ಅಪರೂಪ: ಸರ್ಕಾರಿ ಕೆಲಸಕ್ಕಾಗಿ ಲಂಚ ನೀಡಿದ್ದ ಮೂವರ ವಿರುದ್ಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಯ್ತು!

ಕೆಎಸ್ಆರ್ಟಿಸಿ ಅಧ್ಯಕ್ಷ, ಕೆಎಂಎಫ್ ಮ್ಯಾನೇಜರ್ ಹಾಗೂ ಎಇಇ ಹುದ್ದೆಗಾಗಿ ಹಣ ಆರೋಪಿಗಳು ಲಕ್ಷಾಂತರ ರೂ ನೀಡಿದ್ದರು. ವಂಚಕ ಯುವರಾಜ್ ಸ್ವಾಮಿಗೆ ಕಳೆದ ವರ್ಷ ಇವರೆಲ್ಲ ಹಣ ನೀಡಿದ್ದರು. ಕೆಲಸ ಖಾತ್ರಿಯಾಗದಿದ್ದಾಗ ಯುವರಾಜ ಸ್ವಾಮಿ ವಿರುದ್ಧ ಇವರು ದೂರು ನೀಡಿದ್ದರು. ಇದೀಗ ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಕಾಯ್ದೆಯಡಿ ಈ ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಅಪರೂಪ: ಸರ್ಕಾರಿ ಕೆಲಸಕ್ಕಾಗಿ ಲಂಚ ನೀಡಿದ್ದ ಮೂವರ ವಿರುದ್ಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಯ್ತು!
ಎಸಿಬಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 17, 2021 | 12:27 PM

ಬೆಂಗಳೂರು: ವಂಚಕ ಯುವರಾಜ್ ಸ್ವಾಮಿ ಗೊತ್ತಲ್ಲವಾ!? ಸರ್ಕಾರದ ಮಟ್ಟದಲ್ಲಿ ಆಯಕಟ್ಟಿನ ಉದ್ಯೋಗ, ಸ್ಥಾನ-ಮಾನ ಕೊಡಿಸುವುದಾಗಿ ಪೂಸಿ ಹೊಡೆದು ಮಹಾಮಹಿಮರಿಗೆ ವಂಚಿಸಿರುವ ಆಸಾಮಿ. ಲಂಚ ರೂಪದಲ್ಲಿ ಹಣ ಪೆದಿದ್ದಕ್ಕೆ ಕೊನೆಗೆ ಯುವರಾಜ್ ಸ್ವಾಮಿ ಜೈಲುಪಾಲಾಗಿದ್ದು ಸಹ ಗೊತ್ತಿರುವುದೇ! ಆದರೆ ಈ ಮಧ್ಯೆ ಅಪರೂಪದ ಬೆಳವಣಿಗೆಯೊಂದು ನಡೆದಿದ್ದು ಸರ್ಕಾರಿ ಕೆಲಸಕ್ಕಾಗಿ ಲಂಚ ನೀಡಿದ್ದ ಮೂವರ ವಿರುದ್ಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ! ಲಕ್ಷಾಂತರ ರೂಪಾಯಿ ಲಂಚ ನೀಡಿ ಕೆಲಸಗಿಟ್ಟಿಸಿಕೊಳ್ಳಲು ಯತ್ನಿಸಿದ್ದ ಮೂವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಆರ್. ಐಯ್ಯರ್ ದೂರಿನ ಮೇರೆಗೆ ಈ ಎಫ್ಐಆರ್ ದಾಖಲಾಗಿದೆ.

ಕೆ.ಪಿ.ಸುಧೀಂದ್ರ ರೆಡ್ಡಿ, ಜಿ ನರಸಿಂಹಯ್ಯ ಹಾಗೂ ಗೋವಿಂದಯ್ಯ ಎಂಬುವವರ ವಿರುದ್ಧ ಪ್ರತ್ಯೇಕ ಮೂರು ಎಫ್ಐಆರ್ ದಾಖಲಾಗಿವೆ. ಕೆಎಸ್ಆರ್ಟಿಸಿ ಅಧ್ಯಕ್ಷ, ಕೆಎಂಎಫ್ ಮ್ಯಾನೇಜರ್ ಹಾಗೂ ಎಇಇ ಹುದ್ದೆಗಾಗಿ ಹಣ ಆರೋಪಿಗಳು ಲಕ್ಷಾಂತರ ರೂ ನೀಡಿದ್ದರು. ವಂಚಕ ಯುವರಾಜ್ ಸ್ವಾಮಿಗೆ ಕಳೆದ ವರ್ಷ ಇವರೆಲ್ಲ ಹಣ ನೀಡಿದ್ದರು. ಕೆಲಸ ಖಾತ್ರಿಯಾಗದಿದ್ದಾಗ ಯುವರಾಜ ಸ್ವಾಮಿ ವಿರುದ್ಧ ಇವರು ದೂರು ನೀಡಿದ್ದರು. ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಕಾಯ್ದೆಯಡಿ (Anti Corruption Bureau) ಈ ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Big News: ಯುವರಾಜ್ ಸ್ವಾಮಿ ಜಾಮೀನು ಅರ್ಜಿ ವಜಾ

ಇದನ್ನೂ ಓದಿ: ವಂಚಕ ಯುವರಾಜ್ ವಿರುದ್ಧ ಚಾರ್ಜ್‌ಶೀಟ್; ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಲೆಟರ್​​ಹೆಡ್​​ನಲ್ಲಿ ಬರೆದಿದ್ದ ಪತ್ರ ಸಿಸಿಬಿ ವಶಕ್ಕೆ

(fir registered in acb against 3 persons who gave bribe to yuvraj swamy to get government employment)

Published On - 12:19 pm, Wed, 17 November 21