1ರಿಂದ 9ನೇ ತರಗತಿವರೆಗೆ ಪರೀಕ್ಷೆ ಇಲ್ಲದೇ ತೇರ್ಗಡೆ? ಕೆಲ ಹೊತ್ತಿನಲ್ಲೇ ನಿರ್ಧಾರ

ಕಲಿಕಾ ಆಸಕ್ತಿ, ಚಟುವಟಿಕೆ ಆಧರಿಸಿ ತೇರ್ಗಡೆಗೆ ಚಿಂತನೆ ನಡೆಸಲಾಗಿದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ 10ನೇ ತರಗತಿಗೆ ಸೇರುವ ಹಿನ್ನೆಲೆಯಿಂದ ಓಈ ತರಗತಿಯ ಮಕ್ಕಳಿಗೆ ಬಹು ಆಯ್ಕೆಯ ಪ್ರಶ್ನೆಗಳ ಪರೀಕ್ಷೆ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ.

  • TV9 Web Team
  • Published On - 11:24 AM, 5 Apr 2021
1ರಿಂದ 9ನೇ ತರಗತಿವರೆಗೆ ಪರೀಕ್ಷೆ ಇಲ್ಲದೇ ತೇರ್ಗಡೆ? ಕೆಲ ಹೊತ್ತಿನಲ್ಲೇ ನಿರ್ಧಾರ
ಪರೀಕ್ಷೆ

ಬೆಂಗಳೂರು: ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಇನ್ನಷ್ಟು ಅಪಾಯಕ್ಕೆ ಆಹ್ವಾನ ನೀಡಲಿದೆ ಎಂಬ ಭಯದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟಗಳು ಮತ್ತು ಶಿಕ್ಷಣ ಸಚಿವ ಸುರೇಶ್ ‌ಕುಮಾರ್ ನೇತೃತ್ವದ ಸಭೆ ನಡೆಯುತ್ತಿದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆಯೇ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವುದು ಮತ್ತು 6ರಿಂದ 8ನೇ ತರಗತಿ ಮಕ್ಕಳಿಗೆ ಲಿಖಿತ ಪರೀಕ್ಷೆ ಬದಲಿಗೆ ಮೌಲ್ಯಾಂಕನ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಕಲಿಕಾ ಆಸಕ್ತಿ, ಚಟುವಟಿಕೆ ಆಧರಿಸಿ ತೇರ್ಗಡೆಗೆ ಚಿಂತನೆ ನಡೆಸಲಾಗಿದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ 10ನೇ ತರಗತಿಗೆ ಸೇರುವ ಹಿನ್ನೆಲೆಯಿಂದ ಓಈ ತರಗತಿಯ ಮಕ್ಕಳಿಗೆ ಬಹು ಆಯ್ಕೆಯ ಪ್ರಶ್ನೆಗಳ ಪರೀಕ್ಷೆ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ.

ಜಿಮ್​ಗಳ ಮೇಲಿನ ನಿರ್ಬಂಧ ತೆರವು
ಜಿಮ್​ಗಳ ಮೇಲೆ ಹೇರಿದ್ದ ಸಂಪೂರ್ಣ ನಿರ್ಬಂಧವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಏಪ್ರಿಲ್ 4ರಂದು ನೂತನ ಆದೇಶ ಹೊರಡಿಸಿದೆ. ಜಿಮ್​ಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ರಾಜ್ಯ ಸರ್ಕಾರ ಈ ಮೊದಲು ಹೇಳಿತ್ತು. ಆದರೆ, ಈ ನಿಯಮಕ್ಕೆ ಜಿಮ್ ಅಸೋಸಿಯೇಷನ್​ನಿಂದ ಆಕ್ಷೇಪ ವ್ಯಕ್ತವಾಗಿತ್ತು. ಸಿನಿಮಾ ಹಾಲ್​ಗಳಿಗೆ ನೀಡಿದಂತೆ ಜಿಮ್​ಗಳಿಗೂ ಶೇಕಡಾ 50ರಷ್ಟು ಅವಕಾಶ ನೀಡಿ ಎಂದು ಜಿಮ್ ಅಸೋಸಿಯೇಷನ್ ಮನವಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಆದೇಶವನ್ನು ಇಂದು ಹೊರಡಿಸಿದೆ. ಜಿಮ್​ಗಳಲ್ಲಿ ಶೇಕಡಾ 50ರಷ್ಟು ಅವಕಾಶ ನೀಡಿ, ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಜಿಮ್​ಗಳಲ್ಲಿ ಉಪಕರಣಗಳನ್ನ ಸ್ಯಾನಿಟೈಸ್​​​ ಮಾಡಬೇಕು ಎಂದು ಜಿಮ್​ಗಳಿಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: Coronavirus India Update: ಒಂದೇ ದಿನ 1 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಕರಣ

ಚಿತ್ರದುರ್ಗ: ಆ್ಯಕ್ಸಿಜನ್​ ಖಾಲಿಯಾಗಿ ದಾರಿ ಮಧ್ಯ ಕೊರೊನಾ ಸೋಂಕು ತಗುಲಿದ್ದ ವೃದ್ಧೆ ಸಾವು