KPSC ಎಕ್ಸಾಂ ಕಂಟ್ರೋಲರ್ ಮನೆ ಮೇಲೆ ಇಡಿ ದಾಳಿ, ಇಡಿಗೆ ಹೆದರಿ ಬೆಂಗಳೂರು ತೊರೆದ್ರಾ IAS ಅಧಿಕಾರಿ?

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆದಿದೆ ಎನ್ನಲಾದ ಬೃಹತ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಭರ್ಜರಿ ಎಂಟ್ರಿ ಕೊಟ್ಟಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಪಿಎಸ್‌ಸಿ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳ ಬರೋಬ್ಬರಿ 20 ಸ್ಥಳಗಳ ಮೇಲೆ ಈಗಾಗಲೇ ಏಕಕಾಲದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ IAS ಅಧಿಕಾರಿ ಜ್ಞಾನೇಂದ್ರಕುಮಾರ್ ಮನೆ ಮೇಲೆ ದಾಳಿ ಮಾಡಿದೆ.

KPSC ಎಕ್ಸಾಂ ಕಂಟ್ರೋಲರ್ ಮನೆ ಮೇಲೆ ಇಡಿ ದಾಳಿ, ಇಡಿಗೆ ಹೆದರಿ ಬೆಂಗಳೂರು ತೊರೆದ್ರಾ IAS ಅಧಿಕಾರಿ?
Ias Officer Gyanendra Gangwar
Edited By:

Updated on: Aug 23, 2026 | 5:00 PM

ಬೆಂಗಳೂರು, (ಆಗಸ್ಟ್ 23): ಕರ್ನಾಟಕ ಲೋಕಸೇವಾ ಆಯೋಗ(KPSC) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ದಾಳಿ ನಡೆಸಿದೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಹಾಲಿ ಸದಸ್ಯೆ ಶಾಂತಾ ಹೊಸಮನಿ ಸೇರಿದಂತೆ ಹಲವರ ಮನೆ ಹಾಗೂ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇದರ ಬೆನ್ನಲ್ಲೇ ಇತ್ತ IAS ಅಧಿಕಾರಿ ಜ್ಞಾನೇಂದ್ರಕುಮಾರ್ ಮನೆ ಮೇಲೆ ಮಾಡಿದೆ. ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ. ಆದ್ರೆ,  ಮನೆಗೆ ಬೀಗ ಹಾಕಿರುವುದರಿಂದ ಕೀ ಮೇಕರ್​​​​ನನ್ನು ಕರೆಯಿಸಿ ಬಾಗಿಲು ಓಪನ್ ಮಾಡಿಸಿದ್ದಾರೆ.

ನಕಲಿ ಕೀ ಮಾಡಿಸಿ ಬಾಗಿಲು ಓಪನ್

ಮುಂದೆ ಯಾವುದೇ ಆರೋಪಗಳು ಬಾರದಂತೆ ಮುಂಜಾಗ್ರತಾವಾಗಿ ಇಡಿ ಸಿಆರ್ ಪಿ ಎಫ್ ಹಾಗೂ ಇಡಿ ಅಧಿಕಾರಿಗಳು ಮನೆಯೊಳಗೆ ಹೋಗುವ ಮುನ್ನ ಎಲ್ಲಾ ತಪಾಸಣೆಗೆ ಒಳಗಾಗಿದ್ದು,ಇದನ್ನು ವಿಡಿಯೋ ಮಾಡಿದ್ದಾರೆ. ಇನ್ನು ಕೀ ಮಾಡುವುದು ಹಾಗೂ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಿಕೊಂಡು ಮನೆಯೊಳಗೆ ಪ್ರವೇಶಿಸಿದ್ದಾರೆ. ಮನೆ ಲಾಕ್ ಆಗಿದ್ದರಿಂದ ಸುಮಾರು ಮೂರು ಗಂಟೆಗಳಿಂದ ಸತತ ಪ್ರಯತ್ನ ಪಟ್ಟು ಮನೆ ಒಳಗೆ ತೆರಳಿದ್ದಾರೆ.

ಇದನ್ನೂ ನೋಡಿ: ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಎಲ್ಲಿಗೆ ಹೋಗಿದ್ದಾರೆಂದು ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ

2016ನೇ ಬ್ಯಾಚ್​​ನ IAS ಅಧಿಕಾರಿ ಜ್ಞಾನೇಂದ್ರ ಕುಮಾರ್, 10 ವರ್ಷಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಮಾರ್ಚ್​​ವರೆಗೂ KPSCಯಲ್ಲಿ ಎಕ್ಸಾಂ ಕಂಟ್ರೋಲರ್​ ಆಗಿದ್ದರು. ಅಲ್ಲದೇ ಪಶುವೈದ್ಯಾಧಿಕಾರಿ ಮತ್ತು KAS ಪರೀಕ್ಷಾ ಮೇಲ್ವಿಚಾರಕರಾಗಿದ್ದರು. ಹೀಗಾಗಿ ಇಡಿ ಅಧಿಕಾರಿಗಳು ಮೂರು ಕಾರುಗಳಲ್ಲಿ ಆಗಮಿಸಿ ಲಾಕ್ ಮುರಿದು ಮನೆ ಪ್ರವೇಶ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಯುಪಿಗೆ ಹೋಗಿರುವ ಐಎಎಸ್ ಅಧಿಕಾರಿ

ಇಡಿ ದಾಳಿ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಬೆಂಗಳೂರು ವಿಮಾನ ನಿಲ್ದಾಣದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಹೀಗಾಗಿ ಅವರು ಎಲ್ಲಿ ಹೋಗಿದ್ದಾರೆ ಏನು ಎನ್ನುವ ಮಾಹಿತಿ ಇಲ್ಲದಿದ್ದರಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಕೊನೆ ಈ ಬಗ್ಗೆ ಸ್ವತಃ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ಅವರು ತಮ್ಮ ಉತ್ತರ ಪ್ರದೇಶಕ್ಕೆ ಹೋಗಿದ್ದಾರೆ. ತಂದೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇತ್ತ ಬೆಂಗಳೂರಿನಲ್ಲಿ ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ಇಡಿ ದಾಳಿಯಾಗಿದೆ.

ಹಗರಣಕ್ಕೆ ಸಂಬಂಧಿಸಿದಂತೆ  ಕೆಪಿಎಸ್​​​​​ಸಿ ಮಾಜಿ ಅಧ್ಯಕ್ಷ ಸೇರಿದಂತೆ ಇತರರ ಮೇಲೆ ಇಡಿ ಅಧಿಕಾರಿಗಳು ಮಾಡಿದ್ದಾರೆ. ಹೀಗಾಗಿ ತಮ್ಮ ಮನೆ ಮೇಲೂ ದಾಳಿಯಾಗಬಹುದು ಎಂದು ಮುನ್ಸೂಚನೆ ಸಿಗುತ್ತಿದ್ದಂತೆಯೇ ಜ್ಞಾನೇಂದ್ರ ಕುಮಾರ್ ಬೆಂಗಳೂರು ಬಿಟ್ಟು ತೆರಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಏನೆಲ್ಲಾ ದಾಖಲೆಗಳು ಸಿಗಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Sun, 23 August 26

Loading...
Unable to load recommendations.
Follow Us