AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರ-ಯತ್ನಾಳ್​ ಬಣದ ನಡುವೆ ಮತ್ತೊಂದು ಕದನ ಶುರು: ಮೌನಕ್ಕೆ ಶರಣಾದ ಹೈಕಮಾಂಡ್

ಕರ್ನಾಟಕ ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಬಣ ಫೈಟ್​ ಇದೀಗ ಸಮಾವೇಶ ಯುದ್ಧಕ್ಕೆ ಬಂದು ನಿಂತಿದೆ. ಸಮಾವೇಶ ಮಾಡುವ ಮೂಲಕ ತಮ್ಮ ತಮ್ಮ ಶಕ್ತಿ ಏನು ಎಂದು ತೋರಿಸುವುದಕ್ಕೆ ಯತ್ನಾಳ್, ವಿಜಯೇಂದ್ರ ಬಣ ಸಜ್ಜಾಗಿದೆ. ಯತ್ನಾಳ್​​ ನಡೆಗೆ ಬ್ರೇಕ್ ಹಾಗೂ ಹೈಕಮಾಂಡ್​​ಗೆ ತಮ್ಮ ಚಾರ್ಮ್​ ತೋರಿಸಲು ವಿಜಯೇಂದ್ರ ಬಣ ವೀರಶೈವ ಲಿಂಗಾಯತರನ್ನ ಸೇರಿಸಿ ಸಮಾವೇಶ ಮಾಡಲು ಮುಂದಾಗಿದೆ. ಇದಕ್ಕೆ ಕೌಂಟರ್​ ಎನ್ನುವಂತೆ ಯತ್ನಾಳ್ ಬಣ ಹಿಂದೂ ಸಮಾವೇಶ ಆಯೋಜನೆಗೆ ಸಜ್ಜಾಗಿದೆ.

ವಿಜಯೇಂದ್ರ-ಯತ್ನಾಳ್​ ಬಣದ ನಡುವೆ ಮತ್ತೊಂದು ಕದನ ಶುರು: ಮೌನಕ್ಕೆ ಶರಣಾದ ಹೈಕಮಾಂಡ್
Vijayendra And Yatnal
ರಮೇಶ್ ಬಿ. ಜವಳಗೇರಾ
|

Updated on: Mar 15, 2025 | 2:21 PM

Share

ಬೆಂಗಳೂರು, (ಮಾರ್ಚ್ 15): ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟ ಮತ್ತೊಂದು ಮಗ್ಗಲಿಗೆ ಹೊರಳಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೈ ವಿಜಯೇಂದ್ರ ಬನ ಇಷ್ಟು ದಿನ ತಾವು ತಾವೇ ಶಕ್ತಿ ಪ್ರದರ್ಶನ ಮಾಡಿಕೊಳ್ಳುತ್ತಿದ್ದರು. ಆದ್ರೆ, ಇದೀಗ ಎರಡು ಬಣಗಳು ಜಾತಿ, ಸಮುದಾಯ, ಧರ್ಮ ಹೆಸರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಹೌದು…. ಒಂದೆಡೆ ಮಾರ್ಚ್​ 15ರೊಳಗೆ ರಾಜ್ಯಾದ್ಯಂತ ವೀರಶೈವ ಲಿಂಗಾಯತರನ್ನ ಸೇರಿಸಿ ಸಮಾವೇಶ ಮಾಡುತ್ತೇವೆ ಎಂದು ವಿಜಯೇಂದ್ರ ಟೀಂ ಸಜ್ಜಾಗಿದ್ರೆ, ಮತ್ತೊಂದೆಡೆ ಇದಕ್ಕೆ ಕೌಂಟರ್ ಎನ್ನುವಂತೆ ಯತ್ನಾಳ್ ಟೀಂ ಹಿಂದೂ ಸಮಾವೇಶ ಮಾಡುತ್ತೇವೆಂದು ಸಮರ ಸಾರಿದೆ. ಈ ಮೂಲಕ ಬಿವೈ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಬಣ ಬಡಿದಾಟ ಮತ್ತಷ್ಟು ತಾರರಕ್ಕೇರುವುದು ಕಟ್ಟಿಟ್ಟ ಬುತ್ತಿ.

ಯತ್ನಾಳ್​ ಬಣಕ್ಕೆ ಸಂದೇಶ ರವಾನೆ

ಅಸಲಿಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೆಸರಿನಲ್ಲಿ ಸಮಾವೇಶ ಮಾಡುತ್ತೇವೆ ಎಂದು ಮುಂದಾಗಿದ್ದ ರೇಣುಕಾಚಾರ್ಯಗೆ ವಿಜಯೇಂದ್ರ ಸೂಚನೆ ಕೊಟ್ಟಿದ್ದಾರೆ. ಯಾವ ಸಮಾವೇಶ, ಸಭೆ ಮಾಡುವುದು ಬೇಡ, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ತಂದೆ ಮಗ ಸೂಚನೆ ನೀಡಿದ್ದಾರೆ. ಆದ್ರೆ ಇದೀಗ ಎಂಪಿ.ರೇಣುಕಾಚಾರ್ಯ, ವೀರಶೈವ ಲಿಂಗಾಯತ ಒಗ್ಗಟ್ಟಿಗೆ ಮೇ 15ರೊಳಗೆ ಸಮಾವೇಶ ಮಾಡಿಯೇ ತೀರುತ್ತೇವೆ. ಯಾರಿಗೂ ಹೆದರವುದಿಲ್ಲ, ಬಗ್ಗುವುದಿಲ್ಲ ಎಂದು ಯತ್ನಾಳ್​ ಬಣಕ್ಕೆ ಸಂದೇಶ ರವಾನೆ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಶಿಸ್ತು ಸಮಿತಿ ಖಡಕ್ ಸಂದೇಶ, ಕ್ರಮಕ್ಕೆ ಕೂಡಿಬಂತು ಕಾಲ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶ ನಡೆಯಲಿದ್ದು, ಈ ಮಹಾ ಸಂಗಮದಲ್ಲಿ ಕನಿಷ್ಠ 5 ಲಕ್ಷ ಜನ ಸೇರಲಿದ್ದಾರೆ. ಈ ಸಮಾವೇಶ ನಡೆಸದಂತೆ ಯಡಿಯೂರಪ್ಪ, ವಿಜಯೇಂದ್ರ ಹೇಳಿದ್ದಾರೆ. ಆದರೆ ನಾವು ಮಹಾಸಂಗಮ ಸಮಾವೇಶ ಮಾಡೇ ಮಾಡ್ತೇವೆ. ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿದ್ದೇವೆ. ದಾವಣಗೆರೆಯಲ್ಲಿ ಮೇ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಲಿಂಗಾಯತ ಸಮುದಾಯದ 19 ಜನರು ಸಿಎಂ ಆಗಿದ್ದಾರೆ. ಅದರಲ್ಲಿ ಬಿ.ಎಸ್​​.ಯಡಿಯೂರಪ್ಪಗೆ ಕೆಲವರು ಕಿರುಕುಳ ನೀಡಿದರು. ಯಡಿಯೂರಪ್ಪ ಲಿಂಗಾಯತ ನಾಯಕ ಅಲ್ಲ, ಸಮಾವೇಶದ ಮೂಲಕ ಸ್ಪಷ್ಟ ಸಂದೇಶ ಕೊಡುತ್ತೇವೆ ಅಂದಿರುವ ಯತ್ನಾಳ್​ಗೆ ತಿರುಗೇಟು ಕೊಟ್ಟ ರೇಣುಕಾಚಾರ್ಯ, ದುಷ್ಟ ಶಕ್ತಿಗಳು ನಮ್ಮನ್ನ ಒಡೆಯೋಕೆ ಆಗುವುದಿಲ್ಲ. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಒಗ್ಗೂಡಿಸಿ ದಾವಣಗೆರೆಯಲ್ಲಿ ಮಹಾ ಸಂಗಮ ಮಾಡುತ್ತೇವೆ ಎಂದಿದ್ದಾರೆ.

ವಿಜಯೇಂದ್ರ ಬಣಕ್ಕೆ ಯತ್ನಾಳ್​ ಟೀಂ  ಪ್ರತಿಸವಾಲ್

ಇನ್ನು ವಿಜಯೇಂದ್ರ ಬಣದ ಸಮಾವೇಶದ ಸವಾಲ್​ಗೆ ಯತ್ನಾಳ್​ ಬಣ ಸಹ ಪ್ರತಿಸವಾಲ್ ಹಾಕಿದೆ. 5 ಲಕ್ಷ ಜನರನ್ನ ಸೇರಿಸಿ ಮಹಾ ಸಂಗಮ ಮಾಡುತ್ತೇವೆ ಅಂದಿದ್ದಾರೆ. ನಾವು ಯಡಿಯೂರಪ್ಪಗೆ ಜೈಕಾರ ಹಾಕುವುದಿಲ್ಲ. ದಾವಣಗೆರೆಯಲ್ಲಿ ವಿಜಯೇಂದ್ರ ಬಣದ ಸಮಾವೇಶ ಮುಗಿದ ಒಂದು ವಾರದಲ್ಲೇ ನಾವು ಸಮಾವೇಶ ಮಾಡುತ್ತೇವೆ ಎಂದು ಯತ್ನಾಳ್​ ಸವಾಲ್ ಹಾಕಿದ್ದಾರೆ. ಇದಕ್ಕೆ ಪೂರಕವೆಂಬಂತೆ ಯತ್ನಾಳ್ ಗ್ರೂಪ್ ನ ಶಾಸಕ ಬಿಪಿ ಹರೀಶ್ ಹಿಂದು ಸಮಾವೇಶದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಈ ಮೂಲಕ ಬಿಜೆಪಿಯಲ್ಲಿ‌ ಮತ್ತೆ ಸಂಘರ್ಷ ಶುರುವಾಗಿದ್ದು,  ಹೈಕಮಾಂಡ್​ ಮಾತ್ರ ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ