ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಅಂತಾನೇ ಗೊತ್ತಿಲ್ಲ: ಬಿ.ಸಿ. ಪಾಟೀಲ್ ವಿರುದ್ಧ ರೈತರು ಕಿಡಿಕಿಡಿ
ರೈತರ ತರಾಟೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೆಲಕಾಲ ತಬ್ಬಿಬ್ಬಾಗಿದ್ದಾರೆ. ನೀವು ಆ ರೀತಿ ಮಾತನಾಡಬಾರದೆಂದು ರೈತರಿಗೆ ಉಪದೇಶ ನೀಡಲು ಮುಂದಾಗಿದ್ದಾರೆ.
ಮೈಸೂರು: ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ನೀಡಿದ ಹೇಳಿಕೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಕ್ ಮೈಂಡೆಡ್ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಬಿ.ಸಿ. ಪಾಟೀಲ್ ಮಾತನಾಡಿದ್ದರು. ಈ ಹೇಳಿಕೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿ.ಸಿ. ಪಾಟೀಲ್‌ಗೆ ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಅಂತಾನೇ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಛೀ, ಥೂ ಎಂದು ಕಿಡಿಕಾರಿರುವ ರೈತರು ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆಂಬುದೇ ಗೊತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ಪರಿಜ್ಞಾನವೂ ಇಲ್ಲ. ಜಿಲ್ಲಾಡಳಿತ ಕೇಳಿದರೆ ಸರ್ಕಾರ ಆದೇಶ ಮಾಡಬೇಕು ಅನ್ನುತ್ತೆ. ಆಡಳಿತ ನಡೆಸಲು ಗೊತ್ತಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ರೈತರು ಗುಡುಗಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಛೀ, ಥೂ ಎಂದು ರೈತರು ಕಿಡಿಕಾರಿದ್ದಾರೆ.
ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕೈಮುಗಿದು ನಿಲ್ಲಬೇಕಾ ಬಿ.ಸಿ. ಪಾ. ಮರುಪ್ರಶ್ನೆ ರೈತರ ತರಾಟೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೆಲಕಾಲ ತಬ್ಬಿಬ್ಬಾಗಿದ್ದಾರೆ. ನೀವು ಆ ರೀತಿ ಮಾತನಾಡಬಾರದೆಂದು ರೈತರಿಗೆ ಉಪದೇಶ ನೀಡಲು ಮುಂದಾಗಿದ್ದಾರೆ. ಅದಕ್ಕೆ, ಮತ್ತಷ್ಟು ಆಕ್ರೋಶಗೊಂಡ ರೈತರು, ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕೈಮುಗಿದು ನಿಲ್ಲಬೇಕಾ, ನೀವೇನು ಆಕಾಶದಿಂದ ಧರೆಗಿಳಿದು ಬಂದಿದ್ದೀರಾ ಎಂದು ಮರುಪ್ರಶ್ನೆ ಹಾಕಿದ್ದಾರೆ.
ರೈತರು ಬೆಳೆದ ಅನ್ನ ತಿಂದು ನೀವು ಮಜಾ ಮಾಡುತ್ತಿದ್ದೀರಿ. ಹಸಿರು ಶಾಲು ಹಾಕ್ಕೊಂಡು ರೈತರ ಮರ್ಯಾದೆ ಕಳೆಯುತ್ತಿದ್ದೀರಿ. ನಿಮ್ಮ ಸರ್ಕಾರ ಮತ್ತು ನಿಮ್ಮ ನಡವಳಿಕೆಗೆ ನಾಚಿಕೆಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ರೈತ ಮುಖಂಡರು ಬೆವರಿಳಿಸಿದ್ದಾರೆ.
ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣವಲ್ಲ; ಅವರ ವೀಕ್ ಮೈಂಡ್ ಕಾರಣ: ಕೃಷಿ ಸಚಿವ ಬಿ.ಸಿ.ಪಾಟೀಲ್
Published On - 3:00 pm, Tue, 19 January 21