ರಕ್ಷಣಾ ಪಡೆಗಳ 2 ಡ್ರೋನ್​ ಹೊಡೆದುರುಳಿಸಿದ್ದಾಗಿ ಆಡಿಯೋ  ಬಿಡುಗಡೆ ಮಾಡಿದ ನಕ್ಸಲರು; ಅವರಲ್ಲಿ ಭಯ ಶುರುವಾಗಿದೆ ಎಂದ ಐಜಿ

ರಕ್ಷಣಾ ಪಡೆಗಳ ಡ್ರೋಣ್​ ವಿರುದ್ಧ ಏಪ್ರಿಲ್​ 19ರಂದು ನಾವು ಏರ್​​ಸ್ಟ್ರೈಕ್​ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ನಕ್ಸಲರು, ಈ ಡ್ರೋಣ್​ಗಳನ್ನು ನಮ್ಮ ಮೇಲೆ ಅಟ್ಯಾಕ್​ ಮಾಡಲೆಂದೇ ಸಿದ್ಧಪಡಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.

ರಕ್ಷಣಾ ಪಡೆಗಳ 2 ಡ್ರೋನ್​ ಹೊಡೆದುರುಳಿಸಿದ್ದಾಗಿ ಆಡಿಯೋ  ಬಿಡುಗಡೆ ಮಾಡಿದ ನಕ್ಸಲರು; ಅವರಲ್ಲಿ ಭಯ ಶುರುವಾಗಿದೆ ಎಂದ ಐಜಿ
ನಕ್ಸಲರು ಬಿಡುಗಡೆ ಮಾಡಿದ ಡ್ರೋನ್​ ಫೋಟೋ (ಕೃಪೆ-ಇಂಡಿಯಾ ಟುಡೆ)
Follow us
Lakshmi Hegde
|

Updated on:Apr 22, 2021 | 4:52 PM

ಚತ್ತೀಸ್​ಗಡ್​: ಇತ್ತೀಚೆಗಷ್ಟೇ 22 ಯೋಧರನ್ನು ಹತ್ಯೆ ಮಾಡಿದ್ದ ಚತ್ತೀಸ್​ಗಡ್​ ನಕ್ಸಲರು ಈಗೊಂದು ಹೇಳಿಕೆ ಬಿಡುಗಡೆ ಮಾಡಿದ್ದು, ತಾವು ರಕ್ಷಣಾ ಪಡೆಗೆ ಸೇರಿದ ಎರಡು ಡ್ರೋನ್​​ಗಳನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಆ ಫೋಟೋವನ್ನೂ ಬಿಡುಗಡೆ ಮಾಡಿದ್ದಾರೆ. ತಾವು ಹೊಡೆದುರುಳಿಸಿದ್ದೇವೆ ಎಂದು ಹೇಳಿರುವ ಕ್ವಾಡ್​ಕಾಪ್ಟರ್​​ನ ಫೋಟೋದೊಂದಿಗೆ ಆಡಿಯೋ ಸಂದೇಶವನ್ನೊಂದನ್ನು ಬಿಡುಗಡೆ ಮಾಡಿರುವ ನಕ್ಸಲರ ದಂಡಕಾರಣ್ಯ ವಿಶೇಷ ವಲಯ ಸಮಿತಿ ಪೊಲೀಸರಿಗೆ, ರಕ್ಷಣಾ ಸಿಬ್ಬಂದಿಗೆ ಸವಾಲನ್ನೂ ಹಾಕಿದೆ.

ಬಾಂಬ್​ ಸ್ಫೋಟಿಸಿ ಡ್ರೋಣ್​​ನ್ನು ಕೆಡವಲಾಗಿದೆ. ಈ ಸ್ಥಳಕ್ಕೆ ಬಸ್ತಾರಾದ ಐಜಿ, ಪೊಲೀಸ್ ಸಿಬ್ಬಂದಿಯನ್ನು ಕಳಿಸಿ ಪರಿಶೀಲನೆ ಮಾಡಬೇಕು. ಅದು ರಕ್ಷಣಾ ಪಡೆಯ ಡ್ರೋನ್​​ ಹೌದೋ, ಅಲ್ಲವೋ ಎಂಬುದನ್ನು ದೃಢೀಕರಿಸಬೇಕು ಎಂದು ನಕ್ಸಲ್​ ಮುಖಂಡರು ಹೇಳಿದ್ದು ಆಡಿಯೋದಲ್ಲಿ ಕೇಳುತ್ತದೆ. ಇನ್ನು, ಕೇಂದ್ರೀಯ ಮತ್ತು ರಾಜ್ಯ ರಕ್ಷಣಾ ಪಡೆಗಳು ಜಂಟಿಯಾಗಿ ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಈ ಪ್ರಯತ್ನದ ಭಾಗವಾಗಿ ಬಿಜಾಪುರ ಜಿಲ್ಲೆಯ ಎರಡು ಹಳ್ಳಿಗಳ ಸಮೀಪ ಬಾಂಬ್​ ಹಾಕಿವೆ ಎಂದು ನಕ್ಸಲರು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಪೊಲೀಸ್ ಇಲಾಖೆ ಅಲ್ಲಗಳೆದಿದೆ.

ರಕ್ಷಣಾ ಪಡೆಗಳ ಡ್ರೋಣ್​ ವಿರುದ್ಧ ಏಪ್ರಿಲ್​ 19ರಂದು ನಾವು ಏರ್​​ಸ್ಟ್ರೈಕ್​ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ನಕ್ಸಲರು, ಈ ಡ್ರೋಣ್​ಗಳನ್ನು ನಮ್ಮ ಮೇಲೆ ಅಟ್ಯಾಕ್​ ಮಾಡಲೆಂದೇ ಸಿದ್ಧಪಡಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದರುವ ಬಸ್ತಾರ್​ ವಲಯದ ಐಜಿ ಸುಂದರ್ ರಾಜ್​ ಪಿ, ನಕ್ಸಲರು ಡ್ರೋಣ್​​ಗಳನ್ನು ಹೊಡೆದಿದ್ದೇವೆ ಎಂದು ಹೇಳುತ್ತಿರುವುದು ಸುಳ್ಳು. ಅವರಲ್ಲಿ ಭಯ ಕಾಡುತ್ತಿದೆ. ಹಾಗಾಗಿ ಇಂಥ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದಿದ್ದಾರೆ.

ನಕ್ಸಲಪೀಡಿತ ಚತ್ತೀಸ್​ಗಡ್​ದಲ್ಲಿ ಇದುವರೆಗೆ ನಕ್ಸಲರ ದಾಳಿಗೆ ಅದೆಷ್ಟೋ ಮುಗ್ಧ ಜೀವಗಳು ಬಲಿಯಾಗಿವೆ. ಪೊಲೀಸ್​ ಸಿಬ್ಬಂದಿ, ಯೋಧರ ಪ್ರಾಣ ಹೋಗಿದೆ. ಇತ್ತೀಚೆಗಷ್ಟೇ ಸುಕ್ಮಾದಲ್ಲಿ ನಡೆದ ಎನ್​​ಕೌಂಟರ್​​ನಲ್ಲಿ 22ಕ್ಕೂ ಹೆಚ್ಚು ಸಿಆರ್​ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: ವೇಗವಾಗಿ ಆಕ್ಸಿಜನ್ ಪೂರೈಕೆ ಮಾಡುವಂತೆ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದ ಪ್ರಧಾನಿ ಮೋದಿ

ಈ ಮೋದಿ ಸರ್ಕಾರ ಸರಿ ಇಲ್ಲ, ಕಾಮನ್​ ಮ್ಯಾನ್ ಜೀವನ ನೋಡಿ ಅಂತಾ ಸರ್ಕಾರದ ವಿರುದ್ಧ ಜನ ಕಿಡಿ

Naxals in Chhattisgarh claim that they shoot down police drones

Published On - 4:52 pm, Thu, 22 April 21

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ