ದೆಹಲಿ, ಜುಲೈ 26: ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಸುಧಾಮೂರ್ತಿ ತಮ್ಮ ಚೊಚ್ಚಲ ಭಾಷಣದಲ್ಲೇ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿ ಗಮನಸೆಳೆದಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಶ್ಲಾಘಿಸಿದ್ದರು. ಇದೀಗ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿರುವ ಡಾ. ಸಿಎನ್ ಮಂಜುನಾಥ್ (Dr. CN Manjunath) ಅವರು ತಮ್ಮ ಮೊದಲ ಅಧಿವೇಶನದಲ್ಲೇ ರಸ್ತೆ ಅಪಘಾತದ ಬಗ್ಗೆ ಪ್ರಸ್ತಾಪಿಸಿ ಮಹತ್ವದ ಬೇಡಿಕೆ ಇಟ್ಟಿದ್ದಾರೆ. ಆ ಮೂಲಕ ತಮ್ಮ ಮೊದಲ ಭಾಷಣದಲ್ಲಿ ಜನರ ಹಿತಾಸಕ್ತಿ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ಗ್ರಾಮಾಂತರ ಸಂಸದ ಸಿಎನ್ ಮಂಜುನಾಥ್, ಕಳೆದ 10 ವರ್ಷಗಳಲ್ಲಿ ಎಂಬಿಬಿಎಸ್, ಪಿಜಿ ಸೀಟುಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿಸಲಾಗಿದೆ ಹೀಗಾಗಿ ಮೊದಲು ನಾನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ಗೌರವಾನ್ವಿತ ಆರೋಗ್ಯ ಮಂತ್ರಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.
Hearty congratulations and my appreciation to PM Shri @narendramodi-led government and the Hon’ble Health Ministers over the last 10 years for increasing MBBS, PG seats, and medical colleges.
I am concerned about the 13% rise in road accident fatalities, which is higher than… pic.twitter.com/Ws0RUAHrMj
— Dr.C.N.Manjunath (@DrCNManjunath) July 26, 2024
ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ 13% ಏರಿಕೆಯಾಗುತ್ತಿರುವ ಬಗ್ಗೆ ನನಗೆ ಕಳವಳವಿದ್ದು, ಇದು ಕ್ಯಾನ್ಸರ್ನಿಂದ ಸಾವನ್ನಪ್ಪುವವರ ಸಂಖ್ಯೆಗಿಂತ ಜಾಸ್ತಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವೀಲ್ಚೇರ್ನಲ್ಲೇ ಬಂದು ಪ್ರಧಾನಿ ಭೇಟಿಯಾದ ದೇವೇಗೌಡ: ಹೆಚ್ಡಿಡಿ ನೀಡಿದ ಕಲಾಕೃತಿಗೆ ಮೋದಿ ಫಿದಾ
ಪ್ರಾಣಾಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಉತ್ತರ ಕ್ಯಾಂಪಸ್ನಲ್ಲಿ ಮತ್ತು ಹೆದ್ದಾರಿಗಳಲ್ಲಿ ಪ್ರತಿ 120 ಕಿ ಮೀ ಗೆ 300 ಬೆಡ್ಗಳಿರುವ ಪಾಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ 1.65 ಲಕ್ಷ ಸಿಜಿಎಚ್ಎಸ್ ಫಲಾನುಭವಿಗಳಿದ್ದು, ಕೇವಲ 10 ಔಷಧಂಗಡಿಗಳಿವೆ. ಹೀಗಾಗಿ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ಇದನ್ನು ಪರಿಹರಿಸಬೇಕಾಗಿದೆ ಎಂದು ಲೋಕಸಭೆಯಲ್ಲಿ ಸಿ.ಎನ್ ಮಂಜುನಾಥ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಅಂಕೋಲಾ ಗುಡ್ಡ ಕುಸಿತ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ
ಆರೋಗ್ಯ ಸಚಿವ ಜೆ.ಪಿ ನಡ್ಡಾ ಉತ್ತರಿಸಿದ್ದು, ಸಿ.ಎನ್ ಮಂಜುನಾಥ್ ಅವರ ಸಲಹೆಯನ್ನು ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಪಾಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸುವ ಬಗ್ಗೆ ಚಿಂತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ನಿನ್ನೆ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಬಗ್ಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಪ್ರಸ್ತಾಪಿಸಿದ್ದರು. ಇಂದು ಅವರ ಅಳಿಯ ಬೆಂಗಳೂರು ಗ್ರಾಮಾಂತರ ಸಂಸದ ಸಿಎನ್ ಮಂಜುನಾಥ್ ಅವರು ಇಂದಿನ ಸಂಸತ್ ಮಾತನಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.