Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Mysuru Expressway: ಎಕ್ಸ್​ಪ್ರೆಸ್​ ವೇಯಲ್ಲಿ ಬೀಳುತ್ತಿರುವ ವಿದ್ಯುತ್ ಕಂಬಗಳು; ಪ್ರಯಾಣಿಕರಿಗೆ ಆತಂಕ

ಭಾರಿ ಗಾಳಿಗೆ ಮದ್ದೂರಿನ ರುದ್ರಾಕ್ಷಿಪುರ ಹಾಗೂ ತೂಬಿನಕೆರೆ ಬಳಿಯ ಎಕ್ಸ್‌ಪ್ರೆಸ್‌ವೇನಲ್ಲಿ ನಾಲ್ಕೈದು ವಿದ್ಯುತ್‌ ಕಂಬಗಳು ಧರೆಗುರುಳಿವೆ.

Bengaluru Mysuru Expressway: ಎಕ್ಸ್​ಪ್ರೆಸ್​ ವೇಯಲ್ಲಿ ಬೀಳುತ್ತಿರುವ ವಿದ್ಯುತ್ ಕಂಬಗಳು; ಪ್ರಯಾಣಿಕರಿಗೆ ಆತಂಕ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು
Follow us
TV9 Web
| Updated By: Ganapathi Sharma

Updated on: Jul 27, 2023 | 7:32 PM

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru Mysuru Expressway) ಅಳವಡಿಸಿರುವ ವಿದ್ಯುತ್‌ ಕಂಬಗಳು (Electric poles) ರಸ್ತೆಗೆ ಕುಸಿದು ಬೀಳುತ್ತಿದ್ದು, ಪ್ರಯಾಣಿಕರಿಗೆ ಆತಂಕ ಎದುರಾಗಿದೆ. ಭಾರಿ ಗಾಳಿಗೆ ಮದ್ದೂರಿನ ರುದ್ರಾಕ್ಷಿಪುರ ಹಾಗೂ ತೂಬಿನಕೆರೆ ಬಳಿಯ ಎಕ್ಸ್‌ಪ್ರೆಸ್‌ವೇನಲ್ಲಿ ನಾಲ್ಕೈದು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಒಪ್ಪಿಗೆ ನೀಡಿತ್ತು. ಆದರೆ ಕಾಮಗಾರಿ ವಿಳಂಬವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ ಅಳವಡಿಸಲಾಗಿರುವ ವಿದ್ಯುತ್ ಕಂಬಗಳು ದುರ್ಬಲಗೊಂಡಿವೆ ಮತ್ತು ಅಲುಗಾಡುತ್ತಿವೆ. ವಿದ್ಯುತ್ ಕಂಬಗಳ ಆಧಾರಕ್ಕಾಗಿ ಅವುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಲೋಹದ ಬಾರ್​​ಗಳನ್ನು ದುಷ್ಕರ್ಮಿಗಳು ಕಳವು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಲೋಹದ ಬಾರ್​ಗಳನ್ನು ತೆಗೆಯುವ ಕಾರಣ ಕಂಬಗಳು ದುರ್ಬಲಗೊಂಡು ಗಾಳಿಗೆ ಧರೆಗುರುಳುತ್ತಿವೆ ಎನ್ನಲಾಗಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ಅಧಿಕಾರಿಯೊಬ್ಬರು ಇತ್ತೀಚೆಗೆ 240 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಆಧಾರವಾಗಿ ಇಟ್ಟಿದ್ದ ಲೋಹದ ಬಾರ್‌ಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟು 400 ವಿದ್ಯುತ್‌ ಕಂಬಗಳಿವೆ.

ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇಯಲ್ಲಿ ಎಸ್​ಒಎಸ್ ಬಾಕ್ಸ್; ಏನಿದು, ಬಳಸುವುದು ಹೇಗೆ?

ವಿದ್ಯುತ್ ಕಂಬಗಳು 18 ರಿಂದ 21 ಮೀಟರ್ ಉದ್ದವಿದೆ. ರಾತ್ರಿ ವೇಳೆ ದುಷ್ಕರ್ಮಿಗಳು ಕಂಬಗಳಿಗೆ ಅಡ್ಡಲಾಗಿರುವ ಲೋಹದ ಬಾರ್‌ಗಳನ್ನು ಕದಿಯುತ್ತಾರೆ. ವಿದ್ಯುತ್ ಕಂಬಗಳನ್ನು ಉನ್ನತ ದರ್ಜೆಯ ಉಕ್ಕಿನಿಂದ ಮಾಡಲಾಗಿದ್ದು, ವಿದ್ಯುತ್ ಕಂಬಗಳಿಂದ ಲೋಹದ ಬಾರ್‌ಗಳನ್ನು ಕದ್ದು ಸ್ಕ್ರ್ಯಾಪ್ ಯಾರ್ಡ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಎನ್‌ಎಚ್‌ಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ