ಎಂಟು ಮಕ್ಕಳ ತಂದೆಗೆ ನೆರೆಮನೆಯಾಕೆ ಮೇಲೆ ಕಣ್ಣು, ತೋಟದಲ್ಲಿ ಕೈ ಹಿಡಿದು ಎಳೆದು ಹೆಣವಾದ
ಅನೈತಿಕ ಸಂಬಂಧದ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯ ಕೊಲೆಯಾದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ನರನೂರು ಗ್ರಾಮದಲ್ಲಿ ನಡೆದಿದೆ. ಮತ್ತೊಂದೆಡೆ ಹಾಸನದಲ್ಲಿ ಅಪರಿಚಿತ ವ್ಯಕ್ತಿ ಹತ್ಯೆಗೈದು ಬೆಂಕಿ ಹಚ್ಚಿರುವ ಹಂತಕರು.

ಬಾಗಲಕೋಟೆ: ರಾತ್ರಿ ಪ್ರಶಾಂತವಾಗಿದ್ದ ಬಾದಾಮಿ ತಾಲೂಕಿನ ನೆರನೂರು ಗ್ರಾಮ ಬೆಳಗ್ಗೆ ಅಷ್ಟ್ರಲ್ಲಿ ದಂಗಾಗಿತ್ತು. ಪೊಲೀಸರ ಎಂಟ್ರಿ ಆಗಿತ್ತು. ಗ್ರಾಮಸ್ಥರೆಲ್ಲಾ ಒಂದ್ಕಡೆ ಸೇರಿ ಆತಂಕದಿಂದ ನೋಡ್ತಿದ್ರು. ಅಷ್ಟಕ್ಕೂ ನೆರನೂರು ಗ್ರಾಮದಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗಲು ಕಾರಣ ಇದೇ ಊರಿನ ಲಕ್ಷ್ಮಣ.
ಲಕ್ಷ್ಮಣನಿಗೆ ರೇಣುಕಾ ಅನ್ನೋರ ಜತೆ ಮದ್ವೆಯಾಗಿತ್ತು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಏಳು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿದೆ. ಆದ್ರೂ ಇದೇ ಊರಿನ ಮತ್ತೊಬ್ಬಳು ರೇಣುಕಾ ಅನ್ನೋಳ ಜೊತೆ ಅನೈತಿಕ ಸಂಬಂಧ ಹೊಂದಿದ್ನಂತೆ. ಸುಮಾರು ಏಳು ವರ್ಷಗಳಿಂದ ಈ ಲವ್ವಿಡವ್ವಿ ನಡೀತಿದ್ದಂತೆ. ಇದನ್ನ ಗಮನಿಸಿದ್ದ ರೇಣುಕಾಳ ತಂದೆ, ತನ್ನ ಮಗಳಿಗೆ ಬುದ್ಧಿ ಹೇಳಿ, ಲಕ್ಷ್ಮಣನಿಂದ ದೂರವಿರಿಸಿದ್ರು. ಆದ್ರೆ ನಿನ್ನೆ ಕುರಿಗಳನ್ನ ಮೇಯಿಸುತ್ತಾ ತೋಟದ ಕಡೆಗೆ ಹೋಗಿದ್ದ ಲಕ್ಷ್ಮಣ, ರೇಣುಕಾಳನ್ನ ಕೆಣಕಿದ್ದಾನಂತೆ. ಅಷ್ಟೇ ಅಲ್ಲ ಕೈ ಹಿಡಿದು ಬಲವಂತವಾಗಿ ಎಳೆದೊಯ್ಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೋಪಗೊಂಡ ರೇಣುಕಾ ಹಾಗೂ ಆಕೆಯ ತಂದೆ, ಮತ್ತು ತಮ್ಮ ಎಲ್ಲರೂ ಸೇರಿ ಲಕ್ಷ್ಮಣನನ್ನ ಬೇವಿನ ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ರೇಣುಕಾ ಸಂಬಂಧಿಕರೊಬ್ರು ಲಕ್ಷ್ಮಣನ ಸ್ಥಿತಿ ನೋಡಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದ್ರೆ ಮಾರ್ಗ ಮಧ್ಯೆಯೇ ಲಕ್ಷ್ಮಣ ಕೊನೆಯುಸಿರೆಳೆದಿದ್ದಾನೆ.
ವಿಷ್ಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿ ಬಂದ ಪೊಲೀಸರು ಘಟನೆ ಸಂಬಂಧ ಕಂಪ್ಲೀಟ್ ಡಿಟೇಲ್ಸ್ ಪಡೆದಿದ್ದಾರೆ. ಬಳಿಕ ತೋಟದ ಮನೆಯಲ್ಲಿದ್ದ ಪ್ರೇಯಸಿ ರೇಣುಕಾ, ತಂದೆ ಯಮನಪ್ಪ, ಸೋದರ ಸಂಜುವನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನದಲ್ಲಿ ವ್ಯಕ್ತಿಯನ್ನ ಹತ್ಯೆಗೈದು ಸುಟ್ಟ ಹಾಕಿದ ಹಂತಕರು ಇನ್ನು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸೊಪ್ಪಿನಹಳ್ಳಿ ಬಳಿ ಸುಮಾರು 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಬಳಿಕ ಗುರುತು ಸಿಗದಂತೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾರೆ. ಅರೆಬರೆ ಬೆಂದ ದೇಹ ಕಂಟು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಳನೆ ನಡೆಸಿದ್ದಾರೆ. ಹಾಗೇ ಸತ್ತವನು ಯಾರು ಹಂತಕರು ಯಾರೋ ಅನ್ನೋ ಬಗ್ಗೆ ತನಿಖೆ ಶುರು ಮಾಡಿದ್ದಾರೆ.
ಒಟ್ನಲ್ಲಿ ಅತ್ತ ಬಾಗಲಕೋಟೆಯಲ್ಲಿ ಬೇಡ ಬೇಡ ಎಂದರೂ ಗೃಹಿಣಿಯ ಹಿಂದೆ ಬಿದ್ದು ಕೊಲೆಯಾಗಿದ್ದಾನೆ. ಇನ್ನು ಹಾಸನದಲ್ಲಿ ಬರ್ಬರವಾಗಿ ಹತ್ಯೆಯಾಗಿ ಸುಟ್ಟು ಕರಕಲಾಗಿರುವ ಅಪರಿಚಿತ ವ್ಯಕ್ತಿಯ ಹತ್ಯೆಯ ಹಂತಕರಿಗಾಗಿ ಪೊಲೀಸರು ಬೇಟೆ ಶುರುಮಾಡಿದ್ದಾರೆ.
ಇದನ್ನೂ ಓದಿ: SSR Death Anniversary: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್ ಮಾಡಿದ್ದ ಸುಶಾಂತ್?