ಜೈಲಲ್ಲಿ ಉಪ್ಪಿಟ್ಟು ಸೇವನೆ ಬಳಿಕ.. ನ್ಯೂಸ್ ಪೇಪರ್ಗೆ ಬೇಡಿಕೆ ಇಟ್ಟ ರೋಷನ್ ಬೇಗ್
ಬೆಂಗಳೂರು: ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದು ಮುಂಜಾನೆ 6 ಗಂಟೆಗೆಲ್ಲಾ ಎದ್ದು ವಾಕಿಂಗ್ ಮಾಡಿ ನಂತರ ಮಾಜಿ ಸಚಿವರು ಉಪಾಹಾರಕ್ಕೆ ಉಪ್ಪಿಟ್ಟು ಸೇವನೆ ಮಾಡಿದರು. ಸದ್ಯ ಬೇಗ್ರನ್ನು ಕ್ವಾರಂಟೈನ್ಗೆ ಒಳಪಡಿಸಿರುವ ಕಾರಣ ಉಳಿದ ಯಾರೊಂದಿಗೂ ಸೇರುವಂತಿಲ್ಲ, ಮಾತನಾಡುವಂತಿಲ್ಲ. ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡೇ ಇರಲು ಮಾಜಿ ಸಚಿವರಿಗೆ ಸೂಚಿಸಲಾಗಿದೆ. ಬೇಗ್ಗೆ ತಿಂಡಿ, ಬಿಸಿ ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಜೈಲು ಸಿಬ್ಬಂದಿ ಅವರ ಕೊಠಡಿಗೇ […]

ಬೆಂಗಳೂರು: ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ಪರಪ್ಪನ ಅಗ್ರಹಾರ ಸೇರಿದ್ದಾರೆ.
ಇಂದು ಮುಂಜಾನೆ 6 ಗಂಟೆಗೆಲ್ಲಾ ಎದ್ದು ವಾಕಿಂಗ್ ಮಾಡಿ ನಂತರ ಮಾಜಿ ಸಚಿವರು ಉಪಾಹಾರಕ್ಕೆ ಉಪ್ಪಿಟ್ಟು ಸೇವನೆ ಮಾಡಿದರು. ಸದ್ಯ ಬೇಗ್ರನ್ನು ಕ್ವಾರಂಟೈನ್ಗೆ ಒಳಪಡಿಸಿರುವ ಕಾರಣ ಉಳಿದ ಯಾರೊಂದಿಗೂ ಸೇರುವಂತಿಲ್ಲ, ಮಾತನಾಡುವಂತಿಲ್ಲ. ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡೇ ಇರಲು ಮಾಜಿ ಸಚಿವರಿಗೆ ಸೂಚಿಸಲಾಗಿದೆ.
ಬೇಗ್ಗೆ ತಿಂಡಿ, ಬಿಸಿ ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಜೈಲು ಸಿಬ್ಬಂದಿ ಅವರ ಕೊಠಡಿಗೇ ತೆಗೆದುಕೊಂಡು ಹೋಗಿ ಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗೇ ರೋಷನ್ ಬೇಗ್ ಇರುವ ಕ್ವಾರಂಟೈನ್ ಸೆಲ್ನಲ್ಲಿ ಟಿವಿ ಇಲ್ಲದ ಹಿನ್ನೆಲೆಯಲ್ಲಿ ನ್ಯೂಸ್ಪೇಪರ್ಗಳನ್ನು ನೀಡುವಂತೆ ರೋಷನ್ ಬೇಗ್ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.