ಕೊರೊನಾ ಸೋಂಕಿತ ವೃದ್ಧನ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರ ಪರದಾಟ

ಬೆಂಗಳೂರು: ಕೊರೊನಾಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಹರಸಾಹಸ ಪಟ್ಟಿರುವಂತಹ ಘಟನೆ ಮತ್ತೆ ಮರುಕಳಿಸಿದೆ. ಬಸವೇಶ್ವರ ನಗರದ ಕ್ರಿಶ್ಚಿಯನ್ ಸಮುದಾಯದ 86 ವರ್ಷದ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಸೋಂಕಿತ ವೃದ್ಧ ಸೋಮವಾರವೇ ಮೃತಪಟ್ಟಿದ್ದರು. ಆದರೆ ವ್ಯಕ್ತಿಯ ಸ್ವಾಬ್ ರಿಪೋರ್ಟ್ ಬಂದಿರದ ಕಾರಣ ಆಸ್ಪತ್ರೆ ಸಿಬ್ಬಂದಿ ಮೃತದೇಹ ನೀಡಿರಲಿಲ್ಲ. ನಂತರ ಮೃತ ವೃದ್ಧನಿಗೆ ಸೋಂಕು ಇರೋದು ಧೃಡಪಟ್ಟ ನಂತರ ಖಾಸಗಿ ಆಸ್ಪತ್ರೆ ನಿನ್ನೆ ಬೆಳಗ್ಗೆ ಕುಟುಂಬಸ್ಥರಿಗೆ ದೇಹವನ್ನು ಹಸ್ತಾಂತರಿಸಿದ್ದಾರೆ. ನಂತರ ಮೃತನ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಎಂ.ಎಸ್ […]

ಕೊರೊನಾ ಸೋಂಕಿತ ವೃದ್ಧನ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರ ಪರದಾಟ
Edited By:

Updated on: Jul 17, 2020 | 10:47 AM

ಬೆಂಗಳೂರು: ಕೊರೊನಾಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಹರಸಾಹಸ ಪಟ್ಟಿರುವಂತಹ ಘಟನೆ ಮತ್ತೆ ಮರುಕಳಿಸಿದೆ. ಬಸವೇಶ್ವರ ನಗರದ ಕ್ರಿಶ್ಚಿಯನ್ ಸಮುದಾಯದ 86 ವರ್ಷದ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.

ಸೋಂಕಿತ ವೃದ್ಧ ಸೋಮವಾರವೇ ಮೃತಪಟ್ಟಿದ್ದರು. ಆದರೆ ವ್ಯಕ್ತಿಯ ಸ್ವಾಬ್ ರಿಪೋರ್ಟ್ ಬಂದಿರದ ಕಾರಣ ಆಸ್ಪತ್ರೆ ಸಿಬ್ಬಂದಿ ಮೃತದೇಹ ನೀಡಿರಲಿಲ್ಲ. ನಂತರ ಮೃತ ವೃದ್ಧನಿಗೆ ಸೋಂಕು ಇರೋದು ಧೃಡಪಟ್ಟ ನಂತರ ಖಾಸಗಿ ಆಸ್ಪತ್ರೆ ನಿನ್ನೆ ಬೆಳಗ್ಗೆ ಕುಟುಂಬಸ್ಥರಿಗೆ ದೇಹವನ್ನು ಹಸ್ತಾಂತರಿಸಿದ್ದಾರೆ. ನಂತರ ಮೃತನ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಎಂ.ಎಸ್ ಪಾಳ್ಯಕ್ಕೆ ಹೋಗಿದ್ದಾರೆ.

ಆದ್ರೆ, ಅಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಎಷ್ಟೇ ಪ್ರಯತ್ನಪಟ್ಟರು ಅಲ್ಲಿ ಅಂತ್ಯಕ್ರಿಯೆ ಮಾಡಲಾಗದೆ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಸಂಜೆವರೆಗೂ ಜೆ.ಸಿ ರಸ್ತೆಯ ಮುಸ್ಲಿಂ ಖಬ್ರಸ್ತಾನ್​ನಲ್ಲಿ ಮೃತ ದೇಹವಿಟ್ಟು ನಂತರ ಹೊಸೂರು ರಸ್ತೆಯ ಕ್ರಿಶ್ಚಿಯನ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ರೀತಿ ಕುಟುಂಬಸ್ಥರು ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ವಿಘ್ನಗಳನ್ನು ಎದುರಿಸುವಂತಾಗಿದೆ.