AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ-ಡಿಸಿಎಂ ಬ್ರೇಕ್​​ ಫಾಸ್ಟ್​​​ನಲ್ಲಿ ನಾಟಿ ಕೋಳಿ ಬದಲಿಗೆ ಗಮನಸೆಳೆದ ವಾಚ್: ಇದರ ಬೆಲೆ 43 ಲಕ್ಷ ರೂ.

ಮೊನ್ನೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಿಂಡಿ ಸವಿದಿದ್ದರು. ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಸಹ ತಮ್ಮ ಮನೆಯಲ್ಲಿಂದು ಸಿದ್ದರಾಮಯ್ಯನವರಿಗೆ ಬ್ರೇಕ್ ಫಾಸ್ಟ್ ಆಯೋಜಿಸಿದ್ದರು. ಹೀಗೆ ಪರಸ್ಪರ ತಿಂಡಿ ಸವಿದು ನಾವು ಒಟ್ಟಾಗಿದ್ದೇವೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಈ ನಡುವೆ ಸಿಎಂ-ಡಿಸಿಎಂ ಕಟ್ಟಿಕೊಂಡಿದ್ದ ಒಂದೇ ಕಂಪನಿಯ ವಾಚ್ ಗಮನಸೆಳೆದಿದ್ದು, ಇದೀಗ ಚರ್ಚೆ​​ಗೆ ಗ್ರಾಸವಾಗಿದೆ. ಹಾಗಾದ್ರೆ, ಉಭಯ ನಾಯಕರು ಕಟ್ಟಿಕೊಂಡ ವಾಚ್ ಯಾವ ಕಂಪನಿಯದ್ದು? ಬೆಲೆ ಎಷ್ಟು? ವಿಶೇಷತೆಗಳೇನು ಎನ್ನುವ ವಿವರ ಇಲ್ಲಿದೆ.

ಸಿಎಂ-ಡಿಸಿಎಂ ಬ್ರೇಕ್​​ ಫಾಸ್ಟ್​​​ನಲ್ಲಿ ನಾಟಿ ಕೋಳಿ ಬದಲಿಗೆ ಗಮನಸೆಳೆದ ವಾಚ್: ಇದರ ಬೆಲೆ 43 ಲಕ್ಷ ರೂ.
Siddaramaiah And Dk Shivakumar Watch
ರಮೇಶ್ ಬಿ. ಜವಳಗೇರಾ
|

Updated on: Dec 02, 2025 | 5:49 PM

Share

ಬೆಂಗಳೂರು, (ಡಿಸೆಂಬರ್ 02): ಸಿಎಂ ಸಿದ್ದರಾಮಯ್ಯನವರು (Siddaramaiah) ಮೊನ್ನೆ ಅಷ್ಟೇ ತಮ್ಮ ನಿವಾಸದಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರಿಗಾಗಿ​​ ಉಪಹಾರ ಆಯೋಜಿಸಿದ್ದರು. ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 02) ಡಿಕೆ ಶಿವಕುಮಾರ್ ತಮ್ಮ ಸದಾಶಿವನಗರದ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್ ಫಾಸ್ಟ್​ ಆಯೋಜಿಸಿದ್ದು, ಅವರಿಗೆ ಇಷ್ಟವಾದ ನಾಟಿ ಕೋಳಿ ಸಾರು, ಇಡ್ಲಿ ಉಣಬಡಿಸಿದ್ದಾರೆ. ಆದ್ರೆ, ಈ ವೇಲೆ ಎಲ್ಲರ ಗಮನಸೆಳೆದ ನಾಟಿ ಕೋಳಿ ಅಲ್ಲ. ಬದಲಿಗೆ ಉಭಯ ನಾಯಕರು ಧರಿಸಿದ್ದ ಒಂದೇ ಕಂಪನಿಯ ವಾಚ್. ಹೌದು….ಇಂದಿನ ಬ್ರೇಕ್​ ಫಾಸ್ಟ್​​ ವೇಳೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾರ್ಟಿಯರ್ (Cartier) ಎನ್ನುವ ಕಂಪನಿಯ ವಾಚ್ ಧರಿಸಿರುವುದು ಎಲ್ಲರ ಗಮನಸೆಳೆದಿದ್ದು, ಇನ್ನು ಈ ಕಾರ್ಟಿಯರ್ ವಾಚ್​​ನ ಮಾರುಕಟ್ಟೆ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ. ಆಗಿದೆ

ಸೇಮ್ ವಾಚ್ ಕಟ್ಟಿದ ಸಿಎಂ-ಡಿಸಿಎಂ

ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಮಾಧ್ಯಮ ಮುಂದೆ ಬಂದಾಗ ಈ ಒಂದೇ ರೀತಿ ವಾಚ್ ಕಟ್ಟಿದ್ದು, ಫೋಟೋನಲ್ಲಿ ಇಬ್ಬರ ವಾಚ್ ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್  ಎನ್ನುವುದು ಗೊತ್ತಾಗಿದೆ.ಒಟ್ಟಿಗೆ ಬ್ರೇಕ್​ ಫಾಸ್ಟ್ ಮಾತ್ರವಲ್ಲದೇ ಒಂದೇ ಕಂಪನಿಯ ವಾಚ್ ಕಟ್ಟುವ ಮೂಲಕ ನಾವಿಬ್ಬರು ಒಂದೇ ಎನ್ನುವ ಸಂದೇಶ ರವಾನಿಸಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.  ಆದರೆ ಪ್ರಶ್ನೆ ಇದಲ್ಲ, ಇದರ ಬೆಲೆ, ಈ ವಾಚ್ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ.

ಇನ್ನು ಉಭಯ ನಾಯಕರು ಬೇಕಂತಲೇ ಸೇಮ್ ವಾಚ್ ಕಟ್ಟಿದ್ರಾ ಅಥವಾ ಕಾಕತಾಳೀಯ ಎಂಬಂತೆ ಅವರವ ಪಾಡಿಗೆ ಅವರು ಧರಿಸಿಕೊಂಡು ಬಂದಿದ್ರಾ ಎನ್ನುವುದೇ ಪ್ರಶ್ನೆಯಾಗಿದೆ.

ಇದನ್ನೂ ನೋಡಿ: ಡಿಕೆ ಶಿವಕುಮಾರ್ ಜೊತೆಗೆ ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಸವಿಯುತ್ತಿರುವ ಸಿಎಂ ಸಿದ್ದರಾಮಯ್ಯ

ಚರ್ಚೆಗೆ ಗ್ರಾಸವಾಯ್ತು ಉಭಯ ನಾಯಕರ ವಾಚ್

ಇದರ ಬೆನ್ನಲ್ಲೇ 2016ರಲ್ಲಿ ಸಿದ್ದರಾಮಯ್ಯನವರ ಹ್ಯೂಬ್ಲೋಟ್ ವಾಚ್ ನಂತೆ ಇದೀಗ ಕಾರ್ಟಿಯರ್ ವಾಚ್ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರೇ 43 ಲಕ್ಷ ರೂ. ಬೆಲೆ ಬಾಳುವ ಕಾರ್ಟಿಯರ್​ ವಾಚ್​ ಕಟ್ಟಿದ್ದೀರಿ. ರಾಜ್ಯಕ್ಕೆ ಯಾವ ಮಹತ್ತರ ಉಪಕಾರ ಮಾಡಿದಿರಿ ಎಂದು ನಿಮಗೆ ಈ ಲಕ್ಷ ಬೆಲೆ ಬಾಳುವ ಕಾರ್ಟಿಯರ್ ವಾಚ್ ಉಡುಗೊರೆಯಾಗಿ ಬಂದಿದೆ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವ ಕನ್ನಡಿಗರು ಎಂದು ಪ್ರಶ್ನಿಸಿದೆ.

ಈ ಕಾರ್ಟಿಯರ್ ಬ್ರ್ಯಾಂಡ್​​​​​ ವಾಚ್​​ನ ವಿಶೇಷತೆ

ಕಾರ್ಟಿಯರ್ ಅತ್ಯಂತ ಲಕ್ಸುರಿ ವಾಚ್ ಬ್ರ್ಯಾಂಡ್ ಆಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಕ್ರಿಸ್ಟಲ್​​​​​​​ ಆ್ಯಂಟಿ ರಿಫ್ಲೆಕ್ಟಿವ್ ಗ್ಲಾಸ್ ಹೊಂದಿದ್ದು, ವಾಟರ್ ಪ್ರೂಫ್ ಆಗಿದೆ. ಇನ್ನು ಈ ವಾಚ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಬಳಕೆ ಮಾಡಲಾಗಿದೆ. 7 ಸೈಡೆಡ್ ಕ್ರೌನ್‌ನಲ್ಲಿ ರೋಸ್ ಗೋಲ್ಡ್ ಬಳಕೆ ಮಾಡಲಾಗಿದೆ. ಈ ವಾಚ್‌ಗೆ 8 ವರ್ಷದ ವಾರೆಂಟಿ ಇದ್ದು, ವಾರೆಂಟಿ ಸಮಯದಲ್ಲಿ ವಾಚ್​​​ಗೆ ಏನಾದರೂ ಆದರೆ ರಿಪ್ಲೇಸ್ ಇರುತ್ತೆ. ಹಾಗೇ ಸರ್ವೀಸ್ ಕೂಡ ಕಾಂಪ್ಲಿಮೆಂಟರಿ ಆಗಿರುತ್ತದೆ.

ಹೀಗಾಗಿ ಈ ಅತ್ಯಧುನಿಕ ವಾಚ್​​ ಅನ್ನು ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರೆಟಿಗಳು ಈ ಬ್ರ್ಯಾಂಡ್ ಬಳಕೆ ಮಾಡುತ್ತಾರೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ವಾಚ್ ಧರಿಸುತ್ತಾರೆ. ವಿಶೇಷವಾಗಿ ಬ್ರಿಟಿಷ್ ರಾಯಲ್ ಫ್ಯಾಮಿಲಿ ಹೆಚ್ಚಾಗಿ ಈ ವಾಚ್ ಬಳಕೆ ಮಾಡುತ್ತದೆ.ಈ ಪೈಕಿ ಪ್ರಿನ್ಸ್ ಡಯಾನ ಬಳಿ ಕಾರ್ಟಿಯರ್‌ ಬ್ರ್ಯಾಂಡ್​​ನ ಬಹುತೇಕ ಎಲ್ಲಾ ಮಾಡೆಲ್ ವಾಚ್‌ಗಳಿವೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು