ಹಾಸನ: ಕುಡಿದ ಅಮಲಿನಲ್ಲಿ ಬಾರ್ ಮುಂದೆ ನಿಂತಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿ ಹತ್ಯೆ

ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರಿಗೆ ನವೀವ್ ಬೈಯ್ತಿದ್ದ. ಈ ವೇಳೆ ಸುಮ್ಮನೆ ಊರಿಗೆ ಹೋಗು ಎಂದು ನಂದೀಶ್ ಮತ್ತು ಗೆಳೆಯರು ಬುದ್ಧಿ ಹೇಳಿದ್ದರು. ಈ ವೇಳೆ ಕಾರ್ ಏರಿ ವಾಪಾಸ್ ಹೋಗಿ, ಮತ್ತೆ ತಿರುಗಿ ಬಂದು ಪ್ರತೀಕಾರವಾಗಿ ಕಾರ್ ಹತ್ತಿಸಿ, ಒಬ್ಬರ ಸಾವಿಗೆ ಕಾರಣವಾಗಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ

ಹಾಸನ: ಕುಡಿದ ಅಮಲಿನಲ್ಲಿ ಬಾರ್ ಮುಂದೆ ನಿಂತಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿ ಹತ್ಯೆ
ಕುಡಿದ ಅಮಲಿನಲ್ಲಿ ಬಾರ್ ಮುಂದೆ ನಿಂತಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿ ಹತ್ಯೆ, ಒಳ ಚಿತ್ರದಲ್ಲಿ ಆರೋಪಿ ನವೀನ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 18, 2021 | 10:20 AM

ಹಾಸನ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕಾರು ಹತ್ತಿಸಿ ಓರ್ವನ ಹತ್ಯೆಗೆ ಕಾರಣವಾಗಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಶಿವರ ಗ್ರಾಮದಲ್ಲಿ ಘಟನೆ ನಡೆದಿದೆ. ಎಂ. ಶಿವರ ಗ್ರಾಮದ ಬಾರ್ ಮುಂದೆ ನಿಂತಿದ್ದಾಗ ಹೊಂಗೇಹಳ್ಳಿಯ ನವೀನ್ ಎಂಬಾತನಿಂದ ಈ ಕುಕೃತ್ಯ ನಡೆದಿದೆ. ಬಾರ್ ಮುಂದೆ ನಿಂತಿದ್ದ ನಂದೀಶ್​, ಗಿರೀಶ್ ಮತ್ತಿರರ ಮೇಲೆ ಕಾರು ಚಲಾಯಿರುವ ಆರೋಪಿ ಹಂತಕನಾಗಿದ್ದಾನೆ. ಘಟನೆಯಲ್ಲಿ ನಂದೀಶ್ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರಿಗೆ ನವೀವ್ ಬೈಯ್ತಿದ್ದ. ಈ ವೇಳೆ ಸುಮ್ಮನೆ ಊರಿಗೆ ಹೋಗು ಎಂದು ನಂದೀಶ್ ಮತ್ತು ಗೆಳೆಯರು ಬುದ್ಧಿ ಹೇಳಿದ್ದರು. ಈ ವೇಳೆ ಕಾರ್ ಏರಿ ವಾಪಾಸ್ ಹೋಗಿ, ಮತ್ತೆ ತಿರುಗಿ ಬಂದು ಪ್ರತೀಕಾರವಾಗಿ ಕಾರ್ ಹತ್ತಿಸಿ, ಒಬ್ಬರ ಸಾವಿಗೆ ಕಾರಣವಾಗಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಂತಕ ನವೀನನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಎಲೆಕ್ಟ್ರಾನಿಲ್ ಅಂಗಡಿಗೆ ಬೆಂಕಿ: 24 ಗಂಟೆಗಳಲ್ಲಿ ಕ್ಯಾಷಿಯರ್ ಅರೆಸ್ಟ್​, ಉದ್ದೇಶ ಏನು ಗೊತ್ತಾ!? ಕೋಲಾರ ನಗರದಲ್ಲಿ ಎಲೆಕ್ಟ್ರಾನಿಲ್ ಅಂಗಡಿಯಲ್ಲಿ ನಡೆದಿದ್ದ ಬೆಂಕಿ ಅವಘಡ ಪ್ರಕರಣದಲ್ಲಿ 24 ಗಂಟೆಗಳಲ್ಲಿ ಬೆಂಕಿ ಇಟ್ಟ ಆರೋಪಿಯನ್ನ ಪೋಲೀಸರು ಬಂಧಿಸಿದ್ದಾರೆ. ಕೋಲಾರ ನಗರದ ರೆಡ್ಡಿ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲೈಯನ್ಸಸ್ ನಲ್ಲಿ ಘಟನೆ ನಡೆದಿತ್ತು.

ಅಂಗಡಿಯಲ್ಲಿ ಕೆಲಸ ಮಾಡುವ ಸೇಲ್ಸ್ ಮನ್ ತೌಸಿಕ್ ಪಾಷಾ ಬಂಧನಕ್ಕೀಡಾದ ಆರೋಪಿ. ಖತರ್ನಾಕ್ ಸೇಲ್ಸ್ ಮನ್ ತೌಸಿಕ್ ಪಾಷಾ ಬೆಂಕಿ ಇಟ್ಟು ಕ್ಯಾಶ್ ಕೌಂಟರ್ ನಲ್ಲಿಟ್ಟಿದ್ದ ಹಣವನ್ನ ದೋಚಿದ್ದ! ಬಂಧಿತನಿಂದ 3.56 ಲಕ್ಷ ರೂ ನಗದು ಸೇರಿದಂತೆ ಬೆಂಕಿ ಇಡಲು ಬಳಸಿದ್ದ ವಸ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Cashier in kolar sets in electronics shop on fire reason to steal cash

ಎಲೆಕ್ಟ್ರಾನಿಲ್ ಅಂಗಡಿಗೆ ಬೆಂಕಿ: 24 ಗಂಟೆಗಳಲ್ಲಿ ಕ್ಯಾಷಿಯರ್ ಅರೆಸ್ಟ್​, ಉದ್ದೇಶ ಏನು ಗೊತ್ತಾ!?

(drunk driver drives car over people standing near bar one died in m shivara village hassan)

Published On - 9:43 am, Mon, 18 October 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್