ಪ್ರಾತಿನಿಧಿಕ ಚಿತ್ರ
ಬೆಂಗಳೂರು, (ಆಗಸ್ಟ್ 29): ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಂದೇ ಸಲಕ್ಕೆ ಬರೋಬ್ಬರಿ 15 ಐಪಿಎಸ್ ಅಧಿಕಾರಿಗಳನ್ನು (IPS Officers) ದಿಢೀರ್ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಗೃಹ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಮುಖ್ಯವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ್ ಅವರನ್ನೂ ಸಹ ವರ್ಗಾವಣೆ ಮಾಡಲಾಗಿದ್ದು, ಇವರ ಜಾಗಕ್ಕೆ ಭೂಷಣ್ ಬೊರಸೆ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಶಶಿಕುಮಾರ್ ಅವರಿಗೆ ಸರ್ಕಾರ ಇನ್ನೂ ಯಾವುದೇ ಸ್ಥಳ ತೋರಿಸದೇ ವರ್ಗಾಯಿಸಿದೆ.
ಯಾರು- ಎಲ್ಲಿಗೆ ವರ್ಗಾವಣೆ?
- ಪಿ.ಹರಿಶೇಖರನ್, (ಎಡಿಜಿಪಿ)- ಡಿಸಿಆರ್ಇಗೆ ವರ್ಗಾವಣೆ
- ನಂಜುಂಡಸ್ವಾಮಿ (ಎಡಿಜಿಪಿ)– ಮಾನವಹಕ್ಕುಗಳ ಆಯೋಗ
- ದಿವ್ಯಜ್ಯೋತಿ ರೇ-(ಎಡಿಜಿಪಿ), ಅಪರಾಧ ಮತ್ತು ತಾಂತ್ರಿಕ ವಿಭಾಗ
- ಅಮಿತ್ ಸಿಂಗ್, (ಐಜಿಪಿ)- ಕೆಎಸ್ಆರ್ಪಿ
- ಆರ್.ಚೇತನ್, (ಐಜಿಪಿ)– ಪಶ್ಚಿಮ ವಲಯ, ಮಂಗಳೂರು
- ನಿಕ್ಕಮ್ ಪ್ರಕಾಶ್, (ಐಜಿಪಿ)– ಪೊಲೀಸ್ ಆಯುಕ್ತ, ಬೆಳಗಾವಿ
- ಭೂಷಣ್ ಬೊರಸೆ, (ಡಿಐಜಿಪಿ) – ಆಯುಕ್ತ, ಹುಬ್ಬಳ್ಳಿ-ಧಾರವಾಡ
- ಡಿಐಜಿಪಿ ಎನ್.ಶಶಿಕುಮಾರ್ಗೆ ಸ್ಥಳ ತೋರಿಸದೆ ವರ್ಗಾವಣೆ
- ಶಿವಪ್ರಕಾಶ ದೇವರಾಜ್, ಎಸ್ಪಿ, ಮಾದಕದ್ರವ್ಯ ನಿಗ್ರಹ ಪಡೆ
- ಪದ್ಮಿನಿ ಸಾಹು, ಪೊಲೀಸ್ ವರಿಷ್ಠಾಧಿಕಾರಿ)- ಚಿಕ್ಕಬಳ್ಳಾಪುರ
- ಆರ್.ಶ್ರೀನಿವಾಸಗೌಡ, (ಡಿಸಿಪಿ) ಸಿಸಿಬಿ-1 ಬೆಂಗಳೂರು
- ಡಾ.ಶಿವಕುಮಾರ್, (ಎಸ್ಪಿ) -ಕರ್ನಾಟಕ ಲೋಕಾಯುಕ್ತ
- ಕುಶಲ್ ಚೌಕ್ಸೆ, (ಡಿಸಿಪಿ);ಆಡಳಿತ ವಿಭಾಗ, ಬೆಂಗಳೂರು
- ಸಾಹಿಲ್ ಬಾಗ್ಲಾ, ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ
- ರೋಹನ್ ಜಗದೀಶ್ (ಎಸ್ಪಿ)- ಬೆಂಗಳೂರು ದಕ್ಷಿಣ ಜಿಲ್ಲೆ
- ಹೆಚ್.ಎನ್.ಮಿಥುನ್, ಪೊಲೀಸ್ ವರಿಷ್ಠಾಧಿಕಾರಿ- ಗದಗ