AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಎಫೆಕ್ಟ್: ಬೆಲೆ ಸಿಗದೆ ಹೂವಿನ ತೋಟವನ್ನು ನಾಶ ಮಾಡಿದ ಕೋಲಾರ ರೈತ

ರಾಜ್ಯದ್ಯಂತ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಹೆಚ್ಚು ಶುಭ ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಹೂವಿಗೆ ಬೇಡಿಕೆ ಇಲ್ಲ. ಈ ಕಾರಣ ರೈತ ಬೆಳೆದ ಹೂವಿಗೆ ಬೆಲೆ ಸಿಗುತ್ತಿಲ್ಲ. ಇದರಿಂದ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಚೆಂಡು ಹೂವಿನ ತೋಟವನ್ನು ನಾಶ ಮಾಡಿದ್ದಾರೆ.

ಲಾಕ್​ಡೌನ್​ ಎಫೆಕ್ಟ್: ಬೆಲೆ ಸಿಗದೆ ಹೂವಿನ ತೋಟವನ್ನು ನಾಶ ಮಾಡಿದ ಕೋಲಾರ ರೈತ
ಚೆಂಡು ಹೂ ತೋಟವನ್ನು ನಾಶ ಮಾಡುತ್ತಿರುವ ರೈತ
sandhya thejappa
|

Updated on: May 16, 2021 | 8:23 AM

Share

ಕೋಲಾರ: ಕೊರೊನಾ ನಿಯಂತ್ರಿಸಲು ಲಾಕ್​ಡೌನ್​ ಜಾರಿಯಾದ ಕಾರಣ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ದಿಕ್ಕು ತೋಚದ ರೈತ ಬೆಳೆದ ಬೆಳೆಯನ್ನು ತನ್ನ ಕೈಯಾರೆ ನಾಶ ಮಾಡುವ ಪರಿಸ್ಥಿತಿ ಬಂದೊದಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಂಗವಾದಿ ಗ್ರಾಮದಲ್ಲಿ ರೈತ ಹೂವಿನ ತೋಟವನ್ನು ನಾಶ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಂಗವಾದಿ ಗ್ರಾಮದ ರೈತ ನಂದೀಶರೆಡ್ಡಿ ಎಂಬ ರೈತ ಚೆಂಡು ಹೂವನ್ನು ಬೆಳೆದಿದ್ದರು. ಆದರೆ ರಾಜ್ಯದ್ಯಂತ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಹೆಚ್ಚು ಶುಭ ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಹೂವಿಗೆ ಬೇಡಿಕೆ ಇಲ್ಲ. ಈ ಕಾರಣ ರೈತ ಬೆಳೆದ ಹೂವಿಗೆ ಬೆಲೆ ಸಿಗುತ್ತಿಲ್ಲ. ಇದರಿಂದ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಚೆಂಡು ಹೂವಿನ ತೋಟವನ್ನು ನಾಶ ಮಾಡಿದ್ದಾರೆ.

ಮೀನುಗಳ ಮಾರಣಹೋಮ ದಾವಣಗೆರೆ: ನಗರದ ಜನಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿರುವ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿವೆ. ಟಿವಿ ಸ್ಟೇಷನ್ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದೆ. ನೂರಾರು ಮೀನುಗಳ ಸಾವಿನಿಂದ ನೀರು ಕೆಟ್ಟ ವಾಸನೆ ಬರುತ್ತಿದೆ. ದಾವಣಗೆರೆ ನಗರದ ನಿಟ್ಟುವಳ್ಳಿ, ಜಯನಗರ, ಶಿವಕುಮಾರ ಬಡಾವಣೆ ಸೇರಿದಂತೆ ನಗರದ ಶೇಕಡಾ 30 ರಷ್ಟು ಪ್ರದೇಶಕ್ಕೆ ಕುಡಿಯುವ ನೀರು ಈ ಕೆರೆಯಿಂದಲೇ ಪೂರೈಕೆಯಾಗುತ್ತಿತ್ತು. ಕೆರೆ ವಾಸನೆಯಿಂದ ಕೂಡಿರುವ ಕಾರಣ ಸ್ವಚ್ಛ ಮಾಡಿ ನೀರು ಪೂರೈಸಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಕೆರೆಯಲ್ಲಿ ಸಾವನ್ನಪ್ಪಿರುವ ಮೀನುಗಳು

ಇದನ್ನೂ ಓದಿ

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಸೋಂಕಿತ ವೃದ್ಧ ಸಾವು; ರಸ್ತೆಯಲ್ಲಿ ಬಿದ್ದು ಒದ್ದಾಡಿದರು ಸಹಾಯಕ್ಕೆ ಬಾರದ ಜನ

ಬೆಂಗಳೂರಿನಲ್ಲಿ ಹೋಂ ಐಸೋಲೇಶನ್​ನಲ್ಲಿರುವವರಿಗೆ ಉಸಿರು ಕೊಡುತ್ತಿರುವ ‘ಕೇಶವ‘; ಆಕ್ಸಿಜನ್ ಅಗತ್ಯವಿರುವವರು ಇಲ್ಲಿ ಗಮನಿಸಿ

(Farmer destroyed flower crop due to lack of proper price in kolar)