AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್ ಮೂಲಕ ಔಷಧಿ ಪೂರೈಕೆಗೆ ಚಿಕ್ಕಬಳ್ಳಾಪುರದಲ್ಲಿ ಸಿದ್ಧತೆ; ವೈದ್ಯಕೀಯ ಸುಧಾರಣೆಗೆ ದೇಶದಲ್ಲೇ ಮೊದಲ ಪ್ರಯೋಗ

ಮಹಾನಗರಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಂಡು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಕಷ್ಟವಿದೆ. ಇದರಿಂದ ಕೆಲವು ಫಾಸ್ಟ್ ಫುಡ್ ವಿತರಕ ಕಂಪೆನಿಗಳು ದೇಶದ ವಿವಿದೆಡೆ ಹಗುರವಾದ ಫುಡ್ ಡೆಲಿವರಿ ಮಾಡಲು ಡ್ರೋನ್​ಗಳನ್ನು ಬಳಸಿ ಪ್ರಯೋಗ ನಡೆಸಿವೆ.

ಡ್ರೋನ್ ಮೂಲಕ ಔಷಧಿ ಪೂರೈಕೆಗೆ ಚಿಕ್ಕಬಳ್ಳಾಪುರದಲ್ಲಿ ಸಿದ್ಧತೆ; ವೈದ್ಯಕೀಯ ಸುಧಾರಣೆಗೆ ದೇಶದಲ್ಲೇ ಮೊದಲ ಪ್ರಯೋಗ
ಪ್ರಾತಿನಿಧಿಕ ಚಿತ್ರ
TV9 Web
| Updated By: preethi shettigar|

Updated on: Jun 18, 2021 | 8:39 AM

Share

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇದೀಗಾ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಪ್ರಾರಂಭದಲ್ಲಿ ಕಾಡುತ್ತಿದ್ದ ವೈದ್ಯಕೀಯ ಸಮಸ್ಯೆಗಳು ಕೂಡ ಈಗ ಕಡಿಮೆಯಾಗಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು, ಒಂದೆಡೆ ಅತ್ಯಾಧುನಿಕ ಆಂಬುಲೆನ್ಸ್​ಗಳ ಕೊರತೆಯಾದರೆ, ಮತ್ತೊಂದೆಡೆ, ಸಂಚಾರ ದಟ್ಟಣೆ. ಇನ್ನೊಂದೆಡೆ ಎರಡೂ ಸಮಸ್ಯೆಗಳು ಇಲ್ಲವಾದರೂ ಸಕಾಲಕ್ಕೆ ಔಷಧಿ ಹಾಗೂ ಚಿಕಿತ್ಸೆ ಸಿಗದೆ ಜನ ಇನ್ನೂ ಪರದಾಡುತ್ತಿದ್ದಾರೆ. ಇದರಿಂದ ವೈದ್ಯಕೀಯ ರಂಗದಲ್ಲಿ ಮತ್ತಷ್ಟು ಸುಧಾರಣೆ ತರಲು ಮುಂದಾಗಿರುವ ಖಾಸಗಿ ಸಂಸ್ಥೆಯೊಂದು ಮೆಡ್ ಕಾಫ್ಟರ್ ಎನ್ನುವ ಡ್ರೋನ್​ಗಳ ಮೂಲಕ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಔಷಧಿ ಸಾಗಾಟಕ್ಕೆ ಮುಂದಾಗಿದೆ. ಇದರ ಮೊದಲ ಹೆಜ್ಜೆಯಾಗಿ ಪ್ರಯೋಗಾರ್ಥ ಹಾರಾಟ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಬೆಂಗಳೂರು ಮೂಲದ ಥ್ರೋಟಲ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೇಡ್ ಎನ್ನುವ ಸಂಸ್ಥೆಯೊಂದು, ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ, ಈ ರೀತಿಯ ಪ್ರಯೋಗವೊಂದನ್ನು ನಡೆಸಲು ಮುಂದಾಗಿರುವ ಸಂಸ್ಥೆ, ಡಿಜಿಸಿಎ ಯಿಂದ ಅನುಮತಿ ಪಡೆದಿದೆ. ಇದರಿಂದ ಪರಿಕ್ಷಾರ್ಥವಾಗಿ ತಮ್ಮಲ್ಲಿರುವ ಡ್ರೋನ್​ಗಳನ್ನು 45 ದಿನಗಳ ಕಾಲದವರೆಗೆ ನೂರು ತಾಸುಗಳ ಹಾರಾಟ ನಡೆಸಿ ಡಿಜಿಸಿಎಗೆ ವರದಿ ನೀಡಬೇಕಿದೆ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ನಗರದಲ್ಲಿ, ಅನುಮತಿ ಪಡೆದಿದ್ದು, ನಾಳೆಯಿಂದ ಜೂನ್ 21 ರ ವರೆಗೆ ಹಾರಾಟದ ಬಗ್ಗೆ ಸಿದ್ಧತೆ ನಡೆಸಲಿದ್ದು, ಜೂನ್ 21 ರಿಂದ ಅಧೀಕೃತವಾಗಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಿದೆ.

ಡ್ರೋನ್​ಗಳ ಬಳಕೆ ಮತ್ತು ಸಾಮರ್ಥ್ಯ  ಥ್ರೋಟಲ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೇಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಬಿವಿಎಲ್​ಓಎಸ್​ಮೆಡ್ ಕಾಫ್ಟರ್, ಎನ್ನುವ ಎರಡು ಡ್ರೋನ್​ಗಳನ್ನು ಬಳಸಲಾಗುತ್ತಿದೆ. ಮೆಡ್ ಕಾಫ್ಟರ್​ನ ಒಂದು ಡ್ರೋನ್​ ಒಂದು ಕೆಜಿ ಔಷಧಿಯನ್ನು ಹೊತ್ತು 15 ಕಿಲೋಮೀಟರ್ ವರೆಗೆ ಹಾರಾಟ ನಡೆಸಬಹುದು. ಇನ್ನೋಂದು ಡ್ರೋನ್ ಎರಡು ಕೆಜಿ ಔಷಧಿಯನ್ನು ಹೊತ್ತು 12 ಕಿಲೋಮೀಟರ್ ವರೆಗೂ ಹಾರಾಟ ನಡೆಸಬಹುದು. ಎರಡೂ ಡ್ರೋನ್​ಗಳು ಬ್ಯಾಟರಿ ಚಾಲಿತ ಹಾಗೂ ಮಾನವರಹಿತ ಆಗಿರುತ್ತವೆ. ನಿಗಧಿತ ಸ್ಥಳಕ್ಕೆ ನಿಖರ ಸಮಯದಲ್ಲಿ ಹಾರಾಟ ನಡೆಸಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಔಷಧಿ ಸಾಗಿಸಬಲ್ಲವುಗಳಾಗಿದೆ.

ಔಷಧಿ ಪೂರೈಸಲು ಇದೇ ಮೊದಲ ಬಾರಿಗೆ ಡ್ರೋನ್​ಗಳ ಬಳಕೆ ಮಹಾನಗರಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಂಡು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಕಷ್ಟವಿದೆ. ಇದರಿಂದ ಕೆಲವು ಫಾಸ್ಟ್ ಫುಡ್ ವಿತರಕ ಕಂಪೆನಿಗಳು ದೇಶದ ವಿವಿದೆಡೆ ಹಗುರವಾದ ಫುಡ್ ಡೆಲಿವರಿ ಮಾಡಲು ಡ್ರೋನ್​ಗಳನ್ನು ಬಳಸಿ ಪ್ರಯೋಗ ನಡೆಸಿವೆ. ಆದರೆ ಡ್ರೋನ್​ಗಳ ಮೂಲಕ ಔಷಧಿ ಪೂರೈಸಲು ಇದೇ ಮೊದಲ ಬಾರಿಗೆ ಥ್ರೋಟಲ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೇಡ್ ಮುಂದಾಗಿದೆ. ಇದರ ಜತೆ ಇನ್ನೂ ಎರಡು ಕಂಪೆನಿಗಳಿಗೆ ಡಿಜಿಸಿಎ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಥ್ರೋಟಲ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೇಡ್ ಎಲ್ಲರಿಗಿಂತ ಮುಂಚೆ ಪ್ರಯೋಗಾರ್ಥ ನಡೆಸಲು ಸಿದ್ಧತೆ ನಡೆಸಿದೆ.

ಪ್ರಯೋಗಾರ್ಥ ಸಮಯದಲ್ಲೇ ನಾರಾಯಣ ಹೃದಯಾಲಯ ಕೈಜೋಡಿಸಿದೆ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳು ತಮ್ಮ ಅಧೀನದ ಶಾಖೆಗಳಿಗೆ ತುರ್ತು ಔಷಧಿ ಪೂರೈಕೆಗೆ ಹೆಣಗಾಡುತ್ತಿವೆ. ಇದರಿಂದ ಪ್ರಯೋಗಾರ್ಥ ಸಮಯದಲ್ಲೇ ಬೆಂಗಳೂರಿನ ನಾರಾಯಣ ಹೃದಯಾಲದ ಖ್ಯಾತ ವೈದ್ಯ ಡಾ.ದೇವಿಶೆಟ್ಟಿ, ಪ್ರಯೋಗಕ್ಕೆ ಬೆಂಬಲ ಸೂಚಿಸಿದ್ದು, ಡಿಜಿಸಿಎ ಅನುಮತಿ ನೀಡಿದರೆ ಡ್ರೋನ್​ಗಳನ್ನು ಬಳಸಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ.

ಪರೀಕ್ಷಾರ್ಥ ಡ್ರೋನ್​ ಬಳಸಿ ಡಿಜಿಸಿಎಗೆ ವರದಿ ತಮ್ಮ ಸಂಸ್ಥೆಯಲ್ಲಿ ಪ್ರಸ್ತುತ ಬಿವಿಎಲ್​ಓಎಸ್​ ಮೆಡ್ ಕಾಫ್ಟರ್ ಎನ್ನುವ ಎರಡು ಡ್ರೋನ್​ಗಳನ್ನು ಬಳಸಲಾಗುತ್ತಿದೆ. ಮೆಡ್ ಕಾಫ್ಟರ್​ನ ಒಂದು ಡ್ರೋನ್ ಒಂದು ಕೆಜಿ ಔಷಧಿಯನ್ನು ಹೊತ್ತು 15 ಕಿಲೋಮೀಟರ್ ವರೆಗೆ ಹಾರಾಟ ನಡೆಸಬಹುದು, ಇನ್ನೋಂದು ಡ್ರೋನ್ ಎರಡು ಕೆಜಿ ಔಷಧಿಯನ್ನು ಹೊತ್ತು 12 ಕಿಲೋಮೀಟರ್ ವರೆಗೂ ಹಾರಾಟ ನಡೆಸಬಹುದು. ಪರೀಕ್ಷಾರ್ಥ ಹಾರಾಟದ ನಂತರ ಡಿಜಿಸಿಎಯ ಅನುಮತಿಗಾಗಿ ವರದಿಯನ್ನು ಸಲ್ಲಿಸಲಾಗುವುದು ಎಂದು ಥ್ರೋಟಲ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೇಡ್​ನ ಡೈರೆಕ್ಟರ್ ಹಾಗೂ ಸಿಎಫ್ಓ ಗಿರೀಶ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:

ರಕ್ಷಣಾ ಪಡೆಗಳ 2 ಡ್ರೋನ್​ ಹೊಡೆದುರುಳಿಸಿದ್ದಾಗಿ ಆಡಿಯೋ  ಬಿಡುಗಡೆ ಮಾಡಿದ ನಕ್ಸಲರು; ಅವರಲ್ಲಿ ಭಯ ಶುರುವಾಗಿದೆ ಎಂದ ಐಜಿ

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಬಳಕೆ; ಡ್ರೋನ್ ಕ್ಯಾಮರಾ ನೀಡಲಿದೆ ಅಪಾಯದ ಮುನ್ಸೂಚನೆ