ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ಬಿದ್ದ ಕಾಯಿ : ಹಾವೇರಿ ಜಿಲ್ಲೆಯಲ್ಲಿ 11 ತಿಂಗಳ ಮಗು ಸಾವು

ನಿನ್ನೆ ಬೆಳಗ್ಗೆ ಮನೆಯ ಮುಂದೆ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಊಟ ಮಾಡಿಸುತ್ತಿದ್ದಳು. ಈ ವೇಳೆ ಮನೆಯ ಮುಂದೆ ಇದ್ದ ತೆಂಗಿನಮರದಿಂದ ತೆಂಗಿನಕಾಯಿ ಮಗುವಿನ ತಲೆಯ ಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ.

ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ಬಿದ್ದ ಕಾಯಿ : ಹಾವೇರಿ ಜಿಲ್ಲೆಯಲ್ಲಿ 11 ತಿಂಗಳ ಮಗು ಸಾವು
ಸಾಂದರ್ಭಿಕ ಚಿತ್ರ
Edited By:

Updated on: Jun 30, 2021 | 10:54 AM

ಹಾವೇರಿ : ಮನೆಯ ಮುಂದೆ ತೆಂಗಿನಕಾಯಿ ಮರ ಇದ್ದರೆ ಒಳ್ಳೆಯದು ಎನ್ನುವ ಮಾತಿದೆ. ಆದರೆ ಹಾವೇರಿಯಲ್ಲಿ ಮನೆ ಮುಂದೆ ಇದ್ದ ಮರವೇ ಮಗುವಿನ ಸಾವಿಗೆ ಕಾರಣವಾಗಿದೆ. ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಮನೆಯ ಮುಂದಿನ ತೆಂಗಿನಮರದಿಂದ ತೆಂಗಿನಕಾಯಿ ಬಿದ್ದು, ಹನ್ನೊಂದು ತಿಂಗಳ‌ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ. ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬೀಳುತ್ತಿದ್ದಂತೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.

ಘಟನೆ ನಡೆದಿದ್ದು ಹೇಗೆ?
ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟ ಹನ್ನೊಂದು ತಿಂಗಳಿನ ಮಗುವಿನ ಹೆಸರು ತನ್ವೀತ್ ವಾಲ್ಮೀಕಿ. ತನ್ವೀತ್ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಯ ಪುತ್ರ. ನಿನ್ನೆ ಬೆಳಗ್ಗೆ ಮನೆಯ ಮುಂದೆ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಊಟ ಮಾಡಿಸುತ್ತಿದ್ದಳು. ಈ ವೇಳೆ ಮನೆಯ ಮುಂದೆ ಇದ್ದ ತೆಂಗಿನಮರದಿಂದ ತೆಂಗಿನಕಾಯಿ ಮಗುವಿನ ತಲೆಯ ಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ. ಮಗುವಿನ ತಲೆಯ ಮೇಲೆ ಭಾರವಾದ ತೆಂಗಿನಕಾಯಿ ಬಿದ್ದಿದೆ ಮಗು ಸಾವಿಗೆ ಕಾರಣವಾಗಿದೆ.

ಚಿಕಿತ್ಸೆ ಫಲಿಸದೆ ಮೃತಪಟ್ಟ ಮಗು
ಮನೆಯ ಮುಂದಿನ ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗುವಿನ ತಲೆಗೆ ಗಂಭೀರವಾದ ಗಾಯವಾಗಿದೆ. ತಕ್ಷಣವೆ ಹನ್ನೊಂದು ತಿಂಗಳ ಮಗುವನ್ನು ಮಗುವಿನ ಮನೆಯವರು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗುವಿನ ತಲೆಗೆ ಬಲವಾಗಿ ಏಟು ಬಿದ್ದಿದ್ದರಿಂದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಹನ್ನೊಂದು ತಿಂಗಳ ಮಗುವನ್ನು ಕಳೆದುಕೊಂಡ ಮಗುವಿನ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರಲ್ಲಿ ದುಃಖ‌ ಮಡುಗಟ್ಟಿತ್ತು. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:

ಫ್ಲೋರಿಡಾದಲ್ಲಿ ಕಟ್ಟಡ ಕುಸಿತ; ಭಾರತೀಯ ಮೂಲದ ದಂಪತಿ, 1 ವರ್ಷದ ಮಗು ಸಹಿತ 150 ಜನ ಕಣ್ಮರೆ

ಗಾಳಿಗೆ ಮನೆ ಚಾವಣಿ ಹಾರಿ ಜೋಳಿಗೆಯಲ್ಲಿದ್ದ 3 ತಿಂಗಳ ಮಗು ಸಾವು