ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ಬುಕ್: ಸೈಬರ್ ವಂಚಕರ ವಿರುದ್ಧ ಎಫ್​ಐಆರ್ ದಾಖಲು

ಇತ್ತೀಚೆಗೆ ಮಾಜಿ ಶಾಸಕ ಶ್ರೀರಾಮುಲು ಅವರ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್​ ಮಾಡಿ ಖದೀಮರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಬಿಬಿಎಂಪಿ ಆಯುಕ್ತರ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ಸೃಷ್ಟಿ ಮಾಡಿದ ಖದೀಮರು ಕನ್ನ ಹೊಡೆಯಲು ಮುಂದಾಗಿದ್ದರು. ಸದ್ಯ ಸೈಬರ್ ವಂಚಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ಬುಕ್: ಸೈಬರ್ ವಂಚಕರ ವಿರುದ್ಧ ಎಫ್​ಐಆರ್ ದಾಖಲು
ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ಬುಕ್: ಸೈಬರ್ ವಂಚಕರ ವಿರುದ್ಧ ಎಫ್​ಐಆರ್ ದಾಖಲು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 11, 2024 | 9:13 PM

ಬೆಂಗಳೂರು, ಅಕ್ಟೋಬರ್​ 11: ಬಿಬಿಎಂಪಿ (bbmp) ಆಯುಕ್ತರ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ಸೃಷ್ಟಿ ಮಾಡಿ  ಫೇಸ್​ಬುಕ್ ಅಕೌಂಟ್​ಗೆ ಖದೀಮರು ಕನ್ನ ಹಾಕಿರುವಂತಹ ಘಟನೆ ನಡೆದಿದೆ. ತುಷಾರ್ ಗಿರಿನಾಥ್ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿ ಮಾಡಲಾಗಿದೆ. ತುಷಾರ್ ಗಿರಿನಾಥ್ ಖಾತೆ ಹ್ಯಾಕ್ ಆದ ಬಗ್ಗೆ ಪಾಲಿಕೆ ಮಾಹಿತಿ ಹಂಚಿಕೊಂಡಿದೆ. ಈ ಬಗ್ಗೆ ಕೇಂದ್ರ ಪೊಲೀಸ್ ಠಾಣೆಗೆ ಬಿಬಿಎಂಪಿಯಿಂದ ದೂರು ನೀಡಿದ್ದು ಸೈಬರ್ ವಂಚಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮಾಜಿ ಶಾಸಕ ಶ್ರೀರಾಮುಲು ಸಾಮಾಜಿಕ ಜಾಲತಾಣಗಳು ಹ್ಯಾಕ್​

ಇನ್ನು ಇತ್ತೀಚೆಗೆ ಮಾಜಿ ಶಾಸಕ ಶ್ರೀರಾಮುಲು ಅವರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಇನ್ಸ್​ಸ್ಟಾಗ್ರಾಂ ಖಾತೆಗಳನ್ನು ಖದೀಮರು ಹ್ಯಾಕ್​ ಮಾಡಿದ್ದರು. ಸಿಕ್ಕಸಿಕ್ಕವರಿಗೆ ನಕಲಿ ಪೋಸ್ಟ್, ಶೇರ್ ಮಾರ್ಕೆಟ್ ಲಿಂಕ್ ಕಳುಹಿಸಿ ಹ್ಯಾಕ್‌ರ್​ಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ವಿಚಾರ ತಿಳಿಯುತ್ತಿದ್ದಂತೆ ಶ್ರೀರಾಮುಲು ಯಾರಿಗೂ ಹಣ ನೀಡಬೇಡಿ. ಒಂದು ವೇಳೆ ನೀಡಿದ್ದೇ ಆದರೆ ನಾನು ಹೊಣೆಯಲ್ಲ ಎಂದು ಹೇಳಿದ್ದರು.

ನಕಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆಗೆ ವಿಫಲ ಯತ್ನ

ಉಡುಪಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದ ಅಪರಿಚಿತ ತಂಡವೊಂದು ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿದ್ದ ಘಟನೆ ಇತ್ತೀಗೆಚೆ ಬ್ರಹ್ಮಾವರ ತಾಲೂಕಿನ ಮಣೂರಿನಲ್ಲಿ ನಡೆದಿತ್ತು. ಮನೆ ಮಾಲಕಿ ಮಣೂರು ಗ್ರಾಮದ ಕವಿತಾ ಅವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮಾಜಿ ಶಾಸಕ ಶ್ರೀರಾಮುಲು ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್​: ಯಾರಿಗೂ ಹಣ ನೀಡದಂತೆ ಮನವಿ

ಜುಲೈ 25ರಂದು ಬೆಳಿಗ್ಗೆ 8.30ರ ವೇಳೆಗೆ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತ ತಂಡವು, ಮನೆಯ ಬಾಗಿಲು ಬಡಿದಿತ್ತು. ಆದರೆ ಆಗ ಬಾಗಿಲು ತೆಗೆಯಲಿಲ್ಲ. ಬಳಿಕ 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ಟಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿ ಹಾಗೂ ಗೇಟು ತೆರೆಯದಾಗ ವಾಪಾಸು ಹೋಗಿರುವುದಾಗಿ ತಿಳಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ
‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ
ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್