ಮುಸ್ಲಿಮರ ಮೇಲೆ ಸುಳ್ಳು ಕೇಸ್ ಹಾಕುವುದನ್ನ ಖಂಡಿಸ್ತೇವೆ, ಅವರ ಜತೆ ನಾವು ಗಟ್ಟಿಯಾಗಿ ನಿಲ್ತೇವೆ – ಸಿದ್ದರಾಮಯ್ಯ ಅಭಯ
siddaramaiah: ಜಿಎಸ್ ಟಿ ಪರಿಹಾರ ಈ ವರ್ಷ ಮುಕ್ತಾಯ ಆಗ್ತಾ ಇದೆ. ಇದನ್ನ ಇನ್ನೂ ಐದು ವರ್ಷ ಮುಂದುವರಿಸಬೇಕು. ಪ್ರತಿ ವರ್ಷ 19 ಸಾವಿರ ಕೋಟಿ ರಾಜ್ಯಕ್ಕೆ ಬರ್ತಾ ಇತ್ತು. ಜಿಎಸ್ ಟಿ ಬರುವ ಮೊದಲು ನಮ್ಮ ಬೆಳವಣಿಗೆ ಶೇಕಡಾ 14 ರಷ್ಟಿತ್ತು. ಈಗ ಕೇವಲ 6 % ಆಗಿದೆ ಎಂದು ಸಿದ್ದರಾಮಯ್ಯ ವಿಷಾದಿಸಿದರು.
ಕರ್ನಾಟಕ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಬ್ಬರೂ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಮುನ್ನೆಲೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ಮುಸ್ಲಿಮರ ಮೇಲೆ ಸುಳ್ಳು ಕೇಸ್ ಹಾಕುವುದನ್ನ ಖಂಡಿಸುತ್ತೇವೆ. ಸಾಂಸ್ಕೃತಿಕ ಭಯೋತ್ಪಾದನೆ ವಿರುದ್ಧ ನಾವು ಹೋರಾಡುತ್ತೇವೆ. ನಾವು ಮುಸ್ಲಿಮರ ಜತೆ ಗಟ್ಟಿಯಾಗಿ ನಿಲ್ತೇವೆ. ಮುಸ್ಲಿಂ ವಿರುದ್ಧ ಸುಳ್ಳು ಕೇಸ್ ಹಾಕಲು ಅವಕಾಶ ನೀಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಯ ನೀಡಿದರು.
ಮೋದಿ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ನಾವು ಅಧಿಕಾರಕ್ಕೆ ಬಂದರೆ ಬೆಲೆ ನಿಯಂತ್ರಣ ಮಾಡ್ತೇವೆ. ಜಿಎಸ್ ಟಿ ಪರಿಹಾರ ಈ ವರ್ಷ ಮುಕ್ತಾಯ ಆಗ್ತಾ ಇದೆ. ಇದನ್ನ ಇನ್ನೂ ಐದು ವರ್ಷ ಮುಂದುವರಿಸಬೇಕು. ಪ್ರತಿ ವರ್ಷ 19 ಸಾವಿರ ಕೋಟಿ ರಾಜ್ಯಕ್ಕೆ ಬರ್ತಾ ಇತ್ತು. ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ನಲ್ಲೂ ಏನೂ ಹೇಳಿಲ್ಲ ಅಥವಾ ಮೌಕಿಕವಾಗಿಯೂ ಏನೂ ಹೇಳಿಲ್ಲ. ಹೀಗಾಗಿ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ಮುಂದುವರಿಸಬೇಕು. ಜಿಎಸ್ ಟಿ ಬರುವ ಮೊದಲು ನಮ್ಮ ಬೆಳವಣಿಗೆ ಶೇಕಡಾ 14 ರಷ್ಟಿತ್ತು. ಈಗ ಕೇವಲ 6 % ಆಗಿದೆ ಎಂದು ಸಿದ್ದರಾಮಯ್ಯ ವಿಷಾದಿಸಿದರು.
ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ತರಲು ಕಾಂಗ್ರೆಸ್ ಬದ್ಧ
ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ತರಲು ಕಾಂಗ್ರೆಸ್ ಬದ್ಧವಿದೆ. ಇನ್ನು, ಬ್ಯಾಕ್ಲಾಗ್ ಹುದ್ದೆಗಳು ಭರ್ತಿ ಆಗಿಲ್ಲ ಎಂದ ಸಿದ್ದರಾಮಯ್ಯ ಸರ್ಕಾರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಬೇಕು. ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಮೀಸಲಾತಿಯನ್ನ ತರಬೇಕು. ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ನಾವು ನಿರ್ಧರಿಸಿದ್ದೇವೆ. ಗುತ್ತಿಗೆ ಆಧಾರದ ಕೆಲಸದಲ್ಲಿ ಮೀಸಲಾತಿ ಇಲ್ಲ. ಅಲ್ಲಿಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಹೀಗಾಗಿ ನಾವು ಅಲ್ಲಿಯೂ ಮೀಸಲಾತಿ ತರ್ತೇವೆ. ನಾನು 2018 ರಲ್ಲಿ ಬಜೆಟ್ ಮಂಡಿಸಿದಾಗ ದಲಿತರಿಗೆ 29,700 ಕೋಟಿ ರೂಪಾಯಿ ನೀಡಿದ್ದೆ. ಶೇಕಡಾ 24 ಹಣವನ್ನು ಮೀಸಲಿಟ್ಟಿದೆ. ಆದರೆ ಈಗ ಕೇವಲ 28 ಸಾವಿರ ರೂ ಕೊಟ್ಟಿದ್ದಾರೆ. ಈಗ ಡೀಮ್ಡ್ ಎಕ್ಸಪೆಂಡಿಚರ್ ಅಡಿಯಲ್ಲಿ ಡೀವಿಯೇಷನ್ ಆಗ್ತಾ ಇದೆ. ಸೆಕ್ಷನ್ 7 ಡಿ ಅಡಿಯಲ್ಲಿ ಈ ರೀತಿ ದುರುಪಯೋಗ ಆಗ್ತಾ ಇದೆ. ಈ ಸೆಕ್ಷನ್ ಅನ್ನು ತೆಗೆದು ಹಾಕ್ತೀವಿ ಎಂದು ಸಿದ್ದರಾಮಯ್ಯ ಗುಡುಗಿದರು.
Published On - 7:40 pm, Fri, 3 June 22