ರಾಜ್ಯದಲ್ಲಿ 9ನೇ ತರಗತಿ, ಪ್ರಥಮ ಪಿಯು ತರಗತಿ ಆರಂಭ.. ಯಾವಾಗಿನಿಂದ ಗೊತ್ತಾ?
ಫೆಬ್ರವರಿ 1ರಿಂದ 9ನೇ ತರಗತಿ, ಪ್ರಥಮ PU ತರಗತಿಗಳನ್ನು ಆರಂಭ ಮಾಡಲು ತೀರ್ಮಾನ ಮಾಡಲಾಗಿದ್ದು, 9, 10, 11, 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಶುರು ಮಾಡಲು ತೀರ್ಮಾನಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಕಾರಣದಿಂದಾಗಿ ಮುಚ್ಚಲಾಗಿದ್ದ ಶಾಲಾ ಕಾಲೇಜುಗಳನ್ನು ನಿಧಾನವಾಗಿ ತೆರೆಯಲಾಗುತ್ತಿದ್ದು, ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ 9ನೇ ತರಗತಿ ಹಾಗೂ ಪ್ರಥಮ PU ತರಗತಿಗಳ ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 1ರಿಂದ 9ನೇ ತರಗತಿ, ಪ್ರಥಮ PU ತರಗತಿಗಳನ್ನು ಆರಂಭ ಮಾಡಲು ತೀರ್ಮಾನ ಮಾಡಲಾಗಿದ್ದು, 9, 10, 11, 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಶುರು ಮಾಡಲು ತೀರ್ಮಾನಿಸಲಾಗಿದೆ. 6 ರಿಂದ 8ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಕಾದು ತೀರ್ಮಾನಿಸುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
1 ರಿಂದ 5ನೇ ತರಗತಿ ಆರಂಭಿಸುವ ಬಗ್ಗೆ ಸದ್ಯಕ್ಕೆ ತೀರ್ಮಾನವಿಲ್ಲ. ಉಳಿದ ತರಗತಿಗಳ ಆರಂಭಿಸುವ ಬಗ್ಗೆ ಮುಂದೆ ನಿರ್ಧಾರಿಸಲಾಗುತ್ತದೆ. ಈಗ ಆರಂಭಿಸಿರುವ ತರಗತಿಗಳಲ್ಲಿ ಮಕ್ಕಳ ಹಾಜರಾತಿ, ಶಾಲೆ ವಾತಾವರಣವನ್ನು ಗಮನಿಸಿ ಉಳಿದ ತರಗತಿಗಳನ್ನು ತೆರೆಯುವುದರ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ಶಾಲಾ ಶುಲ್ಕ ನಿಗದಿಗೆ ಪ್ರತ್ಯೇಕ ಸಲಹಾ ಸಮಿತಿ ಬೇಕಿದೆ.. ಶಾಲಾ ಶುಲ್ಕ ನಿಗದಿ ಬಗ್ಗೆ ಸಿಎಂ ಯಡಿಯೂರಪ್ಪ ಜತೆ ಚರ್ಚೆ ಮಾಡುತ್ತೇವೆ. ಸಿಎಂ ಜತೆ ಚರ್ಚಿಸಿದ ಬಳಿಕ ಶುಲ್ಕ ನಿಗದಿ ಬಗ್ಗೆ ನಿರ್ಧಾರ ಮಾಡುತ್ತೇವೆ. ನಾವು ಈ ಬಗ್ಗೆ ಪೋಷಕರಿಗೂ ಸಹ ತಿಳಿಸಿದ್ದೇವೆ. ಪೋಷಕರ ಪರಿಸ್ಥಿತಿ ಬಗ್ಗೆಯೂ ನಮಗೆ ಸಂಪೂರ್ಣ ಅರಿವಿದೆ. ವೇತನವಿಲ್ಲದೆ ಕೆಲ ಶಿಕ್ಷಕರು ಕೆಲಸ ಕಳೆದುಕೊಂಡಿದ್ದೂ ಇದೆ. ಖಾಸಗಿ ಶಾಲಾ ಶಿಕ್ಷಕರೂ ಜೀವನ ನಿರ್ವಹಣೆ ಮಾಡಬೇಕಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಜತೆ ಚರ್ಚೆ ಮಾಡುತ್ತೇವೆ. ಪೋಷಕರು ಪ್ರತಿಭಟನೆ ಮಾಡದಂತೆ ನೋಡಿಕೊಳ್ಳುತ್ತೇವೆ. ಆನ್ಲೈನ್ ಕ್ಲಾಸ್ ಬಂದ್ ಮಾಡಿದರೆ BEO ಗಳಿಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎಂದರು.
Published On - 4:22 pm, Thu, 28 January 21