ಟ್ರ್ಯಾಕ್ಟರ್ ಮೆರವಣಿಗೆಗೆ ಬೆಂಬಲ ಸೂಚಿಸಿ ಚಾಮರಾಜನಗರದಿಂದ ದೆಹಲಿಗೆ ರೈತರ ರಥಯಾತ್ರೆ
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ಅವರು ಹೊಂಡರಬಾಳು ಬಳಿಯ ಅಮೃತಭೂಮಿಯಲ್ಲಿ ರಥಯಾತ್ರೆಗೆ ಚಾಲನೆ ನೀಡಿದ್ದಾರೆ.

ಪ್ರಾತಿನಿಧಿಕ ಚಿತ್ರ
ಚಾಮರಾಜನಗರ: ಜ.26ರಂದು ದೆಹಲಿಯಲ್ಲಿ ನಡೆಯಲಿರುವ ರೈತರ ಟ್ರ್ಯಾಕ್ಟರ್ ಮೆರವಣಿಗೆಗೆ ಬೆಂಬಲ ಸೂಚಿಸಿ ಅಮೃತಭೂಮಿಯಿಂದ ದೆಹಲಿಗೆ ರಥಯಾತ್ರೆ ತೆರಳಿದೆ. ರೈತ ಚೇತನ ಪ್ರೊಫೆಸರ್ ನಂಜುಂಡಸ್ವಾಮಿ ಸಮಾಧಿಯಿಂದ ಬೆಳಗ್ಗೆ 10 ಗಂಟೆಗೆ ರಥಯಾತ್ರೆ ಆರಂಭವಾಗಿದೆ.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ಅವರು ಹೊಂಡರಬಾಳು ಬಳಿಯ ಅಮೃತಭೂಮಿಯಲ್ಲಿ ರಥಯಾತ್ರೆಗೆ ಚಾಲನೆ ನೀಡಿದ್ದಾರೆ.
ಹಾಸನ, ಮೈಸೂರು ಸೇರಿದಂತೆ ಚಾಮರಾಜನಗರ ಜಿಲ್ಲೆಯ ರೈತರು ಕೂಡ ರಥಯಾತ್ರೆಗೆ ಸಾಥ್ ನೀಡಿದ್ದು ಈ ರಥಯಾತ್ರೆ ಜ.25ರಂದು ದೆಹಲಿ ತಲುಪಲಿದೆ.
ಟ್ರ್ಯಾಕ್ಟರ್ ಪರೇಡ್: ದೆಹಲಿ ಪೊಲೀಸರೇ ನಿರ್ಣಯ ಕೈಗೊಳ್ಳಲಿ ಎಂದ ಸುಪ್ರೀಂ ಕೋರ್ಟ್
Published On - 2:35 pm, Wed, 20 January 21



