AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ ಮಂಜುನಾಥ್​ ರಾಜಕೀಯ ಪ್ರವೇಶ ಹಿಂದಿನ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಡಾ.ಸಿ.ಎನ್ ಮಂಜುನಾಥ್​ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿ ಅಖಾಡಕ್ಕಿಳಿಯುತ್ತಿದ್ದಾರೆ. ಆ ಮೂಲಕ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕರು ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಸದ್ಯ ಡಾ.ಸಿ.ಎನ್ ಮಂಜುನಾಥ್​ರ ಸ್ಪರ್ಧೆ ವಿಚಾರವಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮಾತನಾಡಿದ್ದು, ಬಿಜೆಪಿಯಿಂದ ಸ್ಪರ್ಧಿಸಲು​​ ಮಂಜುನಾಥ್​ಗೆ ಒತ್ತಡ ಹಾಕಿದ್ದು ನಾನೇ ಎಂದಿದ್ದಾರೆ.

ಡಾ ಮಂಜುನಾಥ್​ ರಾಜಕೀಯ ಪ್ರವೇಶ ಹಿಂದಿನ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
ಡಾ.ಸಿ.ಎನ್.ಮಂಜುನಾಥ, ಕುಮಾರಸ್ವಾಮಿ
Follow us
Sunil MH
| Updated By: ಗಂಗಾಧರ​ ಬ. ಸಾಬೋಜಿ

Updated on: Mar 14, 2024 | 4:27 PM

ಬೆಂಗಳೂರು, ಮಾರ್ಚ್​​ 14: ಬಿಜೆಪಿಯಿಂದ ಸ್ಪರ್ಧಿಸಲು ಡಾ. ಸಿ.ಎನ್​​ ಮಂಜುನಾಥ್​ (Dr.C.N Manjunath) ಗೆ ಒತ್ತಡ ಹಾಕಿದ್ದು ನಾನೇ ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎರಡು ಗಂಟೆ ಕಾಲ ತಂದೆಯವರ ಮೇಲೆ ಒತ್ತಡ ಹಾಕಿದ್ದು ನಾನೇ. ಇವತ್ತು ಒಬ್ಬ ವ್ಯಕ್ತಿ ಸಿ.ಎನ್​.ಮಂಜುನಾಥ್ ಬಗ್ಗೆ ಮಾತನಾಡಿದ್ದಾರೆ. ಮಂಜುನಾಥ್​ ಸಾಧನೆಯ ಮುಂದೆ ಆತ ಉಂಗುಷ್ಟಕ್ಕೂ ಸಮನಲ್ಲ. ಅವರು ಗೆದ್ದಿರಬಹುದು, ಆದರೆ ಅವರ ಸಾಧನೆ ಏನು ಎಂದಿದ್ದಾರೆ. ಮಂಜುನಾಥ್ ಬಗ್ಗೆ ನೀಡಿರುವ ಹೇಳಿಕೆ ನನಗೆ ನೋವುಂಟು ಮಾಡಿದೆ. ನಮ್ಮ ಬಗ್ಗೆ ಮಾತನಾಡಿ ರಾಜಕೀಯವಾಗಿ ಎದುರಿಸುತ್ತೇವೆ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ ಎಂದು ಹೇಳಿದ್ದಾರೆ.

ನಾವು ರಾಜಕೀಯದಲ್ಲಿದ್ದೇವೆ. ನಮ್ಮ ಬಗ್ಗೆ ಏನಾದರೂ ಮಾತಾಡಿ. ಎಷ್ಟು ಮನೆಗಳನ್ನ ಹಾಳು ಮಾಡಿದ್ದೀರಾ ನೋಡಿದ್ದೀನಿ. ನಮ್ಮ ಪಕ್ಷ ಹಿನ್ನಡೆ ಆಗಲಿಕ್ಕೆ ಬಿಡಲ್ಲ. ನಾನು ದೂರದೃಷ್ಟಿ ಇಟ್ಟುಕೊಂಡಿದ್ದೇನೆ. 18 ಲಕ್ಷ ನಗರ ಭಾಗದಲ್ಲಿ ಮತದಾರರು ಇದ್ದಾರೆ. ಗ್ರಾಮೀಣ ಭಾಗದಲ್ಲಿ 11 ಲಕ್ಷ ಮತದಾರರಿದ್ದಾರೆ, ಈ ಭಾಗದಲ್ಲಿರುವ ಮತದಾರರು ಉತ್ತರ ಭಾರತರಿಂದ ಬಂದಿದ್ದಾರೆ. ಅವರಿಗೆ ನಮ್ಮ ಚಿನ್ಹೆ ಗೊತ್ತಿರಲ್ಲ. ಅದೆಲ್ಲ ಲೆಕ್ಕಾಚಾರ ಹಾಕಿ, ನಾನು ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಅಳಿಯ ಜಾಣ ಆದರೇನು, ನಿಮ್ಮಂತೆ ಇನ್ನೊಬ್ಬರ ಜೀವನಕ್ಕೆ ಎರವಾಗೋದು ತಪ್ಪಲ್ಲವೇ: ಡಿಕೆ ಸುರೇಶ್​ಗೆ ಜೆಡಿಎಸ್ ಪ್ರಶ್ನೆ

ಉತ್ತಮವಾದ ವ್ಯಕ್ತಿ ಸಮಾಜಕ್ಕೆ ನೀಡಬೇಕು ಅದಕ್ಕೆ ತೀರ್ಮಾನ ಮಾಡಿದ್ದು. ಚುನಾವಣೆ ಎದುರಿಸಲು ಸಿದ್ಧವಾಗಿದ್ದೇವೆ. ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಡಿಕೆ ಸುರೇಶ್ ಹೆಸರು ಹೇಳದೆ ಏಕವಚನಲ್ಲಿ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ. ಹೇಳಿ ಕೇಳಿ ಡಿಕೆ ಬ್ರದರ್ಸ್ ಮತಕೋಟೆ. ಇಲ್ಲಿ ಕನಕಪು ಬ್ರದರ್ಸ್ ಹವಾ ಜೋರಾಗೇ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲೇ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ನೆಲಕಚ್ಚಿದರೂ ತಮ್ಮ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಮಾತ್ರ ಡಿ.ಕೆ.ಸುರೇಶ್ ಗೆದ್ದು ಬಂದಿದ್ದಾರೆ.

ಇದನ್ನೂ ಓದಿ: ರಂಗೇರಿದ ಬೆಂಗಳೂರು ಗ್ರಾಮಾಂತರ ಚುನಾವಣೆ: ಜೆಡಿಎಸ್​ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ನೀಡಿದ ಡಿಕೆ ಸುರೇಶ್

ಇದೀಗ ಡಿಕೆ ಸಹೋದರರ ಹಿಡಿತದಲ್ಲಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕೋಟೆ ಕಬಳಿಸಲು ಬಿಜೆಪಿ, ಜೆಡಿಎಸ್‌ ಮೈತ್ರಿ ದೊಡ್ಡ ದಾಳ ಉರುಳಿಸಲು ಹೊರಟಿದೆ. ಡಿಕೆ ಬ್ರದರ್ಸ್​​ಗೆ ಟಕ್ಕರ್ ಕೊಡಲು ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಮತ್ತು ಹೆಚ್.ಡಿ.ದೇವೇಗೌಡ್ರ ಅಳಿಯ ಡಾ.ಮಂಜುನಾಥ್‌ರನ್ನೇ ಕಣಕ್ಕಿಳಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ