆ ತಲೆಬಾಗುತ್ತೇನೆ ಎಂದ ಮುನಿರತ್ನ
ಮುನಿರತ್ನ, ಸಿದ್ದರಾಮಯ್ಯ
Follow us
Skanda
| Updated By: Lakshmi Hegde

Updated on:Jan 14, 2021 | 3:38 PM

ಬೆಂಗಳೂರು: ಮಂತ್ರಿ ಸ್ಥಾನ ಸಿಗಬೇಕು ಎಂದು ನನ್ನ ಹಣೆಯಲ್ಲಿ ಬರೆದಿದ್ದರೆ ಮಂತ್ರಿ ಆಗುತ್ತೇನೆ. ಒಂದು ವೇಳೆ ಅದು ಕೈಗೂಡಿಲ್ಲ ಎಂದರೆ ದೈವ ನಿರ್ಣಯ ಎಂದು ತಲೆಬಾಗುತ್ತೇನೆ. ನನಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ದೇವರು ಇಲ್ಲ ಅನ್ನೋ ಜಾತಿಯಲ್ಲಿ ನಾನು ಹುಟ್ಟಿಲ್ಲ ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಹೇಳಿಕೆ ನೀಡಿದ್ದಾರೆ.

ನನಗೆ ಮಂತ್ರಿ ಸ್ಥಾನ ಸಿಗಬೇಕೋ, ಬೇಡವೋ ಎಂಬುದು ದೈವೇಚ್ಛೆ. ಆ ನಿರ್ಣಯವನ್ನು ಗೌರವಿಸಿ ತಲೆಬಾಗುತ್ತೇನೆ. ಮಂತ್ರಿ ಸ್ಥಾನ ಸಿಗದಿದ್ದರೂ ಜನಸೇವೆ ಮಾಡ್ತೀನಿ. ಇನ್ನು 2 ಜನ್ಮ ಎತ್ತಿ ಬಂದರೂ ಮತದಾರರ ಋಣ ತೀರಿಸೋಕೆ ಅಸಾಧ್ಯ. ಆದ್ದರಿಂದ ಅವರ ಸೇವೆಯಲ್ಲಿ ನಿರತನಾಗುತ್ತೇನೆ. ನನಗೆ ಏನೇ ಕಷ್ಟ ಎದುರಾದರೂ ದೇವರ ಕೈ ಮುಗಿಯುವುದು ಅಭ್ಯಾಸ. ದೈವ ಕೃಪೆ ಇದ್ದರೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ವಲಸಿಗ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿ 5 ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಪಕ್ಷದಲ್ಲಿ ಅವರನ್ನು ವಲಸಿಗ ಎಂದೇ ಪರಿಗಣಿಸಿದ್ದಾರೆ. ಸಿದ್ದರಾಮಯ್ಯ ಅವರನ್ನೇ ಕಾಂಗ್ರೆಸ್ಸಿನಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಅರುಣ್​ಸಿಂಗ್​ರಿಂದ ಮುನಿರತ್ನಗೆ ಸಿಕ್ಕಿದೆ ಭರವಸೆ; ಇನ್ನು ಎರಡು ತಿಂಗಳಷ್ಟೇ !

Published On - 3:36 pm, Thu, 14 January 21