ಕೋಲಾರ ಜಿಲ್ಲೆಯಲ್ಲಿ ಶುರುವಾಗಿದೆ ನೇರಳೆ ಕ್ರಾಂತಿ, ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ರೈತರ ಮುಖದಲ್ಲಿ ಮಂದಹಾಸ

| Updated By: ಆಯೇಷಾ ಬಾನು

Updated on: Jul 14, 2021 | 7:50 AM

ಕೋಲಾರ ಅಂದ್ರೆ ಹಾಲು.. ರೇಷ್ಮೆ.. ಚಿನ್ನಕ್ಕೆ ಭಾರಿ ಹೆಸರುವಾಸಿ. ಇದೇ ಕೋಲಾರ ಜಿಲ್ಲೆ ತರಕಾರಿ.. ಮಾವು, ಟೊಮ್ಯಾಟೋ ಬೆಳೆಗಳಿಗೂ ಸಖತ್ ಫೇಮಸ್ ಇಂತಾ ಜಿಲ್ಲೆಯಲ್ಲಿ ಈಗ ಹೊಸದೊಂದು ಕ್ರಾಂತಿ ಶುರುವಾಗಿದೆ.

ಕೋಲಾರ ಜಿಲ್ಲೆಯಲ್ಲಿ ಶುರುವಾಗಿದೆ ನೇರಳೆ ಕ್ರಾಂತಿ, ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ರೈತರ ಮುಖದಲ್ಲಿ ಮಂದಹಾಸ
ನೇರಳೆ
Follow us on

ಕೋಲಾರ ಜಿಲ್ಲೆಯಲ್ಲಿ ಬಾರ್ಡರ್ ಕ್ರಾಪ್ ಆಗಿ ಬೆಳೀತಿದ್ದ ನೇರಳೆಯನ್ನ ಈಗ ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಪ್ರಮುಖ ಬೆಳೆಯಾಗಿ ಬೆಳೆಯಲು ಆರಂಭಿಸಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕೋಲಾರ ಜಿಲ್ಲೆಯಲ್ಲಿ ಸುಮಾರು 300 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ನೇರಳೆ ನಾಟಿ ಮಾಡಿದ್ದಾರೆ. ನೇರಳೆ ಬೆಳೆದಿರೋ ರೈತರು ನಿರೀಕ್ಷೆಗೂ ಮೀರಿ ಆದಾಯ ಪಡೆಯೋ ಮೂಲಕ ಪುಲ್ ಖುಷಿಯಾಗಿದ್ದಾರೆ. ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣು ಕೆಜಿಗೆ 200-250 ರೂಪಾಯಿಗೆ ಮಾರಾಟ ಆಗ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇದಕ್ಕೂ ಮೊದಲು ರಸ್ತೆ ಬದಿ, ತೋಟಗಳು-ಹೊಲಗಳ ಬದುಗಳಲ್ಲಿ ಮಾತ್ರ ನೇರಳೆ ಮರಗಳು ಕಂಡು ಬರ್ತಿದ್ವು. ನೇರಳೆ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ, ನೇರಳೆ ಹಣ್ಣಿಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ತೋಟಗಾರಿಕಾ ಇಲಾಖೆ ಕೂಡಾ ನೇರಳೆ ಹಣ್ಣು ಬೆಳೆಯಲು ಪ್ರೋತ್ಸಾಹ ನೀಡ್ತಿದೆ. ಜೊತೆಗೆ ಎಂಜಿಎನ್ಆರ್ಜಿಎ ಅಡಿ, ಹಲವು ಸೌಲಭ್ಯ ಸಿಗ್ತಿದ್ದು, ಮಾವಿಗೆ ಪರ್ಯಾಯ ಬೆಳೆಯಾಗಿ ನೇರಳೆ ಬೆಳೀತಿದ್ದಾರೆ. ಇದು ರೈತರಿಗೆ ಮತ್ತೊಂದು ಆದಾಯದ ಮೂಲವಾಗಿದೆ ಅಂತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು.

ಒಟ್ಟಾರೆ ಹಲವಾರು ದಶಕಗಳಿಂದ ಮಾವು, ಟೊಮ್ಯಾಟೋ, ತರಕಾರಿಗೆ ಖ್ಯಾತಿ ಪಡೆದಿದ್ದ ಕೋಲಾರದಲ್ಲಿ ನೇರಳೆಯ ರಂಗು ಹೆಚ್ಚಾಗ್ತಿದೆ. ರೈತರು ಕೂಡಾ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿ ನೇರಳೆ ಬೆಳೆಯತ್ತ ಹೆಚ್ಚಿನ ಒಲವು ತೋರ್ತಿದ್ದು. ಹಲವು ರೈತರು ನೇರಳೆ ಬೆಳೆಯಲು ಮುಂದಾಗಿರೋದಂತೂ ಸುಳ್ಳಲ್ಲ.

ಇದನ್ನೂ ಓದಿ: Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Jamun Side Effect: ನಿಮಗಿಷ್ಟದ ನೇರಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಎಷ್ಟೆಲ್ಲಾ ಹಾನಿ ಎಂಬುದು ತಿಳಿದಿದೆಯೇ?