ಸಿಎಂ ಕುರ್ಚಿ ಕದನದ ನಡುವೆ ಬೆಂಗಳೂರಿನಲ್ಲಿ ಸಚಿವರ ಆಪ್ತರ ಮೇಲೆ ಇಡಿ ದಾಳಿ
ನವೆಂಬರ್ 20 ಕಳೆದಿದ್ದೇ ಕಳಿದಿದ್ದು ಕರ್ನಾಟಕ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿದ್ದರಾಮಯ್ಯ ಮತ್ತು ಡಿಕೆ ನಡುವಿನ ಪವರ್ ಶೇರಿಂಗ್ ಜಟಾಪಟಿ ಹೊಸ ತಿರುವಿಗೆ ಸಾಕ್ಷಿಯಾಗಿದೆ. ಯಾಕಂದ್ರೆ, ಸಿಎಂ ಆಗಲೇ ಬೇಕು ಎಂದು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹೀಗಾಗಿ ಸಿಎಂ-ಡಿಸಿಎಂ ಬಣ ಬಡಿದಾಟ ಜೋರಾಗಿದೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯೆ ಬೆಂಗಳೂರಿನಲ್ಲಿ ಕೆಲ ಸಚಿವರ ಆಪ್ತರ ನಿವಾಸಗಳ ಮೇಲೆ ಇಡಿ ದಾಳಿ ನಡೆದಿದೆ.

ಬೆಂಗಳೂರು, (ನವೆಂಬರ್ 26): ಸಿಎಂ ಕುರ್ಚಿ ಸಂಬಂಧ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಈ ಸಂಬಂಧ ಕರ್ನಾಟಕ ಕಾಂಗ್ರೆಸ್ನನಲ್ಲಿ ಮಹತ್ವದ ರಾಜಕೀಯ ಬೆಳಗಣಿಗಳು ನಡೆದಿವೆ. ಸಚಿವರು, ಶಾಸಕರು ಏನಾಗುತ್ತೋ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಬೆಳವಣಿಗೆಗಳ ನಡುವೆ ಬೆಂಗಳೂರಿನಲ್ಲಿ ಸಚಿವರ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೆಹಲಿಯಿಂದ ಆಗಮಿಸಿರುವ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಐಟಿ ಇಲಾಖೆ ವರದಿ ಮೇಲೆ ಇಡಿ ಪ್ರತ್ಯೇಕ ಕೇಸ್ ದಾಖಲಿಸಿಕೊಂಡಿತ್ತು. ಇದರ ಆಧಾರದ ಮೇಲೆ ನವದೆಹಲಿಯಿಂದ ಇಡಿ ಅಧಿಕಾರಿಗಳ ತಂಡಗಳು ಇಂದು (ನವೆಂಬರ್ 26) ಬೆಂಗಳೂರಿನ ವಿವಿದೆಡೆ ಪ್ರತಿಷ್ಟಿತ ಬಿಲ್ಡರ್ , ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸಚಿವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿವೆ, ದಾಖಲೆ ಪರಿಶೀಲನೆ ನಡೆಸಿದೆ.
ಪ್ರತಿಷ್ಠಿತ ಬಿಲ್ಡರ್ಸ್, ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಕೆಲ ಸಚಿವರ ಆಪ್ತರ ನಿವಾಸಗಳ ಮೇಲೂ ಸಹ ಇಡಿ ದಾಳಿಯಾಗಿದೆ ಎಂದು ತಿಳಿದುಬಂದಿದ್ದು, ಯಾವ್ಯಾವ ಸಚಿವರ ಆಪ್ತರ ಮೇಲೆ ದಾಳಿಯಾಗಿದೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.
Published On - 10:08 pm, Wed, 26 November 25



