AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಯುವರಾಜ್ ಸ್ವಾಮಿ ಜಾಮೀನು ಅರ್ಜಿ ವಜಾ

ಯುವರಾಜ್ ಸ್ವಾಮಿ ಜಾಮೀನು ಅರ್ಜಿಯನ್ನು ಬೆಂಗಳೂರಿನ 67 ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ.

Big News: ಯುವರಾಜ್ ಸ್ವಾಮಿ ಜಾಮೀನು ಅರ್ಜಿ ವಜಾ
ಯುವರಾಜ್ ಸ್ವಾಮಿ
TV9 Web
| Edited By: |

Updated on:Aug 30, 2021 | 6:31 PM

Share

ಬೆಂಗಳೂರು: ಹಲವು ಗಣ್ಯರಿಗೆ ವಂಚಿಸಿದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್ ಸ್ವಾಮಿ ಜಾಮೀನು ಅರ್ಜಿಯನ್ನು ಬೆಂಗಳೂರಿನ 67 ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ.ಅನಾರೋಗ್ಯವೆಂದು ಜಾಮೀನು ಆರೋಪಿ ಯುವರಾಜ್‌ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಆದರೆ, ಆರೋಪಿಗೆ ಜಾಮೀನು ನೀಡಿದೆಯೂ ಸರ್ಕಾರಿ ಆಸ್ಪತ್ರೆ, ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಬಹುದು. ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು. ವಂಚನೆಯಿಂದ ಖರೀದಿಸಿದ್ದ ಆಸ್ತಿ ಪರಭಾರೆ ಮಾಡಬಹುದು ಎಂಬ ಪ್ರತಿವಾದಿಗಳ ವಾದ ಮನ್ನಿಸಿದ ಕೋರ್ಟ್ ಆರೋಪಿ ಯುವರಾಜ್ ಸ್ವಾಮಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಈಹಿಂದೆ ಜೈಲು ಆಸ್ಪತ್ರೆಯಲ್ಲಿಯೇ ಪರೀಕ್ಷೆ ಮಾಡಿಸಿ ರಿಪೋರ್ಟ್ ಪಡೆದಿದ್ದ ಯುವರಾಜ್ ಸ್ವಾಮಿ, ತನಗೆ ಹಲವು ಕಾಯಿಲೆಗಳಿವೆ ಎಂದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಾಮೀನು ಅರ್ಜಿಯಲ್ಲಿ ಕಳೆದ 5 ವರ್ಷಗಳಿಂದ ತಾನು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಉಲ್ಲೇಖಿಸಲಾಗಿತ್ತು.

14 ಕಾಯಿಲೆಗಳು ಖುದ್ದು ಯುವರಾಜ್ ಸ್ವಾಮಿ ತನಗೆ ಇರುವ ಕಾಯಿಲೆಗಳ ಬಗ್ಗೆ ಹೇಳಿಕೊಂಡಿದ್ದ. ಕಳೆದ 7- 8 ವರ್ಷಗಳಿಂದ ಅಧಿಕ ರಕ್ತದೊತ್ತಡ, 6 ವರ್ಷಗಳಿಂದ ಮಧುಮೇಹ, ಲೀವರ್ ಸಮಸ್ಯೆ, ಕುತ್ತಿಗೆಯಿಂದ ಬೆನ್ನಿನ ಎಲುಬು ಅತಿಯಾದ ನೋವು, ಗುದದ್ವಾರದಲ್ಲಿ ಬಿರುಕು ಕಾಯಿಲೆ, ಗ್ಯಾಸ್ಟ್ರಿಕ್ ಸಮಸ್ಯೆ, ಐರನ್ ಮತ್ತು ವಿಟಮಿನ್ ಕೊರತೆ, ಉರಿಯೂತ, ಸಣ್ಣ ಪ್ರಮಾಣದ ಖಿನ್ನತೆ, ಭುಜದ ಹಳೆ ಮೂಳೆ ಮುರಿತದ ನೋವು, ಕುತ್ತಿಗೆ ನೋವು, ವೈರಲ್ ಜ್ವರ ಸೇರಿ ಒಟ್ಟು 14 ಕಾಯಿಲೆಗಳು ಇರುವುದಾಗಿ ತಿಳಿಸಿದ್ದ.

ಹದಿನಾಲ್ಕು ಆರೊಗ್ಯ ಸಮಸ್ಯೆಗಳ ಪಟ್ಟಿ ಸಮೇತ ಜಾಮೀನು ಅರ್ಜಿ ಸಲ್ಲಿಸಿರುವ ಯುವರಾಜ್ ಸ್ವಾಮಿ, ಈ ಖಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 90 ದಿನ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದ. ಆದರೆ ಈ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಇದನ್ನೂ ಓದಿ:

ಶಾಸಕ ಬೆಲ್ಲದ್​ಗೆ ಜೈಲಿಂದ ಯುವರಾಜ್ ಸ್ವಾಮಿ ಕರೆ ವಿಚಾರ: ಶುರುವಾಯ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪೀಕಲಾಟ

ಜೈಲಿಂದ ಹೊರಬಂದು ತಲೆಮರೆಸಿಕೊಂಡಿದ್ದ ಯುವರಾಜ್! ಕೆದಕಿದಷ್ಟೂ ಬಯಲಾಗ್ತಿದೆ ವಂಚಕ ಯುವರಾಜ್ ಸ್ವಾಮಿಯ ಕಹಾನಿಗಳು

(Bengaluru Court dismissed Yuvraj Swamy bail plea)

Published On - 6:17 pm, Mon, 30 August 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?